»   » ಅನು ಪ್ರಭಾಕರ್ ಹೇಳಿದ ಒಂದೇ ಒಂದು ಮಾತಿಗೆ 'ಥ್ಯಾಂಕ್ಸ್' ಎಂದ ಸುದೀಪ್.!

ಅನು ಪ್ರಭಾಕರ್ ಹೇಳಿದ ಒಂದೇ ಒಂದು ಮಾತಿಗೆ 'ಥ್ಯಾಂಕ್ಸ್' ಎಂದ ಸುದೀಪ್.!

Posted By:
Subscribe to Filmibeat Kannada

''ಕಿಚ್ಚ ಸುದೀಪ್ ರವರ ಬಗ್ಗೆ ಒಂದೇ ಪದದಲ್ಲಿ ಹೇಳಿರಿ'' - ಇದು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟಿ ಅನು ಪ್ರಭಾಕರ್ ರವರಿಗೆ ತಮ್ಮ ಅಭಿಮಾನಿಯೊಬ್ಬರಿಂದ ತೂರಿ ಬಂದ ಪ್ರಶ್ನೆ.

ಕೂಡಲೆ ಅನು ಪ್ರಭಾಕರ್ ಕೊಟ್ಟ ಪ್ರತಿಕ್ರಿಯೆ ಏನ್ಗೊತ್ತಾ.? ''ನಾನು ಕೆಲಸ ಮಾಡಿರುವ ಅತ್ಯುತ್ತಮ ನಿರ್ದೇಶಕರುಗಳ ಪೈಕಿ ಅವರೂ ಒಬ್ಬರು'' ಎಂದು ಅನು ಪ್ರಭಾಕರ್ ಉತ್ತರ ಕೊಟ್ಟರು.

ಅಭಿಮಾನಿ ಹಾಗೂ ಅನು ಪ್ರಭಾಕರ್ ನಡುವಿನ ಈ ಪ್ರಶ್ನೋತ್ತರ 'ಟ್ವಿಟ್ಟರ್'ನಲ್ಲಿ ಕಿಚ್ಚ ಸುದೀಪ್ ರವರಿಗೂ ತಲುಪಿತು. ಹೀಗಾಗಿ ಅನು ಪ್ರಭಾಕರ್ ರವರಿಗೆ 'ಥ್ಯಾಂಕ್ಸ್' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

sudeep-is-one-the-best-directors-i-have-worked-with-tweets-anu-prabhakar

''#73 ಶಾಂತಿನಿವಾಸ ನನಗೆ ಯಾವಾಗಲೂ ತುಂಬಾ ವಿಶೇಷವಾದುದು. ಯಾಕಂದ್ರೆ, ಅದರಲ್ಲಿ ಅತ್ಯುತ್ತಮ ಕಲಾವಿದರಿದ್ದರು. ಎಲ್ಲರಿಗೂ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕ ನಾನೇ ಅದೃಷ್ಟವಂತ'' ಎಂದು ಸುದೀಪ್ ಇದೇ ಸಂದರ್ಭದಲ್ಲಿ ಟ್ವೀಟಿಸಿದ್ದಾರೆ.

ಅಂದ್ಹಾಗೆ, ಸುದೀಪ್ ನಿರ್ದೇಶನ ಮಾಡಿದ್ದ '#73 ಶಾಂತಿನಿವಾಸ' ಚಿತ್ರದಲ್ಲಿ ಅನು ಪ್ರಭಾಕರ್ ಕೂಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.

English summary
''Sudeep is one of the best directors i have worked with'' tweets Anu Prabhakar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada