For Quick Alerts
  ALLOW NOTIFICATIONS  
  For Daily Alerts

  'ಕರ್ನಾಟಕದಲ್ಲೇ ಶೂಟಿಂಗ್ ಮಾಡಿ' ಎಂದ ಅಭಿಮಾನಿಗೆ ಸುದೀಪ್ ಕೊಟ್ಟ ಉತ್ತರ

  |

  ಕಿಚ್ಚ ಸುದೀಪ್ ನಟನೆ 'ಫ್ಯಾಂಟಮ್' ಸಿನಿಮಾ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿತ್ತು. ಸುದೀರ್ಘ ಹಂತದ ಶೆಡ್ಯೂಲ್ ಮುಕ್ತಾಯವಾಗಿದೆ ಎಂದು ಸ್ವತಃ ಸುದೀಪ್ ಟ್ವಿಟ್ಟರ್ ಮೂಲಕ ತಿಳಿಸಿದ್ದರು.

  ಕರ್ನಾಟಕದಲ್ಲೇ ಶೂಟಿಂಗ್ ಮಾಡಿ ಎಂದವನಿಗೆ ಉತ್ತರಕೊಟ್ಟ ಸುದೀಪ್ | Filmibeat Kannada

  ''ಹೈದರಾಬಾದ್‌ನ ಸುದೀರ್ಘ ಶೆಡ್ಯೂಲ್ ಈಗತಾನೆ ಮುಕ್ತಾಯವಾಗಿದೆ. ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ. ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದರು.

  ಈ ಟ್ವೀಟ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ ''ಗ್ರೇಟ್, ಸಾಧ್ಯವಾದರೆ ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿ, ಕನ್ನಡದ ಸಾಕಷ್ಟು ತಂತ್ರಜ್ಞರು ಕೆಲಸದಲ್ಲಿ ಹುಡುಕುತ್ತಿದ್ದಾರೆ. ನಿಜವಾಗಲೂ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ'' ಎಂದು ಹೇಳಿದ್ದಾರೆ.

  ನೆಟ್ಟಿಗನ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''ಸರ್, ಈ ಚಿತ್ರದ ಸೆಟ್‌ನಲ್ಲಿ ಬಹುತೇಕ ಎಲ್ಲರೂ ಕರ್ನಾಟಕದವರೇ ಕೆಲಸ ಮಾಡುತ್ತಿದ್ದಾರೆ, ಧನ್ಯವಾದ'' ಎಂದು ಉತ್ತರಿಸಿದ್ದಾರೆ.

  ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ಪರವಾಗಿ ಮೊದಲು ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಫ್ಯಾಂಟಮ್. ಹಲವು ತಿಂಗಳಿನಿಂದ ಹೈದರಾಬಾದ್‌ನಲ್ಲಿ ಫ್ಯಾಂಟಮ್ ಶೂಟಿಂಗ್ ನಡೆಯುತ್ತಿದೆ.

  ಲಾಕ್‌ಡೌನ್ ಆದ್ಮೇಲೆ ಕನ್ನಡ ಇಂಡಸ್ಟ್ರಿ ಸಂಕಷ್ಟದಲ್ಲಿರುವುದು ನಿಜ. ತಂತ್ರಜ್ಞರು, ಕಾರ್ಮಿಕರು, ಥಿಯೇಟರ್ ಸಿಬ್ಬಂದಿ, ಲೈಟ್ ಬಾಯ್ ಸೇರಿದಂತೆ ಚಿತ್ರೋಧ್ಯಮದ ಎಲ್ಲರೂ ಏಂಟು ತಿಂಗಳು ಕೆಲಸ ಇಲ್ಲದೇ ಖಾಲಿ ಕುಳಿತುಕೊಳ್ಳಬೇಕಾಗಿತ್ತು.

  ಈಗ ಕನ್ನಡದಲ್ಲಿ ಹೊಸ ಸಿನಿಮಾಗಳು ತೆರೆಕಾಣುತ್ತಿದೆ. ಹೊಸ ಸಿನಿಮಾಗಳು ಆರಂಭವಾಗುತ್ತಿವೆ. ಖಾಲಿ ಕೈಯಲ್ಲಿ ಕೂತಿದ್ದ ಕಾರ್ಮಿಕರು ಕೆಲಸ ಶುರು ಮಾಡಿದ್ದಾರೆ.

  English summary
  One of the fan asked sudeep to shooting in Karnataka itself. here is the kiccha sudeep reply to that Fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X