For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿ ಫ್ಯಾಂಟಮ್ ಸಂಭ್ರಮ: ಕಿಚ್ಚನಿಗಾಗಿಯೇ ಇದೆಲ್ಲಾ

  |

  ನಟ ಸುದೀಪ್ ಅಭಿನಯಿಸುತ್ತಿರುವ 'ಪ್ಯಾಂಟಮ್' ಸಿನಿಮಾ ಸಖತ್ ಕುತೂಹಲ ಕೆರಳಿಸಿದೆ. ಅರಣ್ಯದ ಸೆಟ್ ಹಾಕಿ ಸಖತ್ ಭಿನ್ನವಾಗಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

  ಪ್ಯಾಂಟಮ್ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಅಂತಿಮ ಹಂತದ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದೆ. ಸಿನಿಮಾದ ಪ್ರಚಾರವನ್ನು ಭಾರಿ ದೊಡ್ಡ ಮಟ್ಟದಲ್ಲಿ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

  ಪ್ಯಾಂಟಮ್ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮವನ್ನು ದುಬೈನಲ್ಲಿ ಭಾರಿ ಅದ್ಧೂರಿಯಾಗಿ ಮಾಡಲು ಚಿತ್ರತಂಡ ಸನ್ನಧವಾಗಿದೆ.

  ವಿಶ್ವದ ದುಬಾರಿ ಮತ್ತು ಐಶಾರಾಮಿ ಹೋಟೆಲ್‌ಗಳಲ್ಲಿ ಒಂದಾದ ದುಬೈನ ಬುರ್ಜ್‌ ಖಲೀಫಾದಲ್ಲಿ ಪ್ಯಾಂಟಮ್ ಸಿನಿಮಾದ ಟೀಸರ್ ಲಾಂಚ್ 'ವರ್ಲ್ಡ್ ಆಫ್ ಪ್ಯಾಂಟಮ್' ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

  ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಹಿಂದೆ ಮತ್ತೊಂದು ಪ್ರಮುಖ ಕಾರಣವೂ ಇದೆ, ಅದೆಂದರೆ ಸ್ವತಃ ಸುದೀಪ್. ಹೌದು, ನಟ ಸುದೀಪ್ ಚಿತ್ರರಂಗಕ್ಕೆ ಪ್ರವೇಶಿಸಿ ಜನವರಿ ವೇಳೆಗೆ 25 ವರ್ಷವಾಗುತ್ತದೆ ಹಾಗಾಗಿ ಈ ಸಂಭ್ರಮವನ್ನು ದೊಡ್ಡದಾಗಿ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಸ್ಟಾರ್ಟ್ ಆಯ್ತು ಬೈ 2 ಲವ್ | Filmibeat Kannada

  ಪ್ಯಾಂಟಮ್ ಸಿನಿಮಾವನ್ನು ಅನುಪ್ ಬಂಢಾರಿ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಿರೂಪ್ ಬಂಢಾರಿ, ಶ್ರದ್ಧಾ ಶ್ರೀನಾಥ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸುದೀಪ್ ಆಪ್ತ ಮಂಜು ಬಂಡವಾಳ ಹೂಡಿದ್ದಾರೆ.

  English summary
  Sudeep's Phantom movie teaser release program will happen in Dubai's Burj Khalifa star hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X