For Quick Alerts
  ALLOW NOTIFICATIONS  
  For Daily Alerts

  ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ

  By Bharath Kumar
  |

  ದಿವಂಗತ ನಟ ಡಾ ವಿಷ್ಣುವರ್ಧನ್ ಅವರಿಗೆ ಕಿಚ್ಚ ಸುದೀಪ್ ಅಭಿಮಾನಿ ಎನ್ನುವುದು ಗೊತ್ತಿರುವ ವಿಚಾರ. 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದಲ್ಲಿ ವಿಷ್ಣುವರ್ಧನ್ ಮತ್ತು ಸುದೀಪ್ ತೆರೆ ಹಂಚಿಕೊಂಡಿದ್ದರು.

  ಸುದೀಪ್ ನಿರ್ದೇಶನದ 'ಶಾಂತಿ ನಿವಾಸ' ಚಿತ್ರದಲ್ಲಿ ವಿಷ್ಣುವರ್ಧನ್ ಅವರ ವಿಶೇಷ ಪಾತ್ರವೊಂದನ್ನ ನಿಭಾಯಿಸಿದ್ದರು. ಅದೇ ರೀತಿ ವಿಷ್ಣುವರ್ಧನ್ ಅಭಿನಯಿಸಿದ್ದ 'ಜೇಷ್ಠ' ಚಿತ್ರಕ್ಕೆ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ರು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಸಿನಿಮಾದಿಂದ ಆಚೆಯೂ ವಿಷ್ಣುವರ್ಧನ್ ಅವರ ಜೊತೆ ಒಡನಾಡ ಹೊಂದಿದ್ದ ಕಿಚ್ಚ ಈಗೊಂದು ಇಂಟ್ರೆಸ್ಟಿಂಗ್ ವಿಚಾರ ಬಿಚ್ಟಿಟ್ಟಿದ್ದಾರೆ.

  ವಿಷ್ಣು ಅವರು ಸಾವಿಗೂ ಮುನ್ನ ಸುದೀಪ್ ಅವರ ಬಳಿ ವಿಷ್ಯವೊಂದನ್ನ ಪದೇ ಪದೇ ಚರ್ಚಿಸಿದ್ದರಂತೆ. ಆದ್ರೆ, ಕೊನೆಗೂ ಆಗಲೇ ಇಲ್ಲ ಸುದೀಪ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಡಾ ವಿಷ್ಣುವರ್ಧನ್ ಮತ್ತು ಸುದೀಪ್ ನಡುವೆ ನಡೆದ ಆ ಮಾತು ಕಥೆ ಯಾವುದು.? ಮುಂದೆ ಓದಿ......

  'ಇಂಡಿಯನ್' ರೀತಿ ಸಿನಿಮಾ ಮಾಡುವ ಆಸೆ

  'ಇಂಡಿಯನ್' ರೀತಿ ಸಿನಿಮಾ ಮಾಡುವ ಆಸೆ

  ಸುದೀಪ್ ಅವರ ಬಳಿ ಸ್ವತಃ ವಿಷ್ಣುವರ್ಧನ್ ಅವರೇ ಹೇಳಿಕೊಂಡಿದ್ದ ಪ್ರಕಾರ ''ಇಂಡಿಯನ್ ರೀತಿಯಲ್ಲಿ ಒಂದು ಸಿನಿಮಾ ಮಾಡಬೇಕು ಅಂಬ ಆಸೆ ಇತ್ತಂತೆ''. ಈ ಬಗ್ಗೆ ಸುದೀಪ್ ಅವರ ಬಳಿ ಚರ್ಚೆ ಕೂಡ ಮಾಡಿದ್ರಂತೆ. ವಿಷ್ಣುವರ್ಧನ್ ಅವರು ಸಾಯುವ ಮುನ್ನ ಒಂದೂವರೆ ವರ್ಷದಿಂದ ಈ ಚರ್ಚೆ ಆಗುತ್ತಿತ್ತಂತೆ.

  ಸುದೀಪ್ ಡೈರೆಕ್ಟ್ ಮಾಡ್ಬೇಕು

  ಸುದೀಪ್ ಡೈರೆಕ್ಟ್ ಮಾಡ್ಬೇಕು

  ವಿಷ್ಣುವರ್ಧನ್ ಅವರ ಚಿತ್ರವನ್ನ ಕಿಚ್ಚ ಸುದೀಪ್ ಡೈರೆಕ್ಟ್ ಮಾಡಬೇಕು ಎನ್ನುವುದು ಕೂಡ ಅವರ ಬಯಕೆಗಳಲ್ಲಿ ಒಂದಾಗಿತ್ತಂತೆ. ಬಹುಶಃ ಎಲ್ಲ ಅಂದುಕೊಂಡಂತೆ ಆಗಿದ್ದರೇ ಸುದೀಪ್ ಅವರು ವಿಷ್ಣುವರ್ಧನ್ ಗಾಗಿ ಕಥೆ ರೆಡಿ ಮಾಡುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ಅದಕ್ಕೆ ವಿಧಿ ಬಿಡಲಿಲ್ಲ.

  ವಿಷ್ಣು ಅಭಿಮಾನಿಗಳಿಗೆ ಬ್ಯಾಂಕಾಕ್'ನಿಂದ ಬಂತು ಕಿಚ್ಚನ ವಿಡಿಯೋ ಸಂದೇಶವಿಷ್ಣು ಅಭಿಮಾನಿಗಳಿಗೆ ಬ್ಯಾಂಕಾಕ್'ನಿಂದ ಬಂತು ಕಿಚ್ಚನ ವಿಡಿಯೋ ಸಂದೇಶ

  'ಸರ್ಕಾರ್' ಮಾಡುವ ಯೋಚನೆ ಇತ್ತು

  'ಸರ್ಕಾರ್' ಮಾಡುವ ಯೋಚನೆ ಇತ್ತು

  ''ವಿಷ್ಣುವರ್ಧನ್ ಅವರ ಜೊತೆ ಸಿನಿಮಾ ಮಾಡೋಕೆ ಎರಡು ಬಾರಿ ಹೋಗಿದ್ದೆ. ಒಂದು 'ಸರ್ಕಾರ್' ಸಿನಿಮಾ ಮಾಡೋಣ ಅಂತಿದ್ದೆ, ಇನ್ನೊಂದು 'ತವಮಾಯಿ ತವಮಿರುಂಧು' ಮಾಡೋಣ ಅಂತ ಇದ್ವಿ. ಅದೆಲ್ಲ ಕ್ಯಾನ್ಸಲ್ ಆಯ್ತು, ನನಗೂ ಬೇಜಾರಾಯ್ತು. ಸುಮ್ಮನೆ ಆದೆ'' - ಸುದೀಪ್

  ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ.!ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ.!

  ವಿಷ್ಣು ಸರ್ ಕರೆದು ಹೇಳಿದ್ರು

  ವಿಷ್ಣು ಸರ್ ಕರೆದು ಹೇಳಿದ್ರು

  ''ಆಮೇಲೆ ಅವರೇ ಕರೆದು ಒಂದು ಸಿನಿಮಾ ಮಾಡೋಣ ಅಂದ್ರು. ಅದಕ್ಕೆ ನಾನು ''ಸರ್ ನೀವು ಮಾಡೋಣ ಅಂತೀರಾ, ಆಮೇಲೆ ಬೇಡ ಅಂತೀರಾ'' ಅಂದೆ. ಅದಕ್ಕೆ ಅವರು ''ಇಲ್ಲ ಈ ಸಲ ಮಾಡೋಣ ಅಂದ್ರು. ನನಗೆ ಇಂಡಿಯನ್ ತರ ಒಂದು ಸಿನಿಮಾ ಮಾಡ್ಬೇಕು. ರೀಮೇಕ್ ಅಲ್ಲ, ಆ ತರ ಸಮಾಜಕ್ಕೆ ಒಂದು ಸಂದೇಶ ಕೊಡ್ಬೇಕು ಅಂದ್ರಿದ್ರು. ಸರಿ ಸರ್ ಅಂತ ನಾನು ಬಂದಿದ್ದೆ. ಆದ್ರೆ, ಅದು ನೆರವೇರಲೇ ಇಲ್ಲ'' - ಸುದೀಪ್

  ಕಥೆ ಮಾಡ್ಕೊಂಡು ಬರ್ತಿನಿ ಅಂದಿದ್ದೆ

  ಕಥೆ ಮಾಡ್ಕೊಂಡು ಬರ್ತಿನಿ ಅಂದಿದ್ದೆ

  ''ಈ ವಿಷ್ಯವನ್ನ ಕೇಳಿ ನನಗೂ ಖುಷಿ ಆಯ್ತು. ಆದ್ರೆ, ನಾನು ರೆಡಿಯಾಗಿರಲಿಲ್ಲ. ಅದಕ್ಕೆ ಸರಿ ಸರ್, ನಾನು ಕಥೆ ಮಾಡ್ಕೊಂಡು ನಿಮ್ಮ ಹತ್ರಾ ಬರ್ತಿನಿ ಅಂತ ಬಂದಿದ್ದೆ. ಆದ್ರೆ, ಆಮೇಲೆ ಅದು ಸಾಧ್ಯವಾಗಲಿಲ್ಲ'' ಎಂದು ಸುದೀಪ್ ನಾಗರಹಾವು ಚಿತ್ರದ ಬಗ್ಗೆ ನೀಡಿದ ವಿಶೇಷ ಸಂದರ್ಶನದ ಸಮಯದಲ್ಲಿ ಹೇಳಿಕೊಂಡಿದ್ದಾರೆ.

  English summary
  Kiccha sudeep has revealed some interesting fact about dr vishnuvardhan and his nagarahavu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X