»   » ಸುದೀಪ್ 'ದಿ ಲೀಡರ್', ಶಿವಣ್ಣ 'ಮಾಸ್ ಲೀಡರ್'

ಸುದೀಪ್ 'ದಿ ಲೀಡರ್', ಶಿವಣ್ಣ 'ಮಾಸ್ ಲೀಡರ್'

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಶೀರ್ಷಿಕೆಗಳ ವಿವಾದ ಹೊಸದಲ್ಲ. ಆಗಾಗ ಈ ರೀತಿಯ ವಿವಾದಗಳು ತಲೆದೋರಿ ಚಿತ್ರರಂಗದ ಬಿಕ್ಕಟ್ಟಿಗೆ ಕಾರಣವಾತ್ತಾ ಬಂದಿವೆ. ಇದೀಗ ಅಂತಹದ್ದೇ ಒಂದು ಶೀರ್ಷಿಕೆ ವಿವಾದ ಇಬ್ಬರು ಸ್ಟಾರ್ ನಟರ ನಡುವೆ ಚಂಡಮಾರುತಂದಂತೆ ಎದ್ದು, ಇದೀಗ ತಣ್ಣಗಾಗಿದೆ.

ಕೆಲ ದಿನಗಳ ಹಿಂದಷ್ಟೇ ಸುದೀಪ್ ಅವರ ಚಿತ್ರಕ್ಕೆ 'ದಿ ಲೀಡರ್' ಎಂದು ಹೆಸರಿಡಲಾಗಿತ್ತು. ಅದಾದ ಕೆಲ ದಿನಕ್ಕೆ ಶಿವರಾಜ್ ಕುಮಾರ್ ಅವರ ಚಿತ್ರ 'ದಿ ಲೀಡರ್' ಘೋಷಿಸಲಾಯಿತು. ಸುದೀಪ್ ಚಿತ್ರದ ಶೀರ್ಷಿಕೆ ರಿಜಿಸ್ಟರ್ಡ್ ಆಗಿದ್ದರೆ, ಶಿವಣ್ಣ ಚಿತ್ರದ ಶೀರ್ಷಿಕೆಯನ್ನು ಇನ್ನೂ ನೋಂದಣಿ ಮಾಡಿಸಿರಲಿಲ್ಲ. [ಸುದೀಪ್, ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ]

Sudeep is The Leader, Shivanna is Mass Leader

ಮತ್ತೊಬ್ಬ ನಿರ್ಮಾಪಕ ಅಜಯ್ ಕುಮಾರ್ ಎಂಬುವವರು ರಿಜಿಸ್ಟರ್ ಮಾಡಿಸಿಕೊಂಡಿದ್ದ 'ಮಾಸ್ ಲೀಡರ್' ಎಂಬ ಶೀರ್ಷಿಕೆಯನ್ನು ಶಿವಣ್ಣನಿಗೆ ಬಿಟ್ಟುಕೊಟ್ಟಿದ್ದಾರೆ. ಎಸ್ ಎನ್ ಎಸ್ ಬ್ಯಾನರಿನಡಿ ಅವರು ಮಾಸ್ ಲೀಡರ್ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದರು. ಇದೀಗ ಸ್ನೇಹಪೂರ್ವಕವಾಗಿ ಆ ಶೀರ್ಷಿಕೆಯನ್ನು ಶಿವಣ್ಣ ಚಿತ್ರದ ನಿರ್ಮಾಪಕರಾದ ತರುಣ್ ಶಿವಪ್ಪ ಅವರಿಗೆ ವರ್ಗಾಯಿಸಿದ್ದಾರೆ. ಅಲ್ಲಿಗೆ ಶೀರ್ಷಿಕೆ ಬಿಕ್ಕಟ್ಟು ಬಗೆಹರಿದಿದೆ.

ಸುದೀಪ್ ಚಿತ್ರಕ್ಕೆ 'ದಿ ಲೀಡರ್' ಹೆಸರಿನಲ್ಲಿ ತಯಾರುತ್ತಿದ್ದರೆ, ಶಿವಣ್ಣ ಚಿತ್ರ 'ಮಾಸ್ ಲೀಡರ್' ಹೆಸರಿನಲ್ಲಿ ತಯಾರಾಗಲಿದೆ. ಇದಕ್ಕೂ ಮುನ್ನ ಶಿವಣ್ಣ ಅವರ ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಹಾಗೂ ನಿರ್ದೇಶಕ ಸಹನಾಮೂರ್ತಿ "ದಿ ಲೀಡರ್ ಶಿವರಾಜ್ ಕುಮಾರ್" ಎಂಬ ಟೈಟಲನ್ನ ರಿಜಿಸ್ಟರ್ ಮಾಡಲು ಫಿಲಂ ಚೇಂಬರ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಫಿಲಂ ಚೇಂಬರ್ ನಲ್ಲಿ ಶೀರ್ಷಿಕೆಗೆ ಸಮ್ಮತಿ ಸಿಕ್ಕಿರಲಿಲ್ಲ.

English summary
The title controversy between Sudeep and Shivrajkumar has been sorted out. Sudeep movie titled as 'The Leader' and Shivrajkumar movie named as 'Mass Leader'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada