For Quick Alerts
  ALLOW NOTIFICATIONS  
  For Daily Alerts

  ಸುಮಲತಾ ಜೊತೆ ದರ್ಶನ್ ಒಬ್ಬರಿದ್ದಾರೆ ಸಾಕು, ಬೇರೆ ಯಾರೂ ಅಗತ್ಯವಿಲ್ಲ: ಸುದೀಪ್

  |

  ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್ ಪತ್ನಿ ಸುಮಲತಾ ಅವರ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದೆ. ಅದು ಕಾಂಗ್ರೆಸ್ ಪಕ್ಷದಿಂದನಾ ಅಥವಾ ಸ್ವತಂತ್ರವಾಗಿ ಅಖಾಡಕ್ಕೆ ಧುಮುಕ್ತಾರಾ ಅನ್ನೋದು ಸದ್ಯದ ಕುತೂಹಲ.

  ಈ ನಡುವೆ ಸುಮಲತಾ ಪರ ನಟ ದರ್ಶನ್, ಸುದೀಪ್, ಯಶ್ ಪ್ರಚಾರಾ ಮಾಡ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡ್ತಿದೆ. ಇದಕ್ಕೀಗಾಗಲೇ ದರ್ಶನ್ ಉತ್ತರ ಕೊಟ್ಟಿದ್ದು, ಸುಮಲತಾ ಅಮ್ಮನ ಜೊತೆ ನಾನಿದ್ದೀನಿ ಎಂದಿದ್ದಾರೆ.

  ದರ್ಶನ್ ನನ್ನ ದೊಡ್ಡ ಮಗ, ಯಶ್ ಮನೆ ಮಗ: ಸುಮಲತಾ

  ಇನ್ನೊಂದೆಡೆ ನಟ ಸುದೀಪ್ ಕೂಡ ಈ ಬಗ್ಗೆ ಮಾತನಾಡಿದ್ದು, ಪರೋಕ್ಷವಾಗಿ ಪ್ರಚಾರಕ್ಕೆ ಬರೋದು ಅನುಮಾನ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಅವರ ಬಗ್ಗೆಯೂ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಮುಂದೆ ಓದಿ.....

  ದರ್ಶನ್ ಒಬ್ಬರಿದ್ದಾರೆ ಸಾಕು

  ದರ್ಶನ್ ಒಬ್ಬರಿದ್ದಾರೆ ಸಾಕು

  ಸುಮಲತಾ ಅವರ ಪ್ರಚಾರಕ್ಕೆ ನೀವು ಹೋಗ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್ ''ದರ್ಶನ್ ಒಬ್ಬರಿದ್ದಾರೆ ಸಾಕು, ಬೇರೆ ಯಾರೂ ಹೋಗುವ ಅವಶ್ಯಕತೆ ಇಲ್ಲ ಅಂತ ನನಗೆ ಅನ್ಸುತ್ತೆ'' ಎಂದು ಹೇಳುವ ಮೂಲಕ ಮಂಡ್ಯ ಚುನಾವಣೆಯಲ್ಲಿ ತಾನು ಭಾಗಿಯಾಗೋದು ಡೌಟ್ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

  ಮಂಡ್ಯ ಚುನಾವಣಾ ಪ್ರಚಾರದ ನಿರ್ಧಾರ ತಿಳಿಸಿದ ದರ್ಶನ್! 'ಯಜಮಾನ' ಯಾರ ಪರ?

  ಅಂಬರೀಶ್ ಹೆಸರೇ ದೊಡ್ಡದು

  ಅಂಬರೀಶ್ ಹೆಸರೇ ದೊಡ್ಡದು

  ''ಮಂಡ್ಯದಲ್ಲಿ ಅಂಬರೀಶ್ ಅವರ ಹೆಸರೇ ತುಂಬಾ ದೊಡ್ಡದಿದೆ. ಆ ಒಂದು ಹೆಸರು ಸಾಕು, ಅದರ ಜೊತೆ ದರ್ಶನ್ ಅವರಿದ್ದಾರೆ. ನಾನಿದ್ದೀನಿ ಅಂತ ಅವರೇ ಹೇಳಿದ್ದಾರೆ. ಸೋ ಅದು ಒಳ್ಳೆಯದು'' ಎಂದು ಸುದೀಪ್ ಹೇಳಿದ್ರು.

  ಮಂಡ್ಯದಲ್ಲಿ ಸುಮಲತಾ-ನಿಖಿಲ್ ಸ್ಪರ್ಧೆ: ದರ್ಶನ್, ಸುದೀಪ್, ಯಶ್ ನಿಲುವೇನು?

  ಸುಮಲತಾ ಕರೆದ್ರೆ ಬರ್ತೀರಾ?

  ಸುಮಲತಾ ಕರೆದ್ರೆ ಬರ್ತೀರಾ?

  ಇನ್ನು ಸುಮಲತಾ ಅವರು ಪ್ರಚಾರಕ್ಕೆಂದು ಕರೆದರೇ ಬರ್ತೀರಾ ಎಂದು ಕೇಳಿದ್ದಕ್ಕೆ, ''ನನಗೆ ಆ ರೀತಿ ಬುಲಾವ್ ಬಂದಿಲ್ಲ. ಅದಕ್ಕೂ ಮಿಗಿಲಾಗಿ ನನಗೆ ರಾಜಕೀಯದ ಮೇಲೆ ಆಸಕ್ತಿ ಕಮ್ಮಿ'' ಎಂದರು. ಇನ್ನು ನಿಮ್ಮ ಸ್ನೇಹಿತರ ಪರವಾಗಿ ನೀವು ಪ್ರಚಾರ ಮಾಡಿದ್ರಿ, ಈಗ ಸುಮಲತಾ ಅವರ ಪರವಾಗಿ ಪ್ರಚಾರ ಎಂದು ಕೇಳಿದ್ದಕ್ಕೆ ''ಇದು ಮಿಸ್ಸಿಂಗ್ ಬಾಯ್ ಸಿನಿಮಾ ಕಾರ್ಯಕ್ರಮ, ಇಲ್ಲಿ ಬೇರೆಯದ್ದೂ ಮಾತನಾಡುವುದು ಬೇಡ'' ಎಂದು ಸುಮ್ಮನಾದರು.

  ನೀನು ನಡೆದಿದ್ದೇ ದಾರಿ: ದರ್ಶನ್ ಗೆ ಜೋಶ್ ತುಂಬಿದ ಸುಮಲತಾ

  ಒಂದಂತೂ ನಿಜ ಎನ್ನಬಹುದು

  ಒಂದಂತೂ ನಿಜ ಎನ್ನಬಹುದು

  ಸುದೀಪ್ ಅವರ ಮಾತುಗಳನ್ನ ಕೇಳಿದ್ಮೇಲೆ ಒಂದಂತೂ ನಿಜ. ಮಂಡ್ಯ ಚುನಾವಣೆಯಲ್ಲಿ ಸುದೀಪ್ ಪ್ರಚಾರ ಮಾಡೋದು ಬಹುತೇಕ ಅನುಮಾನ. ಸಿನಿಮಾ ಚಿತ್ರೀಕರಣಗಳಲ್ಲಿ ಭಾಗಿಯಾಗಬೇಕಿರುವ ಕಾರಣ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಅಲ್ಲಿಗೆ ಸುಮಲತಾ ಅವರಿಗೆ ಸುದೀಪ್ ಕಡೆಯಿಂದ ಕೊಂಚ ನಿರಾಸೆಯಾಗಬಹುದು.

  English summary
  Kannada actor kiccha sudeep Talked about Sumalatha Ambarish poll.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X