»   » ಸುದೀಪ್ 'ಟ್ವಿಟ್ಟರ್'ನಿಂದ ಹೊರಹೋಗಲು ನಿರ್ಧರಿಸಿದ್ದರಂತೆ, ಯಾಕೆ?

ಸುದೀಪ್ 'ಟ್ವಿಟ್ಟರ್'ನಿಂದ ಹೊರಹೋಗಲು ನಿರ್ಧರಿಸಿದ್ದರಂತೆ, ಯಾಕೆ?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಸುದೀಪ್ ಇಂದು ಟ್ವಿಟ್ಟರ್ ನಲ್ಲಿ ಒಂದು ಮಿಲಿಯನ್ (10 ಲಕ್ಷ) ಫಾಲೋವರ್ಸ್ ಹೊಂದಿರುವುದು ಕನ್ನಡದ ಮಟ್ಟಿಗೆ ದೊಡ್ಡ ಸಾಧನೆ. ಇಂತಹ ಸಾಧನೆ ಮಾಡಿರುವ ಸುದೀಪ್ ಒಂದು ಸಮಯದಲ್ಲಿ ಟ್ವಿಟ್ಟರ್ ನಿಂದ ಹೊರ ಹೋಗಲು ನಿರ್ಧರಿಸಿದ್ದರಂತೆ.

ಹೌದು, ನಿರಂತರ ಅಭಿಮಾನಿಗಳ ಜೊತೆ ಟ್ವಿಟ್ಟರ್ ಮೂಲಕ ಸಂಪರ್ಕದಲ್ಲಿರುವ ಸುದೀಪ್, ಟ್ವಿಟ್ಟರ್ ಗೆ ಗುಡ್ ಬೈ ಹೇಳಲು ಮುಂದಾಗಿದ್ದರು. ಅದಕ್ಕೆ ಅವರಿಗಾದ ಬೇಸರ, ಬೇಜಾರು ಕಾರಣವಾಗಿತ್ತು.

ಹಾಗಿದ್ರೆ, ಸುದೀಪ್ ಗೆ ಟ್ವಿಟ್ಟರ್ ನಿಂದ ಹೊರ ಹೋಗುವಂತಹ ಬೇಸರ ಆಗಿದ್ದೇನು? ಯಾವ ಸಮಯದಲ್ಲಿ ಈ ನಿರ್ಧಾರ ಮಾಡಿದ್ದರು, ಮತ್ತೆ ಅವರು ಟ್ವಿಟ್ಟರ್ ನಲ್ಲಿ ಮುಂದುವರೆಯಲು ಕಾರಣವೇನು? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಟ್ವಿಟ್ಟರ್ ನಿಂದ ಖುಷಿಯಾಗಿದ್ದರು ಸುದೀಪ್

ಆರಂಭದ ದಿನಗಳಲ್ಲಿ ಟ್ವಿಟ್ಟರ್ ಉಪಯೋಗಿಸುತ್ತಿದ್ದ ಸುದೀಪ್ ತುಂಬಾ ಖುಷಿಯಾಗಿದ್ದರು. ಬಿಡುವಿದ್ದಾಗಲೇಲ್ಲ ತನಗಿದ್ದ ಹಿಂಬಾಕಲರ ಜೊತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಸುದೀಪ್ ಅವರಿಗೆ ಟ್ವಿಟ್ಟರ್ ಒಂದು ರೀತಿಯಲ್ಲಿ ಹೊಸ ಆಟಿಕೆಯಾಗಿತ್ತು.

ಸಂತೋಷ ಕಳೆದುಕೊಳ್ಳಲು ಕಾರಣವಾದ ಕ್ಷಣ

ಟ್ವಿಟ್ಟರ್ ಮೂಲಕ ನಿರಂತರ ಅಭಿಮಾನಿಗಳ ಜೊತೆ ಸಂಪರ್ಕ ಬೆಳಸಿಕೊಂಡು ಸಂತೋಷವಾಗಿದ್ದ ಸುದೀಪ್ ಅವರಿಗೆ ಒಂದು ಹಂತದಲ್ಲಿ ಕೆಟ್ಟ ಅನುಭವವಾಯಿತು. ಕೆಟ್ಟ ಕಾಮೆಂಟ್ ಗಳು, ತುಂಬಾ ಕೆಟ್ಟ ಕಾಮೆಂಟ್ ಗಳು, ಸಹಿಸಲಾಗದ ಕಾಮೆಂಟ್ ಗಳು ಬರತೊಡಗಿತು.

ಟ್ವಿಟ್ಟರ್ ತೊರೆಯುವ ನಿರ್ಧಾರ ಮಾಡಿದ್ರಂತೆ

ಇಂತಹ ಸಂದರ್ಭದಲ್ಲಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯನ್ನ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದರು. ಆದ್ರೆ, ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಸಮಯ ತೆಗೆದುಕೊಂಡ ಸುದೀಪ್, ಇದನ್ನೆಲ್ಲ ಎದುರಿಸುವ ಧೈರ್ಯ ಮಾಡಿದ್ರಂತೆ. ಹಾಗಾಗಿ, ಮತ್ತೆ ಟ್ವಿಟ್ಟರ್ ನಲ್ಲಿ ಮುಂದುವರೆಯಲು ಸಿದ್ದರಾದರು.

ಮತ್ತೊಂದು ಭಾಗದ ಅನುಭವ ನೀಡಿತು

ಈ ಪ್ರಕ್ರಿಯೆ ಸುದೀಪ್ ಅವರಿಗೆ ಮತ್ತೊಂದು ಭಾಗವನ್ನ ನೋಡುವಂತೆ ಮಾಡಿತು. ಎಲ್ಲವನ್ನ ಸ್ವೀಕರಿಸುವ ತಾಳ್ಮೆಯನ್ನ ಕಲಿತುಕೊಂಡರಂತೆ. ಇದರ ಜೊತೆ ಜೊತೆ ಸ್ನೇಹಿತರನ್ನ ಸಂಪಾದಿಸುತ್ತಾ ಬಂದರು. ಹೀಗೆ, ಕಳೆದು ಹೋಗಿದ್ದ ಸಂತೋಷ ಮತ್ತೆ ವಾಪಸ್ ಆಯಿತು.

1 ಲಕ್ಷ ಫಾಲೋವರ್ಸ್ ಆದಾಗ ಸಂತೋಷ

ಟ್ವಿಟ್ಟರ್ ನಲ್ಲಿ ಒಂದು ಲಕ್ಷ ಫಾಲೋವರ್ಸ್ ಆದಾಗ ಸುದೀಪ್ ಅವರ ಸಂತೋಷಕ್ಕೆ ಪಾರವೆ ಇರಲಿಲ್ಲ. ಅಲ್ಲಿಂದ ಎರಡು, ಮೂರು ಹೀಗೆ ಕೆಲವರನ್ನ ಟ್ವಿಟ್ಟರ್ ನಲ್ಲಿ ಸುದೀಪ್ ಕೂಡ ಹಿಂಬಾಲಿಸುತ್ತಾ ಬಂದರು. ಈಗ ಆ ಸಂಖ್ಯೆ ಒಂದು ಮಿಲಿಯನ್ ಗೆ ಬಂದು ನಿಂತಿದೆ.

ನನ್ನನ್ನು ನೀವು ಶ್ರೀಮಂತನಾಗಿಸಿದ್ದೀರಿ

''ನಾನು ಜೀವನದಲ್ಲಿ ಏನೋ ಒಳ್ಳೆಯದು ಮಾಡಿದ್ದೀನಿ , ಅದರ ಪ್ರತಿಫಲವೇ ನಿಮ್ಮ ಮನಸ್ಸಿನಲ್ಲಿ ಈ ಪುಟ್ಟ ಜಾಗ ಸಂಪಾದಿಸುವಂತೆ ಮಾಡಿದೆ ಎಂಬ ಖುಷಿ ನನಗೆ ಸಿಕ್ಕಿದೆ. ನನ್ನೆಲ್ಲ ಸುಂದರ ಸ್ನೇಹಿತರಾದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು'' ಎಂದು ಸುದೀಪ್ ಸಂತಸ ವ್ಯಕ್ತಪಡಿಸುತ್ತಾರೆ.

ಕಿಚ್ಚ ಸುದೀಪ್ 'ಟ್ವಿಟ್ಟರ್'ಗೆ ಬರಲು ಆ 'ಒಬ್ಬ' ನಟ ಕಾರಣ?

English summary
Kannada Actor Kiccha Sudeep decided to leave Twitter in one stage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada