Just In
Don't Miss!
- Finance
ಷೇರು ಮಾರುಕಟ್ಟೆ ತಲ್ಲಣ; 700 ಪಾಯಿಂಟ್ ಗೂ ಹೆಚ್ಚು ಕುಸಿದ ಸೆನ್ಸೆಕ್ಸ್
- News
ಒತ್ತಡಕ್ಕೆ ಮಣಿದ ಯಡಿಯೂರಪ್ಪ; ಮತ್ತೆ ಸಚಿವರ ಖಾತೆ ಮರು ಹಂಚಿಕೆ!
- Sports
ದೀಪಕ್ ಕೂಡಾಗೆ ಅಮಾನತಿನ ಬಿಸಿ ಮುಟ್ಟಿಸಿದ ಬರೋಡಾ ಕ್ರಿಕೆಟ್ ಮಂಡಳಿ
- Lifestyle
ಪದೇ ಪದೇ ಬದಲಾಗುವ ನಿಮ್ಮ ಸಂಗಾತಿಯ ಭಾವನೆಗಳನ್ನು ಈ ರೀತಿ ಸರಿ ಮಾಡಿ
- Automobiles
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಚಾರಿ ವಿಜಯ್ ಜೊತೆ ಬ್ಯಾಡ್ಮಿಂಟನ್ ಆಡಿದ ನಟ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅದ್ಭುತ ಕ್ರೀಡಾಪಟು. ಅದರಲ್ಲೂ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ನಟ. ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕು ಎಂಬ ಕನಸು ಹೊಂದಿದ್ದರು. ಆದರೆ, ಕಾರಣಾತರಗಳಿಂದ ಆ ಆಸೆ ನೆರವೇರಿಸಿಕೊಳ್ಳಲು ಸಾಧ್ಯವಿಲ್ಲ.
ಸಿಸಿಲ್, ಕೆಸಿಸಿ, ರಾಜ್ ಕಪ್, ಕೆಪಿಎಲ್ ಹೀಗೆ ಅನೇಕ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಸುದೀಪ್ ಹಲರಿಗೆ ಸ್ಫೂರ್ತಿ. ಸುದೀಪ್ ಓರ್ವ ಕ್ರಿಕೆಟ್ ಆಟಗಾರ ಎನ್ನುವುದು ಗೊತ್ತಿತ್ತು. ಆದರೆ, ಬ್ಯಾಡ್ಮಿಂಟನ್ ಆಟವನ್ನು ಸಹ ಸುದೀಪ್ ಆಡುತ್ತಾರೆ ಎನ್ನುವುದು ತಿಳಿದಿರಲಿಲ್ಲ.
ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಕಿಚ್ಚ ಸುದೀಪ್
ಇತ್ತೀಚಿಗಷ್ಟೆ ಸುದೀಪ್ ಬ್ಯಾಡ್ಮಿಂಟನ್ ಆಟ ಆಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಜೊತೆ ಬ್ಯಾಡ್ಮಿಂಟನ್ ಆಡುವ ಮೂಲಕ ಸುದೀಪ್ ಸುದ್ದಿಯಾಗಿದ್ದಾರೆ. ಈ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೆಪಿ ನಗರದ ಕ್ಲಬ್‌ನಲ್ಲಿ ಸುದೀಪ್ ಬ್ಯಾಡ್ಮಿಂಟನ್ ಆಡಿದ್ದು, ಫ್ಯಾಂಟಮ್ ನಿರ್ದೇಶಕ ಅನೂಪ್ ಭಂಡಾರಿ ಸಹ ಸಾಥ್ ನೀಡಿದ್ದಾರೆ. ಫಿಟ್ನೆಸ್ ಕಾರಣದಿಂದ ಸುದೀಪ್ ಅವರು ಜಿಮ್ ಜೊತೆ ಜೊತೆಗೆ ಕ್ರಿಕೆಟ್, ಬ್ಯಾಡ್ಮಿಂಟನ್ ಆಡುವುದು ವೃತ್ತಿಯಾಗಿಸಿಕೊಂಡಿದ್ದಾರೆ.
ಈ ಕುರಿತು ಸಂಚಾರಿ ವಿಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು '' ಅಪರೂಪದ ಸಂಜೆ, ಕಿಚ್ಚ ಸುದೀಪ್ ಅವರ ಜೊತೆ ಬ್ಯಾಡ್ಮಿಂಟನ್ ಆಡುವ ಅವಕಾಶ ಸಿಕ್ತು. ನಮಗೆ ಸ್ಫೂರ್ತಿಯಾಗಿದ್ದಕ್ಕೆ ಧನ್ಯವಾದ ಸರ್'' ಎಂದು ಥ್ಯಾಂಕ್ಸ್ ಹೇಳಿದ್ದಾರೆ.
"ಮಡದಿಯೋ ಗೆಳತಿಯೋ ಏನೆಂದು ಕರೆಯಲಿ ನಿನ್ನ": ಪತ್ನಿ ಬರ್ತಡೇಗೆ ಸುದೀಪ್ ಭರ್ಜರಿ ಗಿಫ್ಟ್
ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಮುಗಿಸಿರುವ ಸುದೀಪ್ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಆರಂಭಿಸಲು ತಯಾರಾಗುತ್ತಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಸಹ ಬಿಡುಗಡೆಗೆ ಸಜ್ಜಾಗಿದೆ.
