For Quick Alerts
  ALLOW NOTIFICATIONS  
  For Daily Alerts

  ಶಾಕಿಂಗ್: ಸುದೀಪ್ ಫೋಟೋ ಯಾಕೆ ಹಾಕಿಲ್ಲ ಅಂತ ಕೇಳಿದ್ರೆ 'ನೋ ಕಾಮೆಂಟ್ಸ್' ಎಂದ ಆದಿತ್ಯ.!

  |
  ವೇದಿಕೆ ಮೇಲಿದ್ದ ಚೇರ್ ತೆಗೆದು ಹಾಕಿದ ಡಿ ಬಾಸ್ ದರ್ಶನ್..? | Munduvareda Adhyaya | Darshan | Aditya

  ಬೂದಿ ಮುಚ್ಚಿದ ಕೆಂಡದಂತೆ ಇದ್ದ ಸುದೀಪ್ ಮತ್ತು ದರ್ಶನ್ ನಡುವಿನ 'ಕಿಚ್ಚು' ಇದೀಗ ಮತ್ತೆ ಹೊಗೆಯಾಡಲಾರಂಭಿಸಿದೆ. ದರ್ಶನ್ ಮತ್ತು ಸುದೀಪ್ ಮಧ್ಯದ ಸಿಟ್ಟಿನ ಅಧ್ಯಾಯ ಮತ್ತೆ ಮುಂದುವರೆಯಲು ಕಾರಣವಾಗಿದ್ದು 'ಮುಂದುವರೆದ ಅಧ್ಯಾಯ' ಚಿತ್ರತಂಡದಿಂದ.

  'ಮುಂದುವರೆದ ಅಧ್ಯಾಯ' ಚಿತ್ರತಂಡದ ಕಡೆಯಿಂದ ಪ್ರಸಾರವಾದ ವಿಡಿಯೋದಲ್ಲಿ ಸುದೀಪ್ ರನ್ನ ಕಡೆಗಣಿಸಲಾಗಿದೆ. 'ನಿರ್ದೇಶಕ' ಸುದೀಪ್ ಹೆಸರು ಮತ್ತು ಫೋಟೋ ವಿಡಿಯೋದಲ್ಲಿ ಮಿಸ್ ಆಗಿದ್ದು ಯಾಕೆ ಅಂತ ಕೇಳಿದ್ರೆ, ನಟ ಆದಿತ್ಯ ಕಡೆಯಿಂದ ಬಂದ ಪ್ರತಿಕ್ರಿಯೆ ನಿಜಕ್ಕೂ ಶಾಕಿಂಗ್.

  ನಂಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ''ನೋ ಕಾಮೆಂಟ್ಸ್. ಎನಿಥಿಂಗ್ ಎಲ್ಸ್'' ಅಂತ ಮಾಧ್ಯಮಗಳ ಮುಂದೆ ಹೇಳಿದ್ದಾರೆ 'ಡೆಡ್ಲಿ' ಆದಿತ್ಯ. ಮುಂದೆ ಓದಿರಿ...

  ಆದಿತ್ಯ ಕೊಟ್ಟ ಪ್ರತಿಕ್ರಿಯೆ ಏನು.?

  ಆದಿತ್ಯ ಕೊಟ್ಟ ಪ್ರತಿಕ್ರಿಯೆ ಏನು.?

  ''ನೋ ಕಾಮೆಂಟ್ಸ್. ಎನಿಥಿಂಗ್ ಎಲ್ಸ್.... ನಾನು ಕೂತುಕೊಂಡು ಆ ವಿಡಿಯೋ ಮಾಡಿಲ್ಲ. ನೀವು ನಂಬ್ತೀರೋ, ಬಿಡ್ತೀರೋ.. ವಿಡಿಯೋ ಈಗಲೇ ಬಂದಿದ್ದು. ಬಹುಶಃ ಎಲ್ಲೋ ತಪ್ಪಾಗಿರಬಹುದು. ಅದು ನನ್ನ ಕಡೆಯಿಂದ ಅಂತೂ ಗ್ಯಾರೆಂಟಿ ಅಲ್ಲ. ನೀವು ಕೇಳಬೇಕಾಗಿರೋರನ್ನ ಕೇಳಬೇಕು. ವಿಡಿಯೋ ಮಾಡಿರುವವರನ್ನು ನೀವು ಕೇಳಬೇಕು. ನಾವಿಲ್ಲಿ ಸೀನಿಯರ್ ನಿರ್ದೇಶಕರಿಗೆ ಆದ್ಯತೆ ಕೊಟ್ಟಿದ್ವಿ'' ಎಂದು ಮಾಧ್ಯಮಗಳ ಮುಂದೆ ನಟ ಆದಿತ್ಯ ಹೇಳಿದ್ದಾರೆ.

  ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!

  ಏನಿದು ವಿವಾದ.?

  ಏನಿದು ವಿವಾದ.?

  ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ, ಆಶಿಕಾ ಗೌಡ, ಸಂದೀಪ್, ಜೈಜಗದೀಶ್ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿನ್ನೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು. ಈ ವೇಳೆ ಪ್ರಸಾರ ಆದ ಒಂದು ವಿಡಿಯೋದಲ್ಲಿ ಸುದೀಪ್ ಹೆಸರು ಮತ್ತು ಫೋಟೋನ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

  ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

  ವಿಡಿಯೋದಲ್ಲಿ ಏನಿತ್ತು.?

  ವಿಡಿಯೋದಲ್ಲಿ ಏನಿತ್ತು.?

  'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ವೇಳೆ ಕನ್ನಡ ಸಿನಿಮಾ ರಂಗದ ನಿರ್ದೇಶಕರ ಬಗ್ಗೆ ಚಿತ್ರತಂಡ ಒಂದು ವಿಡಿಯೋ ಪ್ರಸಾರ ಮಾಡಿತ್ತು. ಆ ವಿಡಿಯೋದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಿಂದ ಹಿಡಿದು ಇತ್ತೀಚೆಗಿನ ನಿರ್ದೇಶಕರವರೆಗಿನ ಬಹುತೇಕರ ಹೆಸರು ಮತ್ತು ಫೋಟೋ ಹಾಕಿ ಧನ್ಯವಾದ ಅರ್ಪಿಸಲಾಗಿತ್ತು. ಇದೇ ವಿಡಿಯೋದಲ್ಲಿ 'ನಿರ್ದೇಶಕ' ಕೂಡ ಆಗಿರುವ ಸುದೀಪ್ ಹೆಸರು ಮತ್ತು ಫೋಟೋ ಮಿಸ್ ಆಗಿತ್ತು.

  'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!

  ಮುಖ್ಯ ಅತಿಥಿಯಾಗಿ ಬಂದಿದ್ದ ದರ್ಶನ್

  ಮುಖ್ಯ ಅತಿಥಿಯಾಗಿ ಬಂದಿದ್ದ ದರ್ಶನ್

  'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಸಮಾರಂಭಕ್ಕೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಹೀಗಾಗಿ, ದರ್ಶನ್ ಬರ್ತಾರೆ ಎಂಬ ಕಾರಣಕ್ಕೆ ನಿರ್ದೇಶಕರ ಕುರಿತಾದ ವಿಡಿಯೋದಲ್ಲಿ ಸುದೀಪ್ ಹೆಸರು ಮತ್ತು ಫೋಟೋನ ಕೈಬಿಡಲಾಗಿದ್ಯಾ.? ಎಂಬ ಪ್ರಶ್ನೆ ಮಾಧ್ಯಮಗಳಿಂದ ತೂರಿ ಬಂದಿದೆ.

  ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ

  ದರ್ಶನ್ ಬರುವ ಮುನ್ನವೇ ವಿಡಿಯೋ ಪ್ಲೇ ಆಗಿತ್ತು.!

  ದರ್ಶನ್ ಬರುವ ಮುನ್ನವೇ ವಿಡಿಯೋ ಪ್ಲೇ ಆಗಿತ್ತು.!

  ಹಾಗ್ನೋಡಿದ್ರೆ, 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಗೆ ದರ್ಶನ್ ಆಗಮಿಸುವ ಮುನ್ನವೇ 'ನಿರ್ದೇಶಕರ ಕುರಿತಾದ ವಿಡಿಯೋ' ಪ್ಲೇ ಮಾಡಲಾಗಿತ್ತು. ಹೀಗಿರುವಾಗ, ಸುದೀಪ್ ರನ್ನ ಕಡೆಗಣಿಸಿದ್ದು ಯಾಕೆ.? ಎಂಬ ಪ್ರಶ್ನೆ ಉದ್ಭವ ಆಗೋದು ಸಹಜ. ಅದೇ ಪ್ರಶ್ನೆಯನ್ನ ಆದಿತ್ಯಗೆ ಕೇಳಿದ್ರೆ, 'ಸಂಬಂಧವೇ ಇಲ್ಲ' ಎಂಬಂತೆ ಅವರು ಉತ್ತರ ಕೊಟ್ಟಿದ್ದಾರೆ.

  English summary
  Kannada Actor Adithya has reacted to the controversy where Director Kiccha Sudeep photo is missed in the video made by 'Munduvaredha Adhyaya' movie team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X