For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗಿರುವ ಕೋಪ ಸುದೀಪ್ ಗಿಲ್ಲ.! ಅದಕ್ಕೆ ಸಾಕ್ಷಿ ಈ ಮಾತು...

  By Harshitha
  |
  ಯಶ್ ಅನ್ನು ದ್ವೇಶಿಸೋರಿಗೆ ಸುದೀಪ್ ಬುದ್ದಿಮಾತು | Filmibeat Kannada

  ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಕಿಚ್ಚ ಸುದೀಪ್ ಅಭಿಮಾನಿಗಳ ರೋಷಾಗ್ನಿ ಹೊತ್ತಿ ಉರಿಯುತ್ತಿದೆ. ಎರಡು ದಶಕಗಳಿಂದ ಚಿತ್ರರಂಗದಲ್ಲಿ ನಟ, ನಿರ್ದೇಶಕ, ಗಾಯಕ ಆಗಿ ಗುರುತಿಸಿಕೊಂಡಿರುವ ಸುದೀಪ್ ಗೆ ನಟ ಯಶ್ 'ಸರ್' ಅಂತ ಕರೆಯದ ಕಾರಣಕ್ಕೆ ಕಿಚ್ಚನ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

  ವಯಸ್ಸಿನಲ್ಲಿ ಹಿರಿಯರಾದ ಸುದೀಪ್ ಗೆ 'ಸರ್' ಎಂದು ಕರೆಯದ ಯಶ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಫ್ಯಾನ್ಸ್ ಸಮರ ಸಾರಿದ್ದಾರೆ. ಇತ್ತ ಯಶ್ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ ಅಂತ ಅವರ ಅಭಿಮಾನಿಗಳು ಕೂಡ ತೊಡೆ ತಟ್ಟಿ ನಿಂತಿದ್ದಾರೆ.

  ಇಷ್ಟೆಲ್ಲ ಆಗುತ್ತಿದ್ದರೂ ನಟ ಯಶ್ ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲ. ಆದ್ರೆ, ಯಶ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡದಂತೆ ತಮ್ಮ ಅಭಿಮಾನಿಗಳಲ್ಲಿ ನಟ ಸುದೀಪ್ ವಿನಂತಿ ಮಾಡಿಕೊಂಡಿದ್ದಾರೆ. ಮುಂದೆ ಓದಿರಿ...

  ಕಿಚ್ಚ ಸುದೀಪ್ ಕೊಟ್ಟ ಮೊದಲ ಪ್ರತಿಕ್ರಿಯೆ ಏನು.?

  ಸುದೀಪ್ ಹಾಕಿದ ಚಾಲೆಂಜ್ ಸ್ವೀಕರಿಸಿ ಯಶ್ ವಿಡಿಯೋ ಪೋಸ್ಟ್ ಮಾಡಿದ್ಮೇಲೆ, ಅದನ್ನ ನೋಡಿ ಕಿಚ್ಚನ ಹುಡುಗರು ಗರಂ ಆದರು. ಆದ್ರೆ, ಯಶ್ ಮಾಡಿದ ವಿಡಿಯೋ ನೋಡಿ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನ್ಗೊತ್ತಾ.? ''Awesome... ನಿಮ್ಮ ಸ್ನೇಹಿತನಿಗೆ ನನ್ನ ಶುಭಾಶಯಗಳು. ನಿಮ್ಮ ಸ್ನೇಹಿತನಿಗೆ ಒಳ್ಳೆಯ ಟ್ರೇನರ್ ಸಿಕ್ಕಿರುವ ಹಾಗಿದೆ'' ಎಂದು ಟ್ವೀಟ್ ಮಾಡಿದರು ನಟ ಸುದೀಪ್.

  ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!

  ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ

  ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ

  ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕಲಹ-ಕೋಲಾಹಲವೇ ಸೃಷ್ಟಿಯಾಯಿತು. ನಟ ಯಶ್ ವಿರುದ್ಧ ಸುದೀಪ್ ಅಭಿಮಾನಿಗಳು ಯುದ್ಧಕ್ಕೆ ನಿಂತರು. ಯಶ್ ಫ್ಯಾನ್ಸ್ ಹಾಗೂ ಕಿಚ್ಚನ ಫ್ಯಾನ್ ನಡುವೆ ಕಿತ್ತಾಟ ಶುರುವಾಗಿದ್ದನ್ನ ನೋಡಿ ಕಿಚ್ಚ ಸುದೀಪ್ ಒಂದು ಟ್ವೀಟ್ ಮಾಡಿದ್ದಾರೆ.

  ಅಭಿಮಾನಿಗಳಲ್ಲಿ ಸುದೀಪ್ ವಿನಂತಿ

  ''ನನ್ನ ಫಿಟ್ನೆಸ್ ಚಾಲೆಂಜ್ ನ ಸ್ವೀಕರಿಸಿ, ಆ ವಿಡಿಯೋನ ಯಶ್ ಪೋಸ್ಟ್ ಮಾಡಿದ್ದು ಪ್ರೀತಿ ಹಾಗೂ ಗೌರವದಿಂದಲೇ. ದಯವಿಟ್ಟು ಯಶ್ ವಿರುದ್ಧ ಕಿಡಿಕಾರಬೇಡಿ. ಇದು ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರ ಬಳಿ ನಾನು ಮಾಡಿಕೊಳ್ಳುತ್ತಿರುವ ವಿನಂತಿ. ಇದನ್ನ ಗೌರವಿಸುತ್ತೀರಿ ಎಂದು ಭಾವಿಸುವೆ'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

  ಅಭಿಮಾನಿಗಳ ಕೋಪ ತಣ್ಣಗೆ ಆಗಿಲ್ಲ

  ಅಭಿಮಾನಿಗಳ ಕೋಪ ತಣ್ಣಗೆ ಆಗಿಲ್ಲ

  ಅಭಿಮಾನಿಗಳಲ್ಲಿ ಸುದೀಪ್ ವಿನಂತಿ ಮಾಡಿಕೊಂಡಿದ್ದಾಗಿದೆ. ಆದರೂ ಸುದೀಪ್ ಅಭಿಮಾನಿಗಳ ಕೋಪ ಕಮ್ಮಿ ಆಗಿಲ್ಲ. ಯಶ್-ಕಿಚ್ಚನ ಫ್ಯಾನ್ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ.

  English summary
  Kannada Actor Kiccha Sudeep requests his fans to not to post harsh tweets towards Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X