Just In
- 38 min ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- 1 hr ago
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಬಿಸ್ವಜಿತ್ ಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ
- 2 hrs ago
ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್
- 4 hrs ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
Don't Miss!
- News
ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ: ಅಮಿತ್ ಶಾ
- Finance
Home Loan: ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ 15 ಬ್ಯಾಂಕ್ ಗಳು
- Sports
ಭಾರತ vs ಆಸ್ಟ್ರೇಲಿಯಾ: ಶಾರ್ದೂಲ್- ಸುಂದರ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಬಿ ಅಂತ್ಯಕ್ರಿಯೆಗೆ ಸುದೀಪ ಯಾಕೆ ಬರಲಿಲ್ಲ : ಕಿಚ್ಚ ಹೇಳಿದ ನಿಜವಾದ ಕಾರಣ
ರೆಬಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿ ತಿಂಗಳುಗಳೆ ಆಗಿವೆ. ಅಂಬಿ ನೆನಪು ಸದಾ ಅವರ ಅಭಿಮಾನಿಗಳನ್ನು, ಆಪ್ತರನ್ನು ಕಾಡುತ್ತಿದೆ. ಕರುನಾಡ ಕರ್ಣ ದೈಹಿಕವಾಗಿ ದೂರವಾದ್ರು ಅವರ ಸಿನಿಮಾ ಮತ್ತು ಅವರು ಬಿಟ್ಟು ಹೋದ ನೆನಪುಗಳ ಮೂಲಕ ಸದಾ ಎಲ್ಲರಲ್ಲು ಬೆರತು ಹೋಗಿದ್ದಾರೆ.
ರೆಬೆಲ್ ಸ್ಟಾರ್ ಗೆ ತುಂಬಾ ಆಪ್ತರ ಬಳಗದಲ್ಲಿ, ಇವರನ್ನ ಆಪ್ತರು ಎನ್ನುವುದಕ್ಕಿಂತನೂ ಅಂಬರೀಶ್ ಮಕ್ಕಳಂತೆ ಇದ್ದವರು ಅಂದ್ರೆ ದರ್ಶನ್, ಸುದೀಪ್ ಮತ್ತು ಯಶ್. ಅಂಬರೀಶ್ ಅವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಇವರಿಗೆ ಅಂಬಿ ಇಲ್ಲ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಪೈಲ್ವಾನ್ ಪಕ್ಕಾ ಆಯ್ತು, ಕುರುಕ್ಷೇತ್ರ ಗೊಂದಲವಾಗಿಯೇ ಉಳಿದಿದೆ.!
ಸುದೀಪ ಕೊನೆಯದಾಗಿ ಅಂಬರೀಶ್ ಅವರಿಗಾಗಿ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾವನ್ನು ಮಾಡುವ ಅದೃಷ್ಟ ಕಿಚ್ಚನ ಪಾಲಾಗಿತ್ತು. ಸಿನಿಮಾ ರಿಲೀಸ್ ಆಗಿ ಕೆಲವೆ ದಿನಗಳಲ್ಲಿ ಅಂಬರೀಶ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ರು. ಪಾರ್ಥೀವ ಶರೀರದ ಮುಂದೆ ನಿಂತು ಮಾಣಿಕ್ಯ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದ್ರೆ ಅಂಬರೀಶ್ ಅವರ ಕೊನೆಯಕ್ಷಣವನ್ನು ನೋಡಲು ಸಮಾಧಿ ಬಳಿ ಬಂದಿರಲ್ಲಿಲ್ಲ. ಕಿಚ್ಚ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಆದ್ರೀಗ ಈ ಬಗ್ಗೆ ಸುದೀಪ ಅವರೆ ಹೇಳಿದ್ದಾರೆ.ಮುಂದೆ ಓದಿ..

ಕಣ್ಣಾರೆ ನೋಡಲು ಸಾಧ್ಯವಿಲ್ಲ
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ ಅಂಬರೀಶ್ ಅವರ ಅಂತ್ಯಕ್ರಿಯೆ ಕೊನೆಯ ವೇಳೆ ಗೈರು ಆದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕಿಚ್ಚನಿಗೆ ತುಂಬ ಹತ್ತಿರವಾದವರನ್ನ ಇಂತಹ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲವಂತೆ. ಆ ಸ್ಥಿಯಲ್ಲಿ ನೋಡಲು ಭಯಸುವುದಿಲ್ಲವಂತೆ. ಮನಸ್ಸಿಗೆ ತುಂಬಾ ನೋವಾಗುತ್ತಂತೆ. ಹಾಗಾಗಿ ಅನೇಕರ ಅಂತ್ಯ ಕ್ರಿಯೆಯಲ್ಲಿ ಸುದೀಪ್ ಭಾಗಿಯಾಗುವುದಿಲ್ಲವಂತೆ.
ಜುಲೈ 6, ಕಿಚ್ಚ ಸುದೀಪ್ ಲೈಫ್ ಬದಲಿಸಿದ ಅದೃಷ್ಟದ ದಿನ

ಮನಸ್ಸಿಗೆ ತುಂಬ ಕಾಡುತ್ತೆ
ಕೆಲವುದನ್ನು ನನ್ನ ಕೈಯಲ್ಲಿ ನೋಡಲು ಸಾಧ್ಯವಿಲ್ಲ. ಅಂಬರೀಶ್ ಅವರು ಅಂತಲ್ಲ ಎಷ್ಟೋ ಜನರನ್ನು ಆ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಮನಸ್ಸಿಗೆ ತುಂಬ ಕಾಡುತ್ತೆ. ಕಣ್ಣಾರೆ ನೋಡಲು ಸಾಧ್ಯವೆ ಇಲ್ಲ, ಇದು ನನ್ನ ವೀಕ್ ನೆಸ್ ಅಂತ ಹೇಳಬಹುದು. ನಾನು ತುಂಬ ನೊಂದು ಕೊಳ್ಳುತ್ತೇನೆ. ಹಾಗಾಗಿ ನೋಡೋಕೆ ಇಷ್ಟಪಡಲ್ಲ.

ಸುದೀಪ ಸದಾ ನೋಡುವ ಸಿನಿಮಾ
ಕಿಚ್ಚ ಸುದೀಪ್ ಅವರು ಯಾವಾಗಲು ನೋಡುವ ಸಿನಿಮಾ ಅಂದ್ರೆ ಅಂಬಿ ನಿಂಗೆ ವಯಸ್ಸಾಯ್ತೋ. ತುಂಬ ಖುಷಿ ಕೊಟ್ಟ ಸಿನಿಮಾಗಳಲ್ಲಿ ಈ ಸಿನಿಮಾ ಕೂಡ ಒಂದು ಅಂತೆ. ಈ ಸಿನಿಮಾದ ಎಡಿಟಿಂಗ್ ಮಾಡಿದ್ದು ಸುದೀಪ ಅವರೆ. ಅಂಬರೀಶ್ ಅವರಿಗಾಗಿ ತುಂಬಾ ಪ್ರೀತಿಯಿಂದ ಮಾಡಿದ ಸಿನಿಮಾ ಇದಾಗಿದೆ. ಹಾಗಾಗಿ ಈ ಸಿನಿಮಾವನ್ನು ಮನೆಯಲ್ಲಿ ಯಾವಾಗಲು ನೋಡುತ್ತಿದ್ದಾರಂತೆ.
ಪೈಲ್ವಾನ್ ವಿತರಣೆ ಹಕ್ಕು ಪಡೆದ ಕಾರ್ತಿಕ್ ಗೌಡ

ಪೈಲ್ವಾನ್ ರಿಲೀಸ್ ಗೆ ತಯಾರಿಗೆ
ಸುದೀಪ್ ಸದ್ಯ ಪೈಲ್ವಾನ್ ಚಿತ್ರದ ರಿಲೀಸ್ ಗೆ ಎದುರುನೋಡುತ್ತಿದ್ದಾರೆ. ಈಗಾಗಲೆ ಬಹು ನಿರೀಕ್ಷೆಯನ್ನು ಮೂಡಿಸಿರುವ ಪೈಲ್ವಾನ್ ಸಿನಿಮಾ ಆಗಸ್ಟ್ 29ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಅಲ್ಲದೆ ಸುದೀಪ 'ಕೋಟಿಗೊಬ್ಬ-3' ಮತ್ತು 'ದಬಾಂಗ್ 3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.