»   » 'ನೊಣ'ದೊಂದಿಗೆ ಸೆಣಸಾಡಿದ 'ಹೆಬ್ಬುಲಿ'ಗೆ ರಾಜ್ಯ ಪ್ರಶಸ್ತಿ: Congrats ಸುದೀಪ್

'ನೊಣ'ದೊಂದಿಗೆ ಸೆಣಸಾಡಿದ 'ಹೆಬ್ಬುಲಿ'ಗೆ ರಾಜ್ಯ ಪ್ರಶಸ್ತಿ: Congrats ಸುದೀಪ್

Posted By:
Subscribe to Filmibeat Kannada

2012ನೇ ಸಾಲಿನ ಆಂಧ್ರ ಸರ್ಕಾರದ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಕೆಚ್ಚೆದೆಯ ಕಿಚ್ಚ... ಅಭಿನಯ ಚಕ್ರವರ್ತಿ... ಕಿಚ್ಚ ಸುದೀಪ್ ಗೆ ಪ್ರತಿಷ್ಟಿತ 'ನಂದಿ ಪ್ರಶಸ್ತಿ' ಲಭಿಸಿದೆ.

2012ನಲ್ಲಿ ತೆರೆಕಂಡ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 'ಈಗ' ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ಕಿಚ್ಚ ಸುದೀಪ್ ರವರಿಗೆ 'ಅತ್ಯುತ್ತಮ ಖಳನಾಯಕ' ಪ್ರಶಸ್ತಿ ಸಿಕ್ಕಿದೆ.

ಪ್ರಶಸ್ತಿಗಳನ್ನು ಘೋಷಿಸಿದ ನಟಿ ಜಯಸುಧಾ

ಆಂಧ್ರದ ಅಮರಾವತಿಯಲ್ಲಿ ಇಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ ನಟಿ ಜಯಸುಧಾ 2012ನೇ ಸಾಲಿನ 'ನಂದಿ ಪ್ರಶಸ್ತಿ' ಪ್ರಕಟ ಮಾಡಿದರು. 'ಈಗ' ಚಿತ್ರದಲ್ಲಿನ ಅಭಿನಯಕ್ಕೆ 'ಅತ್ಯುತ್ತಮ ಖಳನಟ' ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ ಸುದೀಪ್ ಸಂತಸ ವ್ಯಕ್ತಪಡಿಸಿದರು.['ಈಗ' ಚಿತ್ರವಿಮರ್ಶೆ: ಕಿಚ್ಚ ಸುದೀಪ್ ಒನ್ ಮ್ಯಾನ್ ಶೋ]

ಪ್ರಶಸ್ತಿಯನ್ನು ನಿರ್ದೇಶಕ ರಾಜಮೌಳಿಗೆ ಅರ್ಪಿಸಿದ ಸುದೀಪ್

''ನನ್ನನ್ನ 'ಈಗ' ಚಿತ್ರದ ಭಾಗವಾಗಿ ಮಾಡಿದ ರಾಜಮೌಳಿ ರವರಿಗೆ ಮತ್ತೊಮ್ಮೆ ಧನ್ಯವಾದಗಳು. ಈ ಪ್ರಶಸ್ತಿಯನ್ನ ನಾನು ನಿಮಗೆ ಅರ್ಪಿಸುತ್ತಿದ್ದೇನೆ'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.[ಕಿಚ್ಚ ಸುದೀಪ್ ಅಭಿನಯಕ್ಕೆ ಆಂಧ್ರ ಸರ್ಕಾರದಿಂದ 'ರಾಜ್ಯ ಪ್ರಶಸ್ತಿ']

'ಈಗ' ಚಿತ್ರದ ನಿರ್ದೇಶಕರಿಗೂ ಸಿಕ್ಕಿದೆ ಪ್ರಶಸ್ತಿ

2012ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ 'ಈಗ' ಪಾಲಾಗಿದೆ. 'ಈಗ' ಚಿತ್ರದ ನಿರ್ದೇಶನ ಮತ್ತು ಚಿತ್ರಕಥೆಗೆ ಎಸ್.ಎಸ್.ರಾಜಮೌಳಿ 'ಅತ್ಯುತ್ತಮ ನಿರ್ದೇಶಕ' ಹಾಗೂ 'ಅತ್ಯುತ್ತಮ ಚಿತ್ರಕಥೆ' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

'ಈಗ' ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

ಅತ್ಯುತ್ತಮ ಛಾಯಾಗ್ರಹಣ - ಸೇಂಥಿಲ್ ಕುಮಾರ್ (ಈಗ)

ಅತ್ಯುತ್ತಮ ಸಂಗೀತ ನಿರ್ದೇಶನ - ಕೀರವಾಣಿ (ಈಗ)

ಅತ್ಯುತ್ತಮ ಸಂಕಲನ - ಕೊಟಗಿವಿ ವೆಂಕಟೇಶ್ವರ ರಾವ್ (ಈಗ)

ಅತ್ಯುತ್ತಮ ವಿ.ಎಫ್.ಎಕ್ಸ್ - ಈಗ

'ನೊಣ'ದ ಜೊತೆ 'ಹೆಬ್ಬುಲಿ' ಸೆಣಸಾಟ

ಸ್ಯಾಂಡಲ್ ವುಡ್ ನಲ್ಲಿ 'ಸ್ಟಾರ್ ಹೀರೋ' ಆಗಿರುವ ಸುದೀಪ್, ತೆಲುಗಿನ 'ಈಗ' ಚಿತ್ರದಲ್ಲಿ ನೊಣದೊಂದಿಗೆ ಸೆಣಸಾಡುವ ಖತರ್ನಾಕ್ ಕೇಡಿ ಪಾತ್ರದಲ್ಲಿ ಮಿಂಚಿದ್ದರು. ಪಾತ್ರ ಏನೇ ಆಗಿರಲಿ, ಸುದೀಪ್ ರವರ ಅಮೋಘ ಅಭಿನಯ ಗುರುತಿಸಿ ಆಂಧ್ರ ಸರ್ಕಾರ ರಾಜ್ಯ ಪ್ರಶಸ್ತಿ ಘೋಷಿಸಿದೆ. ನಮ್ಮ ಕನ್ನಡದ ಕಿಚ್ಚನಿಗೆ ಅಭಿನಂದನೆ ಸಲ್ಲಿಸೋಣ. ನಿಮ್ಮ ಶುಭಾಶಯಗಳನ್ನು ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ...

English summary
Kannada Actor Kiccha Sudeep has dedicated his 'Best Villain - Nandi Award' to director SS Rajamouli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada