»   » 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಫೇವರೆಟ್ ದೃಶ್ಯ ಇದೇ ನೋಡಿ.!

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಫೇವರೆಟ್ ದೃಶ್ಯ ಇದೇ ನೋಡಿ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಚಿತ್ರೀಕರಣ ಬ್ಯಾಂಕಾಕ್ ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಸುದೀಪ್ ಮತ್ತು ನಟಿ ಆಮಿ ಜಾಕ್ಸನ್ ಬ್ಯಾಂಕಾಕ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಆದಷ್ಟೂ ಬೇಗ ಸೆಂಚುರಿ ಸ್ಟಾರ್ ತಂಡವನ್ನ ಸೇರಿಕೊಳ್ಳಲಿದ್ದಾರೆ.

ಈ ಮಧ್ಯೆ ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ 'ದಿ ವಿಲನ್' ಚಿತ್ರದ ಬಗ್ಗೆ ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಮೂಲಕ ಅಪ್ ಡೇಟ್ ಕೊಡ್ತಿದ್ದಾರೆ. ಮುಂದಿನ 10 ದಿನಗಳ ಕಾಲ ಚೇಸಿಂಗ್ ದೃಶ್ಯಗಳ ಚಿತ್ರೀಕರಣ ನಡೆಯಲಿದ್ದು, ಸಖತ್ ಥ್ರಿಲ್ಲಿಂಗ್ ಆಗಿದ್ದೀನಿ ಎಂದು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು. ಈಗ ಮತ್ತೊಂದು ಫೋಟೋ ಪೋಸ್ಟ್ ಮಾಡಿರುವ ಸುದೀಪ್ ''ದಿ ವಿಲನ್ ಚಿತ್ರದಲ್ಲಿ ನನ್ನ ಫೇವರೆಟ್ ದೃಶ್ಯ'' ಎಂದು ಹೊಸ ಫೋಟೋ ಹಾಕಿದ್ದಾರೆ.

'ದಿ ವಿಲನ್' ಬಗ್ಗೆ ಥ್ರಿಲ್ಲಿಂಗ್ ಅನುಭವ ಹಂಚಿಕೊಂಡ ಸುದೀಪ್

Sudeep's Favorite Scene of The Villain

ಈ ದೃಶ್ಯದಲ್ಲಿ ಥೈಲಾಂಡ್ ಮತ್ತು ಬ್ರಿಟನ್ ಕಲಾವಿದರು ಕೂಡ ಕಾಣಿಸಿಕೊಂಡಿದ್ದಾರೆ ಎಂದು ಸೀನ್ ಬಗ್ಗೆ ವಿವರಿಸಿದ್ದಾರೆ. ಈ ಫೋಟೋ ಗಮನಿಸಿದ್ರೆ, ಡಾನ್ ಜೊತೆಯಲ್ಲಿ ಬಿಸ್ ನೆಸ್ ಮ್ಯಾನ್ ಗಳು, ಬೇರೆ ಡಾನ್ ಗಳು ಸಭೆ ಮಾಡುತ್ತಿರುವುದು ಎಂಬುದು ಮೇಲ್ನೊಟಕ್ಕೆ ಕಾಣುತ್ತಿದೆ.

ಕೊನೆಗೂ 'ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಆಮಿ ಜಾಕ್ಸನ್

ಅದೇನೆ ಇರಲಿ, ಪ್ರತಿಯೊಂದು ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಿರುವ 'ದಿ ವಿಲನ್' ಸ್ಯಾಂಡಲ್ ವುಡ್ ನ ಬಹುದೊಡ್ಡ ಸಿನಿಮಾ ಆಗುವುದರಲ್ಲಿ ಅನುಮಾಣವಿಲ್ಲ. ಜೋಗಿ ಪ್ರೇಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್, ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

English summary
Kannada Actor Sudeep And Shiva Rajkumar Starrer The Villain Movie Shooting Pic Leak. The Pic Posted By himself Kiccha Sudeep. ''One of my Favorite scenes of #TheVillain'' sudeep Gives Caption For this Photo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada