»   » ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ

ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ

By: BK
Subscribe to Filmibeat Kannada

ದಾಸ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವಿನ ಮನಸ್ತಾಪಕ್ಕೆ ಕಾರಣ ಕಿಚ್ಚ ಸುದೀಪ್ ನೀಡಿರುವ ಹೇಳಿಕೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಿರಂಗವಾಗಿ ಟ್ವಿಟ್ಟರ್ ಮೂಲಕ ಹೇಳುವ ಮೂಲಕ ತಮ್ಮಿಬ್ಬರ ಸ್ನೇಹ ಸಂಬಂಧಕ್ಕೆ ಅಂತ್ಯವಾಡಿದ್ದಾರೆ.

ಹೌದು, ಕೆಲವು ವರ್ಷಗಳ ಹಿಂದೆ ಟಿವಿ-9 ಸುದ್ದಿವಾಹಿನಿಯಲ್ಲಿ ಸುದೀಪ್ ಅವರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಸಂದರ್ಶನದಲ್ಲಿ ಕಿಚ್ಚ ಸುದೀಪ್, ನಟ ದರ್ಶನ್ ಅವರ ಬಗ್ಗೆ ಮಾತನಾಡಿದ್ದರು. ಆದ್ರೆ, ಅಂದಿನ ಕಾರ್ಯಕ್ರಮದಲ್ಲಿ ಸುದೀಪ್ ಅವರು ಮಾತನಾಡಿರುವ ಕೆಲವು ಅಂಶಗಳು, ದರ್ಶನ್ ಅವರಿಗೆ ಬೇಸರ ಮೂಡಿಸಿದ್ದು, ಈಗ ಇವರಿಬ್ಬರ ಸ್ನೇಹಕ್ಕೆ ಆ ಮಾತುಗಳು ಮುಳುವಾಗಿದೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಅಷ್ಟಕ್ಕೂ, ಸುದೀಪ್ ಅವರ ಆ ಹೇಳಿಕೆಯಲ್ಲಿ ಅಂತಹದ್ದೇನಿದೆ? ದರ್ಶನ್ ಅವರಿಗೆ ಬೇಸರ ಮೂಡಿಸಿವಂತಹದ್ದನ್ನ ಸುದೀಪ್ ಮಾತನಾಡಿದ್ರಾ? ಮುಂದೆ ಓದಿ.....

ದರ್ಶನ್ ಅವರನ್ನ ಮೊದಲು ನೋಡಿದ್ದು ಎಲ್ಲಿ?

''ಚಿತ್ರರಂಗಕ್ಕೆ ಬಂದಾಗನಿಂದ ನನಗೆ ದರ್ಶನ್ ಪರಿಚಯ. ನಾನು ಮೊದಲ ಸಲ, ದರ್ಶನ್ ಅವರನ್ನ ನೋಡಿದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕ್ಲಾಪ್ ಬೋರ್ಡ್ ಹಿಡಿದುಕೊಂಡು ನಿಂತ್ಕೊಂಡಿದ್ದಾಗ. ಆಗ ನಾನು ಅಲ್ಲೊಬ್ಬರನ್ನ ಕೇಳಿದೆ ''ಯಾರಿವರು'' ಅಂತ? ಅದಕ್ಕೆ ತೂಗುದೀಪ ಶ್ರೀನಿವಾಸ ಅವರ ಮಗ ಅಂತ'' ಹೇಳಿದ್ದರು.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ದರ್ಶನ್ ಕಷ್ಟಪಟ್ಟು ಬಂದ್ದಿದ್ದಾನೆ!

''ನನಗೆ ಆಶ್ಚರ್ಯ ಆಯಿತು. ಅಂತಹ ಕಲಾವಿದರ ಮಗ, ಇಲ್ಲಿ ಯಾಕೆ ಈ ತರ ನಿಂತ್ಕೊಂಡಿದ್ದಾನೆ ಅಂತ. ಬಹುಶಃ ಅದು ನಮ್ಮ ಇಂಡಸ್ಟ್ರಿಯ ಸ್ಥಿತಿ. ನೀವು ಇರೋತನಕ ಮಾತ್ರ ನೀವು, ನೀವು ಹೋದ್ಮೇಲೂ ನಿಮ್ಮ ಬಗ್ಗೆ ಯೋಚನೆ ಮಾಡ್ಬಿಟ್ಟು, ಎಲ್ಲರನ್ನೂ ಚೆನ್ನಾಗಿ ನೋಡ್ಕೊಳ್ತಾರೆ ಅಂದುಕೊಂಡ್ರೆ ಅದು ತಪ್ಪು. ಈಗ ಅವನು ಕಷ್ಟ ಪಟ್ಟು ಮೇಲೆ ಬಂದ್ದಿದ್ದಾನೆ. ಅದಕ್ಕೆ ಅವನನ್ನ ನಾವು ಗೌರವಿಸಿಬೇಕು. ತೂಗುದೀಪ ಶ್ರೀನಿವಾಸ ಅವರ ಮಗ ಎಂದಾಕ್ಷಣ, ಕರೆದುಕೊಂಡು ಹೋಗಿ ಯಾರು ಅವಕಾಶ ಕೊಟ್ಟಿಲ್ಲ. ತುಂಬಾ ಕಷ್ಟ ಪಟ್ಟು ಬಂದ್ದಿದ್ದಾನೆ.

''ಮೆಜೆಸ್ಟಿಕ್' ಸಿನಿಮಾ ಮೊದಲು ಬಂದಿದ್ದು ನನಗೆ''!

'ಮೆಜೆಸ್ಟಿಕ್' ಸಿನಿಮಾ ಮೊದಲು ಬಂದಿದ್ದು ನನಗೆ. ಸತ್ಯ ಅವರು ನನ್ನ ಬಳಿ ಬಂದಾಗ. ಆಗ ನನಗೆ ಆತುರವಾಗಿ ಮಾಡೋಕೆ ಆಗ್ಲಿಲ್ಲ. ಆಮೇಲೆ, ಈ ತರ ಸಿನಿಮಾ ನನಗೆ ಆಗಲ್ಲ, ನೀವು ಯಾಕೆ ಅವರ ಜೊತೆ ಮಾಡಬಾರದು ಎಂದು, ದರ್ಶನ್ ನ ಸೂಚಿಸಿದ್ದೆ. ಅವರು ಕೂಡ ಹೋದ್ರು. ಮತ್ತೆ, ದರ್ಶನ್ ಕೂಡ ಆ ಸಿನಿಮಾದಲ್ಲಿ ಮಾಡ್ಬೇಕು ಅಂದುಕೊಂಡಿದ್ರು. ಆಮೇಲೆ ಒಳ್ಳೆ ಹೆಸರು ಮಾಡಿದ್ರು.''[ಒಂದು ದಿನ ಮುಂಚೆನೇ 'ಕುಚಿಕು ಗೆಳಯ'ನಿಗೆ ವಿಶ್ ಮಾಡಿದ ಸುದೀಪ್]

ಯಶಸ್ಸನ್ನ ನಾವು ನೋಡಿ ಖುಷಿ ಪಡ್ಬೇಕು!

''ಅಲ್ಲಿಂದು ದರ್ಶನ್ ಬಂದಿರುವ ಜರ್ನಿ ಮತ್ತು ಅದರ ಪ್ರತಿಫಲವನ್ನ ಇಂದು ಎಂಜಾಯ್ ಮಾಡ್ತಿದ್ದಾನೆ. ನಿಜ ಹೇಳ್ಬುಕು ಅಂದ್ರೆ ಮಾಸ್ ನಲ್ಲಿ ದರ್ಶನ್ ಗೆ ಒಳ್ಳೆ ಅಭಿಮಾನಿ ಬಳಗವಿದೆ. ಅದೆಲ್ಲ ಕಷ್ಟ ಪಟ್ಟು ಮಾಡಿರುವ ಸಂಪಾದನೆಗಳು. ಅದನ್ನ ನೋಡಿ, ನಾವು ಖುಷಿ ಪಡುವುದು ಒಳ್ಳೆಯದು'' ಎಂದು ಸಂದರ್ಶನದಲ್ಲಿ ದರ್ಶನ ಅವರ ಬಗ್ಗೆ ಮಾತನಾಡಿದ್ದಾರೆ.[ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

ಕಿಚ್ಚನ ಬಗ್ಗೆ ದರ್ಶನ್ ಏನು ಹೇಳಿದ್ದರು?

ಅದಕ್ಕೂ ಮುಂಚೆ ಸಂದರ್ಶನದಲ್ಲಿ ಕಿಚ್ಚನ ಬಗ್ಗೆ ವಿಡಿಯೋ ಬೈಟ್ ನಲ್ಲಿ ಮಾತನಾಡಿದ್ದ ದರ್ಶನ್ '' ಇಬ್ಬರು ಮುಂಗೋಪದ ಸ್ವಭಾವ. ನಾನು ಕೋಪ ಮಾಡಿಕೊಂಡ್ರೆ, ಅವನು ಸೈಲೆಂಟ್ ಆಗ್ತಾನೆ, ಅವನು ಕೋಪ ಮಾಡಿಕೊಂಡ್ರೆ ನಾನು ಸೈಲೆಂಟ್ ಆಗ್ತಿನಿ. ಇದು ನಮ್ಮಿಬ್ಬರಲ್ಲಿರುವ ಸಾಮ್ಯತೆ. ಇಬ್ಬರಿಗೂ ಒಂದು ಚೌಕಟ್ಟಿದೆ. ನನ್ನ ಕೆಲವೊಂದು ವಿಚಾರವನ್ನ ಅವನು ಕೇಳಲ್ಲ, ಅವನ ಕೆಲವೊಂದು ವಿಷ್ಯವನ್ನ ನಾನು ಕೇಳಲ್ಲ'' ಎಂದು ಅಭಿಪ್ರಾಯ ಹಂಚಿಕೊಂಡಿದ್ದರು.[ಸುದೀಪ್ ಸಂದರ್ಶನ ಇಲ್ಲಿದೆ ನೋಡಿ]

English summary
Rift Between Darshan and Sudeep Comes to Limelight Again and Darshan Revealed the Actual Reason Behind it. Here is the Reason Between Darshan and Sudeep Rift......

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada