»   » 'ಅನ್ನದಾತರ ಅನ್ನದಾತ' ಅಂದ್ರೇನು? ಮೊದಲು ಅರ್ಥ ತಿಳ್ಕೊಳ್ಳಿ.!

'ಅನ್ನದಾತರ ಅನ್ನದಾತ' ಅಂದ್ರೇನು? ಮೊದಲು ಅರ್ಥ ತಿಳ್ಕೊಳ್ಳಿ.!

Posted By:
Subscribe to Filmibeat Kannada

'ಅನ್ನದಾತರ ಅನ್ನದಾತ' ಅಂತ ಕಿಚ್ಚ ಸುದೀಪ್ ಗೆ 'ಕೋಟಿಗೊಬ್ಬ-2' ಚಿತ್ರತಂಡ ಬಿರುದು ನೀಡಿದ ಸಂಗತಿ ನಿಮಗೆ ಗೊತ್ತಿದೆ. ಹಾಗೇ, ಈ ಬಿರುದು ನೋಡಿ, ಕನ್ನಡದ ಮಣ್ಣಿನ ಮಕ್ಕಳು ರೊಚ್ಚಿಗೆದ್ದು ಫೇಸ್ ಬುಕ್ ನಲ್ಲಿ ಸಮರ ಸಾರಿದ ವಿಚಾರವನ್ನು ನಾವೇ ನಿಮಗೆ ಹೇಳಿದ್ವಿ.

'ಅನ್ನದಾತ' ಅಂದ್ರೆ ರೈತ. ಸಾಲದ ಶೂಲದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಸಹಾಯ ಮಾಡದ ಸುದೀಪ್ ಗೆ 'ಅನ್ನದಾತರ ಅನ್ನದಾತ' ಎಂಬ ಬಿರುದು ಯಾಕೆ ಕೊಡ್ಬೇಕು ಅಂತ ಅಪ್ಪಟ ಕನ್ನಡಿಗರು ಕಣ್ಣು ಕೆಂಪಗೆ ಮಾಡಿಕೊಂಡಿದ್ದರು. ['ಅನ್ನದಾತರ ಅನ್ನದಾತ' ಸುದೀಪ್ ಬಗ್ಗೆ ಫೇಸ್ ಬುಕ್ ನಲ್ಲಿ ಘೋರ ಸಮರ.!]

ಅಂಥವರಿಗೆ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ ತಿರುಗೇಟು ನೀಡಿದೆ. 'ಅನ್ನದಾತರ ಅನ್ನದಾತ' ಎಂಬ ಬಿರುದಿನ ಅರ್ಥ ವಿವರಿಸಿದೆ.

sudeep-fans-explains-the-meaning-of-annadatara-annadata-title

ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳ ಪ್ರಕಾರ, 'ಅನ್ನದಾತ' ಅಂದ್ರೆ ನಿರ್ಮಾಪಕ. ರೈತ ಅಲ್ಲ.! 'ಅನ್ನದಾತರ ಅನ್ನದಾತ' ಅಂದ್ರೆ ಕಷ್ಟದಲ್ಲಿರುವ ನಿರ್ಮಾಪಕನಿಗೆ ಸಹಾಯ ಮಾಡುವವರು ಅಂತರ್ಥ.! ಹೀಗಾಗಿ, ರೈತರಿಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಿಚ್ಚ ಸುದೀಪ್ ಅಭಿಮಾನಿ ಬಳಗ ಸಾರಿದೆ. ಅಷ್ಟೇ ಅಲ್ಲ, ಸುದೀಪ್ ವಿರೋಧಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿದೆ.

ಇದಕ್ಕೆ ನಮ್ಮ ಮಣ್ಣಿನ ಮಕ್ಕಳು ಏನು ಹೇಳ್ತಾರೋ..?'

English summary
A new title for Kannada Actor Sudeep 'Annadatara Annadata' has created a topic of debate in Facebook. Since, most of them are annoyed with this title, Sudeep fans have explained the meaning of 'Annadatara Annadata' in detail.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada