»   » 'ಥಗ್ಸ್ ಆಫ್ ಮಾಲ್ಗುಡಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್

'ಥಗ್ಸ್ ಆಫ್ ಮಾಲ್ಗುಡಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಹಾಗೂ ಕಿಚ್ಚ ಸುದೀಪ್ ಜೋಡಿಯಲ್ಲಿ ಮೂಡಿ ಬರಬೇಕಿದ್ದ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆ ಕಳೆದ ಎರಡ್ಮೂರು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆ. ಸಿನಿಮಾ ನಿಂತೋಯ್ತಂತೆ, ಸುದೀಪ್ ಮಾಡಲ್ವಂತೆ, ರಕ್ಷಿತ್ ಶೆಟ್ಟಿ ಮಾಡ್ತಾರಂತೆ......ಹೀಗೆ ವಿಭಿನ್ನ ವಿಭಿನ್ನವಾದ ಸುದ್ದಿಗಳು ಹರಿದಾಡುತ್ತಿದೆ.

ಈ ಸಿನಿಮಾಗೆ ಸಂಬಂಧಪಟ್ಟಂತೆ ರಕ್ಷಿತ್ ಶೆಟ್ಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿನಿಮಾ ತಡವಾಗಲಿದೆ ಎಂಬ ಸೂಚನೆ ಕೊಟ್ಟಿದ್ದರು. ಆದ್ರೆ, ಕಿಚ್ಚ ಸುದೀಪ್ ಅವರ ಕಡೆಯಿಂದ ಈ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಹಿರಿಯ ಪತ್ರಕರ್ತ ಜೋಗಿ ಅವರ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್ ಎಲ್ಲ ಊಹಾಪೂಹಾಗಳಿಗೆ ತೆರೆ ಎಳೆದರು.

'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ....

'ಥಗ್ಸ್ ಆಫ್ ಮಾಲ್ಗುಡಿ' ನಿಂತಿರುವುದು ನಿಜ

'ಥಗ್ಸ್ ಆಫ್ ಮಾಲ್ಗುಡಿ' ಚಿತ್ರ ನಿಂತು ಹೋಗಿರುವುದು ನಿಜ ಎಂದು ಸ್ವತಃ ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ.

ಸುದೀಪ್ ಕೊಟ್ಟ ಸ್ಪಷ್ಟನೆ

''ಥಗ್ಸ್ ಆಫ್ ಮಾಲ್ಗುಡಿ ಮಾಡ್ತಿನಿ ಎಂದು ಅವರು ಘೋಷಣೆ ಮಾಡಿ ಬಹುಶಃ ಮೂರು ವರ್ಷ ಆಯಿತು. ಮಾಡೋಣ ಅಂತ ಅಂದುಕೊಂಡಿದ್ವಿ. ಆದ್ರೆ, ಹೋಗ್ತಾ ಹೋಗ್ತಾ......ಅವರು ಬಿಜಿ ಇದ್ದಾರೆ. ಇನ್ನು ಮುಂದೆ ಕಷ್ಟವಾಗಬಹುದೇನೋ'' - ಸುದೀಪ್, ನಟ

ನನಗೆ ಆಗುತ್ತೆ ಎನ್ನುವ ಭರವಸೆ ಇಲ್ಲ

''ಒಂದು ಕಡೆ ಬಿಜಿ ಇರಬೇಕಾದ್ರೆ ಕರೆದು, ಆವಾಗ ಡೇಟ್ ಕೇಳಿದ್ರಿ ಎಂದು ನೆನಪಿಸಿ ಈಗ ಸಿನಿಮಾ ಮಾಡಿ ಎನ್ನುವುದು ತಪ್ಪಾಗಬಹುದೇನೋ. ಬೆಳೆಯವವರಿಗೆ ಬೆಳೆಯಲು ಬಿಟ್ಟು ಬಿಡಬೇಕು. ನಾವು ಮುಂದೆ ಹೋಗ್ತಾ ಇರ್ಬೇಕು. ಸದ್ಯದ ಮಟ್ಟಿಗೆ ಥಗ್ಸ್ ಆಫ್ ಮಾಲ್ಗುಡಿ ಆಗುತ್ತೆ ಎನ್ನುವ ಭರವಸೆ ಇಲ್ಲ'' ಸುದೀಪ್, ನಟ

ರಕ್ಷಿತ್ ಶೆಟ್ಟಿ ಹೇಳುವುದೇನು?

ಸಿನಿಮಾ ಮಾಡುವುದು ತಡವಾಯಿತು. ನಾನು ಬೇರೆ ಚಿತ್ರಗಳಲ್ಲಿ ಬಿಜಿ ಇದ್ದ ಕಾರಣ ಥಗ್ಸ್ ಆಫ್ ಮಾಲ್ಗುಡಿ ಶುರು ಮಾಡಲು ಸಾಧ್ಯವಾಗಲಿಲ್ಲ. ಅಂದುಕೊಂಡಂತೆ ಆಗಿದ್ದರೇ, ಜೂನ್ ಗೆ ಆರಂಭವಾಗಬೇಕಿತ್ತು. ಈಗ ಸುದೀಪ್ ಅವರೇ ಬೇಡವೆಂದಿದ್ದಾರೆ. ಹಾಗಂತ ನಾನು ಪ್ರಾಜೆಕ್ಟ್ ಡ್ರಾಪ್ ಮಾಡಲ್ಲ''

ಸುದೀಪ್ ಬಿಟ್ಟರೇ ಬೇರೆ ಯಾರಿಗೂ ಮಾಡಲ್ಲ

''ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಥಗ್ಸ್ ಆಫ್ ಮಾಲ್ಗುಡಿ ಸ್ಕ್ರಿಪ್ಟ್ ಶುರು ಮಾಡುತ್ತೇನೆ. ಎಲ್ಲ ಮುಗಿದ ಮೇಲೆ ಮತ್ತೆ ಸುದೀಪ್ ಅವರ ಬಳಿ ಹೋಗುತ್ತೇನೆ. ಅವರಿಗೆ ಆಸಕ್ತಿ ಇದ್ದರೆ ಖಂಡಿತಾ ಮಾಡುತ್ತೇನೆ. ಇಲ್ಲವಾದಲ್ಲಿ, ಬೇರೆ ಯಾರಿಗೂ ಈ ಸ್ರಿಪ್ಟ್ ಮಾಡಲ್ಲ'' ಎಂದಿದ್ದಾರೆ.

English summary
kichcha sudeep dropped rakshit shetty directorial Movie Thugs Of Malgudi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada