»   » ಇದೇ ಮೊದಲ ಬಾರಿಗೆ ಸುದೀಪ್ ಜತೆ ಪ್ರಕಾಶ್ ರೈ

ಇದೇ ಮೊದಲ ಬಾರಿಗೆ ಸುದೀಪ್ ಜತೆ ಪ್ರಕಾಶ್ ರೈ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಹಾಗೂ ನಟ ಪ್ರಕಾಶ್ ರೈ ಜೊತೆಯಾಗಿ ಅಭಿನಯಿಸುವಂತಹ ಸುವರ್ಣಾವಕಾಶ ಕೂಡಿಬಂದಿದೆ. ಇವರಿಬ್ಬರು ಒಂದಾಗಿ ನಟಿಸುತ್ತಿರುವುದು 'ರನ್ನ' ಚಿತ್ರದಲ್ಲಿ ಎಂಬುದು ವಿಶೇಷ. ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಇದಾಗಿದೆ.

ತಾವಿಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಸ್ವತಃ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಬಹಳ ವರ್ಷಗಳ ಬಳಿಕ ಮಧು ಅವರು ಸ್ಯಾಂಡಲ್ ವುಡ್ ಗೆ ಆಗಮಿಸಿದ್ದಾರೆ. ಚಿತ್ರದಲ್ಲಿ ಅವರದು ಸೋದರತ್ತೆ ಪಾತ್ರ. ಜೊತೆಗೆ ಇಬ್ಬರು ನಾಯಕಿಯರು ಹರಿಪ್ರಿಯಾ ಮತ್ತು ರಚಿತಾ ರಾಮ್ ಚಿತ್ರದಲ್ಲಿದ್ದಾರೆ. [ರೈಲ್ವೇ ಸ್ಟೇಷನಲ್ಲಿ ಅತ್ತೆ ಮುಂದೆ ಕಣ್ಣೀರಿಟ್ಟ ಸುದೀಪ್!]

Sudeep with Prakash Raj

ಕಳೆದೊಂದು ತಿಂಗಳಿಂದ ಹೈದರಾಬಾದ್ ನಲ್ಲಿ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ಬೆಂಗಳೂರಿಗೆ ಚಿತ್ರತಂಡ ಆಗಮಿಸಿದೆ. ಶ್ರೀ ನಿಮಿಷಾಂಬ ಪ್ರೊಡಕ್ಷನ್ ಲಾಂಛನದಲ್ಲಿ ಎಂ.ಚಂದ್ರಶೇಖರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ರನ್ನ ಚಿತ್ರಕ್ಕೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಸುದೀಪ್ ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದೆ. "ನಾನೊಂಥರಾ ತ್ರಿಡಿ ಪಿಕ್ಚರ್ ಇದ್ದಾಗೆ. ಹತ್ತಿರದಿಂದ ನೋಡಿದರೂ ದೂರದಿಂದ ನೋಡಿದರೂ ಮಂಜು ಮಂಜಾಗೇ ಕಾಣಿಸ್ತೀನಿ. ತಾಳ್ಮೆ ಎಂಬ ಕನ್ನಡಕ ಹಾಕಿಕೊಂಡು ಕರೆಕ್ಟಗಾಗಿ ನೋಡಿದರೆ ಮಾತ್ರ ಈ ಆರಡಿ ಕಟೌಟ್ ಗೆ ಒಂದು ಕ್ಲಾರಿಟಿ ಸಿಗೋದು" ಎಂಬ ಡೈಲಾಗ್ ಮೋಷನ್ ಪೋಸ್ಟರ್ ನ ಪ್ರಮುಖ ಆಕರ್ಷಣೆಯಾಗಿತ್ತು. (ಫಿಲ್ಮಿಬೀಟ್ ಕನ್ನಡ)

English summary
South Indian renowned actor Prakash Raj and Kichcha Sudeep will soon share screen space in the Kannada remake of the Telugu hit Attarintiki Daredi, which has been tentatively titled Ranna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada