»   » ಕಿಚ್ಚ ಸುದೀಪ್ ಮುಂದಿನ ಕನ್ನಡ ಚಿತ್ರವೂ ರೀಮೇಕ್?

ಕಿಚ್ಚ ಸುದೀಪ್ ಮುಂದಿನ ಕನ್ನಡ ಚಿತ್ರವೂ ರೀಮೇಕ್?

By: ಉದಯರವಿ
Subscribe to Filmibeat Kannada

ಕಮರ್ಷಿಯಲ್ ಆಗಿ ಆಲೋಚಿಸಿದರೆ ಚಿತ್ರ ರೀಮೇಕಾ ಅಥವಾ ಸ್ವಮೇಕಾ ಎಂಬುದು ಅಷ್ಟು ಮುಖ್ಯವಾಗುವುದಿಲ್ಲ. ದುಡ್ಡು ಮಾಡ್ತಾ ಅಥವಾ ಇಲ್ಲವೇ ಎಂಬುದೇ ಈಗ ಮುಖ್ಯ. ಕೋಟ್ಯಾಂತರ ರುಪಾಯಿ ಬಂಡವಾಳ ಹೂಡಿ ಹೊಸ ಪ್ರಯೋಗ ಮಾಡಲು ಯಾರೂ ಸಿದ್ಧರಿಲ್ಲ. ಇದು ಚಿತ್ರರಂಗದ ಸದ್ಯದ ಸತ್ಯ.

ಈ ಲಾಜಿಕ್ಕನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ನಟ ಎಂದರೆ ಸುದೀಪ್. ರೀಮೇಕ್ ಚಿತ್ರಗಳನ್ನು ಮಾಡಿ ಗೆಲ್ಲುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡಿರುವ ನಟ. ಈಗ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. [ಚೆನ್ನೈ ಎಕ್ಸ್ ಪ್ರೆಸ್ ಓವರ್ ಟೇಕ್ ಮಾಡಿದ ಅತ್ತಾರಿಂಟಿಕಿ]

Sudeep remade Attarintiki Daredi

ತೆಲುಗಿನಲ್ಲಿ ಬಿಡುಗಡೆಗೂ ಮುನ್ನವೇ ಪೈರೇಟ್ ಆದ ಚಿತ್ರ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' (ಅತ್ತೆಮನೆಗೆ ದಾರಿ ಯಾವುದು). ಈಗ ಈ ಚಿತ್ರವನ್ನು ಕನ್ನಡಕ್ಕೆ ತರುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಸುದೀಪ್ ಟ್ವೀಟಿಸಿದ್ದಾರೆ.

ಈ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಾರೋ ಇಲ್ಲವೋ ಎಂಬುದು ಇನ್ನೂ ಮಾತುಕತೆ ಹಂತದಲ್ಲಿರುವ ಕಾರಣ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಈಗಾಗಲೆ 'ಮಾಣಿಕ್ಯ' (ತೆಲುಗು ಮಿರ್ಚಿ ರೀಮೇಕ್) ಚಿತ್ರದ ಮೂಲಕ ಸುದೀಪ್ ಗೆದ್ದಿದ್ದಾರೆ. [ಮಾಣಿಕ್ಯ ಚಿತ್ರವಿಮರ್ಶೆ]

ಫ್ಯಾಮಿಲಿ ಆಡಿಯನ್ಸ್ ಉದ್ದೇಶವಾಗಿಟ್ಟುಕೊಂಡು ತೆರೆಗೆ ಬಂದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಎಲ್ಲ ವರ್ಗದ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಯಿತು. ಚಿತ್ರದಲ್ಲಿ ಮಾಸ್ ಎಲಿಮೆಂಟ್ಸ್ ಇಲ್ಲದಿದ್ದರೂ ಸೆಂಟಿಮೆಂಟ್ ಸನ್ನಿವೇಶಗಳೇ ಚಿತ್ರದ ಜೀವಾಳವಾಗಿತ್ತು. ಬಾಕ್ಸ್ ಆಫೀಸಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರ.

English summary
This time Sudeep has eyed on another Tollywood's biggest family entertainer Attarintiki Daredi, which had Power Star Pawan Kalyan in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada