ಸೆಮಿಫೈನಲ್ ತಲುಪಿದ ಸುದೀಪ್ ಬುಲ್ಡೋಜರ್ಸ್ ಟೀಂ
ಇದೇನು ಕಾಕತಾಳೀಯವೋ ಅಥವಾ ಸುದೀಪ್ ತಂಡದ ಛಲವೋ, ಬಲವೋ, ಒಲವೋ ಒಂದೂ ಗೊತ್ತಾಗುತ್ತಿಲ್ಲ. ಈ ಬಾರಿಯೂ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ತಲುಪಿದೆ. ಈ ಮೂಲಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಿರ್ಣಾಯಕ ಹಂತಕ್ಕೆ ಮುಟ್ಟಿದ್ದು ಅಭಿಮಾನಿಗಳಲ್ಲಿ ಕುತೂಹಲ ನೆಲೆಸಿದೆ.
ಈ ಹಿಂದಿನ ಎರಡು ಸೀಸನ್ ಗಳಲ್ಲೂ ಸುದೀಪ್ ತಂಡ ಫೈನಲ್ಸ್ ಹಂತದವರೆಗೂ ಹೋಗಿ ಬಂದಿದೆ. ಈಗ ಮೂರನೇ ಆವೃತ್ತಿಯಲ್ಲೂ ಫೈನಲ್ ತಲುಪುವ ಎಲ್ಲ ನಿರೀಕ್ಷೆಗಳು ಇವೆ. ಇದೇ ಮಾರ್ಚ್ 9ರಂದು ನಡೆಯಲಿರುವ ಪಂದ್ಯದಲ್ಲಿಕೇರಳ ಸ್ಟ್ರೈಕರ್ಸ್ ತಂಡದ ವಿರುದ್ಧ ಸೆಣೆಸಲಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡ ಕಳೆದ ಕೆಲವು ತಿಂಗಳಿಂದ ಪ್ರಾಕ್ಟೀಸ್ ಮಾಡಿದರ ಫಲ ಈಗ ಸಿಗುತ್ತಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಸುದೀಪ್ (ನಾಯಕ) ಸೇರಿದಂತೆ ಜೆ.ಕಾರ್ತಿಕ್ (ಉಪನಾಯಕ), ದರ್ಶನ್, ಧ್ರುವ ಶರ್ಮ, ಪ್ರದೀಪ್, ರಾಜೀವ್, ಚಿರಂಜೀವಿ ಸರ್ಜಾ, ತರುಣ್ ಚಂದ್ರ, ರಾಹುಲ್, ರವಿಚೇತನ್, ಮಹೇಶ್, ಸೌರವ್, ಅವಿನಾಶ್, ದಿಗಂತ್, ಧರ್ಮ ಕೀರ್ತಿರಾಜ್, ಅಭಿಮನ್ಯು, ತರುಣ್ ಸುಧೀರ್ ಇದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











