For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ದರ್ಶನ್ ಅಭಿಮಾನಿಗೆ ಬುದ್ಧಿ ಕಲಿಸಿದ ಕಿಚ್ಚನ ಅಭಿಮಾನಿಗಳು

  |

  ನೆರೆ-ಹೊರೆಯ ಇತರೆ ಸಿನಿಮಾ ರಂಗಗಳಿಗೆ ಹೋಲಿಸಿಕೊಂಡರೆ ಕನ್ನಡದಲ್ಲಿ ಸ್ಟಾರ್ ವಾರ್‌ ತುಸು ಕಡಿಮೆಯೇ. ಆದರೂ ಕೆಲವೊಮ್ಮೆ ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಬಗ್ಗೆ ತುಚ್ಛವಾಗಿ ಮಾತನಾಡಿ ವಿವಾದಸ ಎಬ್ಬಿಸುತ್ತಿರುತ್ತಾರೆ. ಈಗಲೂ ಹೀಗೆಯೇ ಆಗಿದೆ.

  ಸುದೀಪ್ ಹುಚ್ಚ,ಡಿ ಬಾಸ್ ಮುಂದೆ ಬಚ್ಚಾ ಅಂದವನಿಗೆ ಸುದೀಪ್ ಫ್ಯಾನ್ಸ್ ಮಾಡಿದ್ದೇನು? | Filmibeat Kannada

  ಗುರುವಾರವಷ್ಟೆ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆಯನ್ನು ದರ್ಶನ್ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಆದರೆ ಈ ಸಂದರ್ಭ ಯಾವುದೋ ಚಿತ್ರಮಂದಿರದ ಮುಂದೆ ಆಚರಣೆಯಲ್ಲಿ ತೊಡಗಿದ್ದ ದರ್ಶನ್ ಅಭಿಮಾನಿ ಹರೀಶ್‌ ಎಂಬಾತ ಸುದೀಪ್ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾನೆ.

  ರಾಬರ್ಟ್ ಪೈರಸಿ: 'ಬಿಗ್ ಬ್ರದರ್ಸ್' ವಿರುದ್ಧ ಉಮಾಪತಿ ಶ್ರೀನಿವಾಸ್ ಗುಡುಗು

  'ಸುದೀಪ್ ಸ್ವಲ್ಪ ಹುಚ್ಚ, ಡಿ-ಬಾಸ್ ಮುಂದೆ ಬಚ್ಚಾ' ಎಂಬ ಮಾತನ್ನು ಹೇಳಿಕೊಂಡು ಕುಣಿದಿದ್ದಾನೆ ಹರೀಶ್. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದೀಪ್ ಅಭಿಮಾನಿಗಳ ಕಣ್ಣಿಗೆ ಬಿದ್ದು ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

  ಸುದೀಪ್ ಬಗ್ಗೆ ಮಾತನಾಡಿದ್ದ ದರ್ಶನ್ ಅಭಿಮಾನಿ ಸಿಕ್ಕಿಬಿದ್ದ

  ಸುದೀಪ್ ಬಗ್ಗೆ ಮಾತನಾಡಿದ್ದ ದರ್ಶನ್ ಅಭಿಮಾನಿ ಸಿಕ್ಕಿಬಿದ್ದ

  ದರ್ಶನ್ ಪರವಹಿಸಿ ಸುದೀಪ್ ಬಗ್ಗೆ ಮಾತನಾಡಿದ್ದ ಆ ಅಭಿಮಾನಿಯನ್ನು ಹುಡುಕಿರುವ ಸುದೀಪ್ ಅಭಿಮಾನಿಗಳು, 'ನಿನ್ನ ಅಭಿಮಾನ ಇದ್ದರೆ ನೀನು ತೋರಿಸಿಕೊ, ಇನ್ನೊಬ್ಬ ನಟನ ಬಗ್ಗೆ ನೀನು ಹೇಗೆ ಮಾತನಾಡಿದೆ' ಎಂದು ಪ್ರಶ್ನೆ ಮಾಡಿದ್ದಾರೆ.

  'ಸುದೀಪ್ ಅಣ್ಣನ ಬಗ್ಗೆ ಮಾತನಾಡಿದ್ದು ತಪ್ಪಾಯಿತು ಕ್ಷಮಿಸಿ'

  'ಸುದೀಪ್ ಅಣ್ಣನ ಬಗ್ಗೆ ಮಾತನಾಡಿದ್ದು ತಪ್ಪಾಯಿತು ಕ್ಷಮಿಸಿ'

  ಸುದೀಪ್ ಅಭಿಮಾನಿಗಳ ಮಾತಿಗೆ ಬಗ್ಗಿರುವ ದರ್ಶನ್ ಅಭಿಮಾನಿ ಹರೀಶ್, 'ದರ್ಶನ್ ಸಿನಿಮಾ ಬಿಡುಗಡೆ ಆಗಿದ್ದಾಗ. ಸುದೀಪ್ ಅಣ್ಣನ ಬಗ್ಗೆ ಮಾತನಾಡಿದ್ದು ತಪ್ಪಾಗಿದೆ ಇನ್ನೊಮ್ಮೆ ಹೀಗೆ ಮಾತನಾಡುವುದಿಲ್ಲ. ಸುದೀಪ್ ಅಣ್ಣನ ಬಗ್ಗೆ ಮಾತನಾಡಿದ್ದಕ್ಕೆ ನನಗೂ ಬೇಜಾರಾಗಿದೆ ಕ್ಷಮಿಸಿ' ಎಂದು ಕ್ಷಮೆ ಕೇಳಿದ್ದಾನೆ.

  'ರಾಬರ್ಟ್' ಹೆಸರಲ್ಲಿ ನಡೆಯುತ್ತಿದೆ ಮೋಸ: ಎಚ್ಚರ ಎಂದ ನಿರ್ಮಾಪಕ

  ಮನವಿ ಮಾಡಿದ ಸುದೀಪ್ ಅಭಿಮಾನಿಗಳು

  ಮನವಿ ಮಾಡಿದ ಸುದೀಪ್ ಅಭಿಮಾನಿಗಳು

  ನಂತರ ಮಾತನಾಡಿರುವ ಸುದೀಪ್ ಅಭಿಮಾನಿಗಳು, 'ಎಲ್ಲ ನಾಯಕ ನಟರ ಅಭಿಮಾನಿಗೆ ಮನವಿ ಮಾಡುವುದೆಂದರೆ ನಿಮ್ಮ ಮೆಚ್ಚಿನ ನಾಯಕನನ್ನು ಹೊಗಳುವ ಭರದಲ್ಲಿ ಮತ್ತೊಬ್ಬ ನಾಯಕನನ್ನು ತೆಗಳಬೇಡಿ. ಸಿನಿಮಾ ಬಿಡುಗಡೆ ಆದಾಗ ನಿಮ್ಮ ಸಂಭ್ರಮಕ್ಕೆ ನೀವು ಏನಾದರೂ ಮಾಡಿ ಆದರೆ ಮತ್ತೊಬ್ಬ ನಟನನ್ನು ನಿಂದಿಸಬೇಡಿ' ಎಂದಿದ್ದಾರೆ.

  ಮತ್ತೊಬ್ಬ ನಾಯಕ ನಟನ ತೇಜೋವಧೆ ಬೇಡ: ಮನವಿ

  ಮತ್ತೊಬ್ಬ ನಾಯಕ ನಟನ ತೇಜೋವಧೆ ಬೇಡ: ಮನವಿ

  'ಒಬ್ಬ ನಾಯಕನ ನಟನ ಅಭಿಮಾನಿಗಳು ಮತ್ತೊಬ್ಬ ನಟನ ತೇಜೋವಧೆ ಮಾಡುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈಗಲೇ ಮೊದಲ ಬಾರಿಗೆ ಕಂಡು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಇಲ್ಲ. ಹೀಗೆ ಮತ್ತೊಬ್ಬ ನಟನನ್ನು ತೇಜೋವಧೆ ಮಾಡುವುದು ಸ್ವತಃ ನಿಮ್ಮ ಹೀರೋ ಗೂ ಇಷ್ಟವಾಗುವುದಿಲ್ಲ' ಎಂದಿದ್ದಾರೆ ಸುದೀಪ್ ಅಭಿಮಾನಿಗಳು.

  English summary
  Sudeep fans caught Darshan fan who talked lightly about Sudeep and made him to apologies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X