ಸುದೀಪ್ ಅವರನ್ನೇ ಮೀರಿಸಿದ ಅಭಿಮಾನಿ: ಇದು 'ಪೈಲ್ವಾನ್' ಎಫೆಕ್ಟ್
Recommended Video

ಅಭಿಮಾನಿಗಳೇ ಹೀಗೆ. ತಮ್ಮ ನೆಚ್ಚಿನ ನಟರು ಏನೇ ಮಾಡಿದ್ರು ಅದನ್ನ ಫಾಲೋ ಮಾಡ್ತಾರೆ. ಹೇರ್ ಸ್ಟೈಲ್, ಬಟ್ಟೆ, ಬೈಕ್, ಕಾರು, ಗಡ್ಡ, ಮೀಸೆ ಯಾವುದ್ರಲ್ಲೇ ಸ್ಟೈಲ್ ಮಾಡಿದ್ರು ಫ್ಯಾನ್ಸ್ ಕೂಡ ಅದನ್ನ ಟ್ರೆಂಡ್ ಮಾಡ್ತಾರೆ. ಅಭಿಮಾನನಕ್ಕಾಗಿ ಇದು ಸಾಮಾನ್ಯ ಎನ್ನಬಹುದು.
ಆದ್ರೆ, ಇಲ್ಲೊಬ್ಬ ಸುದೀಪ್ ಅಭಿಮಾನಿ ಭಾರಿ ಕೆಲಸವೊಂದನ್ನ ಮಾಡಿದ್ದಾರೆ. ಸುದೀಪ್ 'ಪೈಲ್ವಾನ್' ಚಿತ್ರಕ್ಕಾಗಿ ವರ್ಕೌಟ್ ಮಾಡ್ತಿದ್ದನ್ನ ನೋಡಿದ ಈ ಅಭಿಮಾನಿ, ಈಗ ಸುದೀಪ್ ಅವರೇ ದಂಗಾಗುವಂತೆ ಮಾಡಿದ್ದಾರೆ.
ಹೌದು, ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರಕ್ಕಾಗಿ ತಮ್ಮ ದೇಹದ ತೂಕ ಇಳಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಈಗ ಅಭಿಮಾನಿಯೊಬ್ಬ ದೇಹವನ್ನ ದಂಡಿಸಿ, ತಾವು ಕೂಡ ತಮ್ಮ ತೂಕವನ್ನ ಇಳಿಸಿಕೊಂಡಿರುವ ಬಗ್ಗೆ ಹಂಚಿಕೊಂಡಿದ್ದಾರೆ. ಈ ಅಭಿಮಾನಿ ಎಷ್ಟು ತೂಕ ಇಳಿಸಿಕೊಂಡಿದ್ದಾನೆ ಎಂದು ನೋಡಿದ್ರೆ, ನೀವು ಶಾಕ್ ಆಗ್ತೀರಾ. ಮುಂದೆ ಓದಿ.....

ಸುದೀಪ್ ನೋಡಿ ವರ್ಕೌಟ್ ಆರಂಭಿಸಿದ
ಸುಧೀಂದ್ರ ಕುಲಕರ್ಣಿ ಎಂಬ ಸುದೀಪ್ ಅಭಿಮಾನಿಯೊಬ್ಬರು ತಮ್ಮ ದೇಹದ ತೂಕವನ್ನ ಇಳಿಸಿಕೊಂಡಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಸುದೀಪ್ ವರ್ಕೌಟ್ ಶುರು ಮಾಡಿದಾಗೆ, ಅವರನ್ನ ನೋಡಿ ಸುಧೀಂದ್ರ ಅವರು ಕೂಡ ಆರಂಭಿಸಿದರಂತೆ. ಅದರ ಪ್ರತಿಫಲವಾಗಿ ಈಗ ಭಾರಿ ವ್ಯತ್ಯಾಸವನ್ನೇ ಕಂಡಿದ್ದಾರೆ.

25 ಕೆಜಿ ಕಡಿಮೆ ಆಗಿದೆಯಂತೆ
ಸತತ ನಾಲ್ಕು ತಿಂಗಳು ವರ್ಕೌಟ್ ಮಾಡಿದ ಈತ ಬರೋಬ್ಬರಿ 25 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇನ್ನು ಸೊಂಟದ ಅಳತೆ ಕೂಡ ಭಾರಿ ಕಡಿಮೆಯಾಗಿದ್ದು, ಮೊದಲು 44 ಇತ್ತಂತೆ. ಈಗ 36 ಇದೆಯಂತೆ. ಮೊದಲು ದಡೂತಿ ದೇಹ ಹೊಂದಿದ್ದ ಸುಧೀಂದ್ರ ಈಗ ಸ್ಲಿಮ್ ಆಗಿ ಹೀರೋ ರೀತಿ ಫೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಿದೆ.

ಸುಧೀಂದ್ರ ವರ್ಕೌಟ್ ಹೇಗೆ.?
ಸುಧೀಂದ್ರ ಕುಲಕರ್ಣಿ ಅವರ ವರ್ಕೌಟ್ ರಿಸಲ್ಟ್ ನೋಡಿದ ಜನಸಾಮಾನ್ಯರು ಅವರ ಗುಟ್ಟೇನು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಧೀಂದ್ರ ''ದಿನಕ್ಕೆ 2 ಗಂಟೆ ಜಿಮ್ ಹಾಗೂ ಅದಕ್ಕೆ ಸರಿಯಾದ ಡಯಟ್ ಪ್ಲಾನ್'' ಎಂದು ಉತ್ತರಿಸಿದ್ದಾರೆ.

ಸುದೀಪ್ ಎಷ್ಟು ಕೆಜಿ ಇದ್ದಾರೆ.?
ಇನ್ನು 'ಪೈಲ್ವಾನ್' ಚಿತ್ರಕ್ಕಾಗಿ 16 ಕೆಜಿ ತೂಕ ಇಳಿಸಿಕೊಂಡಿರುವ ಸುದೀಪ್, ಈಗ 73 ಕೆಜಿ ಇದ್ದಾರೆ. ಈ ಮೊದಲು 89 ಕೆಜಿ ತೂಕ ಇದ್ದರು. ಸೊಂಟದ ಅಳತೆ 36 ಇತ್ತು. ಈಗ 31.5 ಸುದೀಪ್ ಸೊಂಟದ ಅಳತೆ ಹೊಂದಿದ್ದಾರೆ.


Click it and Unblock the Notifications











