For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಹುಟ್ಟುಹಬ್ಬಕ್ಕೆ ಕೋಣ ಬಲಿ ಕೊಟ್ಟ ಅಭಿಮಾನಿಗಳು

  |

  ಇಂದು ನಟ ಸುದೀಪ್‌ ಹುಟ್ಟುಹಬ್ಬ. ಕೋವಿಡ್ ಇರುವ ಕಾರಣ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ ನಟ. ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುವುದು ಬೇಡವೆಂದು ಅಭಿಮಾನಿಗಳಲ್ಲಿ ಸುದೀಪ್ ಮನವಿ ಸಹ ಮಾಡಿದ್ದರು. ಆದರೆ ಹಲವರು ನೆಚ್ಚಿನ ನಟನ ಮಾತಿಗೆ ಮನ್ನಣೆ ನೀಡಿಲ್ಲ.

  ನೆಚ್ಚಿನ ನಟನ ಫೊಟೊಗೆ ರಕ್ತದ ಸಿಂಧೂರ ಇಡುವುದು, ಹಾಲಿನಭಿಷೇಕ ಮಾಡುವುದು ಸಾಮಾನ್ಯ ಆದರೆ ಸುದೀಪ್ ಹುಟ್ಟುಹಬ್ಬಕ್ಕೆ ಅವರ ಕೆಲವು ಅಭಿಮಾನಿಗಳು ಕೋಣ ಬಲಿ ನೀಡಿ ಅತಿರೇಕ ಮೆರೆದಿದ್ದಾರೆ.

  ಬಳ್ಳಾರಿಯ ಸಂಡೂರಿನ ಬಂಡ್ರಿ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಕಿಚ್ಚ ಸುದೀಪ್‌ರ ಕಟೌಟ್ ಮುಂದೆ ಕೋಣ ಬಲಿ ನೀಡಿದ್ದಾರೆ. ಅಭಿಮಾನಿಗಳು ಹೀಗೆ ಕೋಣ ಬಲಿ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಸುದೀಪ್ ಅಭಿಮಾನಿಗಳು ಹೀಗೆ ಪ್ರಾಣಿ ಬಲಿ ನೀಡಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಕೇಳಿ ಬರುತ್ತಿದೆ. ಕೋಣ ಬಲಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಹಲವರು ಈ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  ಈ ಹಿಂದೆ ಸುದೀಪ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದ 'ದಿ ವಿಲನ್' ಸಿನಿಮಾದ ಯಶಸ್ಸಿಗೆ ಹಾರೈಸಿ ಕೋಣವನ್ನು ಬಲಿ ಕೊಡಲಾಗಿತ್ತು. ಆಗಲೂ ತೀವ್ರ ಅಸಮಾಧಾನ ಎದ್ದಿತ್ತು.

  ಹುಟ್ಟುಹಬ್ಬದಂದು ಅಭಿಮಾನಿಗಳು ಮನೆಯ ಬಳಿ ಬರಬೇಡಿ ಎಂದು ಸುದೀಪ್ ಮನವಿ ಮಾಡಿದ್ದರೂ. ಆದರೂ ಸಹ ಇಂದು ಸುದೀಪ್ ಮನೆ ಮುಂದೆ ನೂರಾರು ಮಂದಿ ಅಭಿಮಾನಿಗಳು ಜಮಾಯಿಸಿ, ಸುದೀಪ್ ಪರ ಘೋಷಣೆಗಳನ್ನು ಕೂಗಿದರು.

  ನಟ ಸುದೀಪ್‌ ಹುಟ್ಟುಹಬ್ಬಕ್ಕೆ ಸಿನಿ ತಾರೆಯರು ಸೇರಿದಂತೆ ಹಲವಾರು ಮಂದಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸಹ ಸುದೀಪ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವುದು ವಿಶೇಷ.

  English summary
  Actor Sudeep fans in ballari's Sandooru beheaded buffalo on their favorite actors birthday. Video went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X