»   » ಸಲ್ಮಾನ್, ಕಮಲ್ ಗಿಂತ ಸುದೀಪ್ 'ಬಿಗ್ ಬಾಸ್' ನಿರೂಪಣೆ ಚೆನ್ನಾಗಿದೆ ಎಂದಿದ್ದು ಯಾರು?

ಸಲ್ಮಾನ್, ಕಮಲ್ ಗಿಂತ ಸುದೀಪ್ 'ಬಿಗ್ ಬಾಸ್' ನಿರೂಪಣೆ ಚೆನ್ನಾಗಿದೆ ಎಂದಿದ್ದು ಯಾರು?

Posted By:
Subscribe to Filmibeat Kannada

ಹಿಂದಿ ಹಾಗೂ ಕನ್ನಡದಲ್ಲಿ 'ಬಿಗ್ ಬಾಸ್' ನೋಡೆ ಇರ್ತೀರಾ. ಕನ್ನಡದ ಸುದೀಪ್ ಹಾಗೂ ಹಿಂದಿಯ ಸಲ್ಮಾನ್ ಖಾನ್ ಈ ಇಬ್ಬರಲ್ಲಿ ಯಾರು ಚೆನ್ನಾಗಿ 'ಬಿಗ್ ಬಾಸ್' ನಿರೂಪಣೆ ಮಾಡ್ತಾರೆ ಎನ್ನುವುದು ಈ ಹಿಂದೆ ಹಲವು ಬಾರಿ ಚರ್ಚೆಯಾಗಿದೆ.

ಈಗ ಅದೇ ಹೋಲಿಕೆ ಮತ್ತೆ ಉದ್ಭವವಾಗಿದೆ. ಈ ಬಾರಿ ಸಲ್ಲು ಮತ್ತು ಸುದೀಪ್ ಮಧ್ಯೆ ಮಾತ್ರವಲ್ಲ. ಸಲ್ಮಾನ್ ಖಾನ್, ಸುದೀಪ್ ಹಾಗೂ ತಮಿಳಿನ ಚೊಚ್ಚಲ 'ಬಿಗ್ ಬಾಸ್' ನಿರೂಪಣೆ ಮಾಡುತ್ತಿರುವ ಕಮಲ್ ಹಾಸನ್ ಅವರ ಮಧ್ಯೆ ಹೋಲಿಕೆ ಶುರುವಾಗಿದೆ.

ಈ ಬಗ್ಗೆ ಸುದೀಪ್ ಗೆ ಒಬ್ಬರು ತಮ್ಮ ನಿಲುವು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಆ ಇಬ್ಬರು ಸ್ಟಾರ್ ನಟರ ನಿರೂಪಣೆ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಮೂವರಲ್ಲಿ ಯಾರು ಉತ್ತಮ ನಿರೂಪಕರು?

ಸುದೀಪ್, ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್.....ಈ ಮೂವರಲ್ಲಿ ಯಾರು ಉತ್ತಮ 'ಬಿಗ್ ಬಾಸ್' ನಿರೂಪಕರು ಎಂಬ ಪ್ರಶ್ನೆ 'ಬಿಗ್ ಬಾಸ್' ಪ್ರಿಯರಲ್ಲಿ ಮೂಡಿದೆ. ಇದು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಚರ್ಚೆ ಕೂಡ ಆಗ್ತಿದೆ.

ತೆಲುಗು 'ಬಿಗ್ ಬಾಸ್'ಗೆ ಯಂಗ್ ಟೈಗರ್ ಸಾರಥಿ

ಸುದೀಪ್ ನಿರೂಪಣೆ ಮೆಚ್ಚಿದ 'ಬಿಗ್ ಬಾಸ್' ಅಭಿಮಾನಿ

ತಮಿಳು 'ಬಿಗ್ ಬಾಸ್' ನೋಡುತ್ತಿರುವ ಅಭಿಮಾನಿಯೊಬ್ಬರು ಕಮಲ್ ಹಾಸನ್ ಹಾಗೂ ಸಲ್ಮಾನ್ ಖಾನ್ ಗಿಂತ ಸುದೀಪ್ ಅವರ ನಿರೂಪಣೆ ಚೆನ್ನಾಗಿದೆ ಎಂದಿದ್ದಾರೆ. ''ತಮಿಳು ಬಿಗ್ ಬಾಸ್ ನೋಡುತ್ತಿದ್ದೇನೆ. ಆದ್ರೆ, ಸಲ್ಮಾನ್ ಖಾನ್ ಹಾಗೂ ಕಮಲ್ ಹಾಸನ್ ಅವರಿಗೆ ಹೋಲಿಸಿಕೊಂಡ್ರೆ, ನಿಮ್ಮ ಬಿಗ್ ಬಾಸ್ ನಿರೂಪಣೆ ಚೆನ್ನಾಗಿದೆ'' ಎಂದು ಕಿಚ್ಚನಿಗೆ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗೆ ಪ್ರತಿಕ್ರಿಯಿಸಿದ ಸುದೀಪ್

ಅಭಿಮಾನಿಯ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್ ಈ ಇಬ್ಬರು ನಟರ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ಹಾಗೂ ಕಮಲ್ ಹಾಸನ್ ಅವರಿಂದ ನಾನು ಕಲಿತಿದ್ದೇನೆ ಎಂದು ತಮ್ಮತನವನ್ನ ಮೆರೆದಿದ್ದಾರೆ.

ಕನ್ನಡ 'ಬಿಗ್ ಬಾಸ್'ನಲ್ಲಿ ಸುದೀಪ್, ತಮಿಳಿನಲ್ಲಿ ಕಮಲ್, ತೆಲುಗಿನಲ್ಲಿ ಯಾರು?

ಸುದೀಪ್ ಟ್ವೀಟ್ ಮಾಡಿದ್ದೇನು?

''ಆ ಇಬ್ಬರು ( ಸಲ್ಮಾನ್‌, ಕಮಲ್ ) ಲೆಜೆಂಡ್ಸ್ ನನಗೆ ಸ್ಫೂರ್ತಿಯಾಗಿದ್ದು, ನಾನು ಇನ್ನಷ್ಟು ಚೆನ್ನಾಗಿ ನಿರೂಪಣೆ ಮಾಡಲು ಅವರ ಶೈಲಿ ಸಹಕಾರಿ ಆಗುತ್ತದೆ'' ಎಂದು ಟ್ವೀಟ್ ನಲ್ಲಿ ಉತ್ತರಿಸಿದ್ದಾರೆ.

ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರಂತೆ.!

English summary
Kannada Actor Sudeep has taken his twitter account to express his opinion about Kamal Hassan and Salman Khan Hosting Style in Bigg boss

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada