»   » ಹಾಂಗ್ ಕಾಂಗ್ ಹಾರಲಿರುವ ಕಿಚ್ಚ ಸುದೀಪ್ 'ರನ್ನ'

ಹಾಂಗ್ ಕಾಂಗ್ ಹಾರಲಿರುವ ಕಿಚ್ಚ ಸುದೀಪ್ 'ರನ್ನ'

Posted By:
Subscribe to Filmibeat Kannada

ಈ ವರ್ಷದ ಬಿಗ್ ಬಜೆಟ್ ಚಿತ್ರಗಳಲ್ಲಿ ಒಂದು ಕಿಚ್ಚ ಸುದೀಪ್ ಅಭಿನಯದ 'ರನ್ನ'. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇನ್ನು ಕೇವಲ ಎರಡೇ ಎರಡು ಹಾಡುಗಳು ಮಾತ್ರ ಉಳಿದಿದ್ದು ಒಂದು ಹಾಡಿನ ಚಿತ್ರೀಕರಣ ಹಾಂಗ್ ಕಾಂಗ್ ನಲ್ಲಿ ನಡೆಯಲಿದೆ.

ಫೆಬ್ರವರಿ 20ರಿಂದ ಚಿತ್ರೀಕರಣ ಹಾಂಗ್ ಕಾಂಗ್ ನಲ್ಲಿ ನಡೆಯಲಿದೆ. ಇದರ ಜೊತೆಜೊತೆಗೆ ಚಿತ್ರದ ನಿರ್ಮಾಣೇತರ ಕೆಲಸಗಳು ಭರದಿಂದ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ ಮಾರ್ಚ್ ತಿಂಗಳ ಯುಗಾದಿ ಹಬ್ಬಕ್ಕೆ ತೆರೆಗೆ ಬರಲಿದೆ.

Sudeep's Ranna shot in Hong Kong

ರನ್ನ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಚಿತ್ರತಂಡ ಸಸ್ಪೆನ್ಸ್ ಕಾದಿರಿಸಿಕೊಂಡಿದ್ದರೂ, ಬಹುಶಃ ಮಾರ್ಚ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಚಿತ್ರ ಥಿಯೇಟರ್ ಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. [ಕಿಚ್ಚ ಸುದೀಪ್ 'ರನ್ನ' ಶೀರ್ಷಿಕೆ ಅಂತರಾರ್ಥ ಏನು?]

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ 5ರಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದೆ. ಇಷ್ಟು ದಿನ ಕ್ರಿಕೆಟ್ ನಲ್ಲಿ ಬಿಜಿಯಾಗಿದ್ದ ಸುದೀಪ್ ಈಗ ರನ್ನ ಚಿತ್ರಕ್ಕೆ ಮರಳಿದ್ದಾರೆ. ರಚಿತಾರಾಮ್, ಹರಿಪ್ರಿಯಾ, ಮಧು, ದೇವರಾಜ್ ಹಾಗೂ ಪ್ರಕಾಶ್ ರೈ ಚಿತ್ರದ ಪಾತ್ರವರ್ತದಲ್ಲಿದ್ದಾರೆ.

ರನ್ನ ಚಿತ್ರವು ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಪವನ್ ಕಲ್ಯಾಣ್ ಅಭಿನಯಿಸಿದ್ದ ಈ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ಏಕತಾನತೆಯನ್ನು ಮುರಿದಂತಹ ಚಿತ್ರ ಇದು. ಸರಿಸುಮಾರು ರು.55 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.85 ಕೋಟಿ ಬಾಚಿತು. (ಏಜೆನ್ಸೀಸ್)

English summary
Kichcha Sudeep lead Kannada movie Ranna song shooting to be held in Hong Kong. One of the song will be shot in Hong Kong from 20th February. The principal cast includes Kiccha Sudeep, Rachita Ram, Haripriya and Madhoo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada