For Quick Alerts
  ALLOW NOTIFICATIONS  
  For Daily Alerts

  'ಸಲಗ' ಮುಹೂರ್ತದಲ್ಲಿ ವಿಜಿಗೆ ಪ್ರೀತಿಯ ಕಾಣಿಕೆ ಕೊಟ್ಟ ಸುದೀಪ್

  |

  ದುನಿಯಾ ವಿಜಯ್ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಜೂನ್ 6 ರಂದು ಸಂಪ್ರದಾಯವಾಗಿ ಮುಹೂರ್ತ ಮಾಡಿಕೊಂಡು ಆರಂಭವಾಗಿದೆ. ವಿಜಿಯ ಮೊದಲ ಪ್ರಯತ್ನಕ್ಕೆ ಕಿಚ್ಚ ಸುದೀಪ್, ಮಾಜಿ ಸಿಎಂ ಸಿದ್ದರಾಮಯ್ಯ, ನಟ ರಾಘವೇಂದ್ರ ರಾಜ್ ಕುಮಾರ್, ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವರು ಶುಭಕೋರಿದರು.

  ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಆಗಮಿಸಿದ್ದ ಕಿಚ್ಚ ಸುದೀಪ್ ನಟ ವಿಜಯ್ ಗೆ ಒಂದು ವಿಶೇಷವಾದ ಕಾಣಿಕೆ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಆ ಪ್ರೀತಿಯ ಕಾಣಿಕೆ ಸ್ವೀಕರಿಸಿದ ವಿಜಿ ಕೂಡ ಸಂತಸ ವ್ಯಕ್ತಪಡಿಸಿದರು.

  'ಸಲಗ' ಸೈಲೆಂಟ್ ಸುನೀಲನ ಕಥೆ: ದುನಿಯಾ ವಿಜಯ್ ಏನಂದ್ರು?

  ಅಷ್ಟಕ್ಕೂ ಕಿಚ್ಚ ಸುದೀಪ್ ಕೊಟ್ಟು ಆ ಗಿಫ್ಟ್ ಏನಪ್ಪಾ ಅಂತ ಯೋಚನೆ ಮಾಡ್ತಿದ್ದೀರಾ. ಅಂದ್ಹಾಗೆ, ಬಂಡಿಮಹಾಕಾಳಮ್ಮ ದೇವಾಸ್ಥಾನದಲ್ಲಿ ಸಲಗ ಸಿನಿಮಾದ ಮುಹೂರ್ತಕ್ಕೆ ಪೂಜೆ ಮಾಡುವ ಮೊದಲು ವಿಜಿ ಕೈಗೆ ಸುದೀಪ್ 2 ಸಾವಿರ ರೂಪಾಯಿ ನೋಟು ಕೊಟ್ಟು ಅದರ ಮೇಲೆ ಒಳ್ಳೆಯದಾಗಲಿ ಎಂದು ಬರೆದುಕೊಟ್ಟಿದ್ದಾರಂತೆ.

  'ಪ್ರೀತಿಯಿಂದ ಕಾಣಿಕೆ ಕೊಟ್ಟ ಸುದೀಪ್ ಇದನ್ನ ನಿನ್ನ ಬಳಿ ಇಟ್ಟಿಕೊಳ್ಳಿ ಒಳ್ಳೆಯದಾಗುತ್ತೆ ಎಂದರು, ಖುಷಿಯಾಯ್ತು' ಎಂದು ವಿಜಿ ಕೂಡ ಮಾಧ್ಯಮಗಳ ಮುಂದೆ ತಮಗೆ ಸುದೀಪ್ ನೀಡಿದ ಕಾಣಿಕೆ ಬಗ್ಗೆ ಹೇಳಿಕೊಂಡರು.

  'ಪೈಲ್ವಾನ್' ಪೋಸ್ಟರ್ ರಿಲೀಸ್ ಮಾಡಿದ ಸೂಪರ್ ಸ್ಟಾರ್ ಏನಂದ್ರು?

  ಇನ್ನು ಸಲಗ ಮತ್ತು ದುನಿಯಾ ವಿಜಯ್ ಬಗ್ಗೆ ಮಾತನಾಡಿದ ಸುದೀಪ್ ''ವಿಜಯ್ ಅವರನ್ನ ನಾನು ಬಹಳ ಹಿಂದಿನಿಂದಲೂ ಬಲ್ಲೆ. ಅವರು ಸ್ಟಂಟ್ ಕಲಾವಿದರಾಗುವುದಕ್ಕೂ ಮೊದಲು ಜಿಮ್ ಒಂದರಲ್ಲಿ ನನಗೆ ಅವರು ಗೊತ್ತು. ಅವರ ಜೀವನದಲ್ಲಿ ಕಷ್ಟದ ಸಮಯ ನೋಡಿಲ್ಲ ಎನ್ನಬಹುದು. ಯಾಕಂದ್ರೆ ಅವರ ಅದರಲ್ಲಿ ಜೀವನ ಕಳೆದವರು'' ಎಂದು ನೆನಪು ಮೆಲುಕು ಹಾಕಿದರು.

  'ಪ್ರತಿಯೊಬ್ಬರ ಕಲಾವಿದನಲ್ಲೂ ಒಬ್ಬ ನಿರ್ದೇಶಕನಿರುತ್ತಾನೆ, ಅದೇ ರೀತಿ ನಿರ್ದೇಶಕರಲ್ಲೂ ಒಬ್ಬ ನಟ ಇರ್ತಾನೆ. ವಿಜಯ್ ಅವರ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗ ಸರಿಯಾದ ಹಾದಿಗೆ ಬಂದಿದ್ದಾರೆ ಎನ್ನಬಹುದು. ನಟನೆಯಿಂದ ನಿರ್ದೇಶನದ ಕ್ಯಾಪ್ ತೊಟ್ಟಿರುವ ವಿಜಿ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ' ಎಂದು ಶುಭ ಕೋರಿದರು.

  English summary
  Kiccha sudeep went to Duniya vijay's first directional movie salaga muhurtha at Bandimahakalamma temple in guttalli. he gives 2 thousand rupees gift to duniya vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X