»   » ಲಂಡನ್ ಲಾರ್ಡ್ಸ್ ಮೈದಾನದಲ್ಲಿ ಕಿಚ್ಚನಿಗೆ ಗೆಲುವಿನ ಕಿರೀಟ

ಲಂಡನ್ ಲಾರ್ಡ್ಸ್ ಮೈದಾನದಲ್ಲಿ ಕಿಚ್ಚನಿಗೆ ಗೆಲುವಿನ ಕಿರೀಟ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಇಂಗ್ಲೆಂಡ್ ಲಾರ್ಡ್ಸ್ ಮೈದಾನದಲ್ಲಿ 'ಕಾರ್ಪೊರೇಟ್ ಕ್ರಿಕೆಟ್ ಡೇ 2017' ಪ್ರಯುಕ್ತ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲು ಹೋಗಿರುವ ಬಗ್ಗೆ ನಿಮಗೆ ಹೇಳಿದ್ವಿ. ಈ ಟೂರ್ನಮೆಂಟ್ ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿದ ಕಿಚ್ಚ ಸುದೀಪ್ ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.[ಕ್ರಿಕೆಟ್ ಆಡಲು ಬಂದ ಸುದೀಪ್ ಗೆ ಲಂಡನ್ ನಲ್ಲಿದೆ ಇನ್ನೊಂದು ಕೆಲಸ.! ಏನದು?]

ಲಂಡನ್ ಲಾರ್ಡ್ಸ್ ಮೈದಾನದಲ್ಲಿ ಕೇವಲ ಆಟಗಾರನಾಗಿ ಮಾತ್ರವಲ್ಲದೇ 'Visionnaire' ತಂಡವನ್ನು ಮುನ್ನೆಡೆಸಿದ್ದ ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ತಂಡದ ಬೆಂಬಲದಿಂದ ವಿಜಯಸಾಧಿಸಿದ್ದಾರೆ. ಮುಂದೆ ಓದಿರಿ.

'ಕಾರ್ಪೋರೇಟ್ ಕ್ರಿಕೆಟ್ ಡೇ' ಟೂರ್ನಮೆಂಟ್ ನಲ್ಲಿ ಸುದೀಪ್ ತಂಡಕ್ಕೆ ಜಯ

ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಫೈನಲ್ ಪಂದ್ಯದಲ್ಲಿ ಸುದೀಪ್ ರವರ 'Visionnaire)' ತಂಡ 'Deloitte' ಎಂಬ ತಂಡದ ವಿರುದ್ಧ ಗೆಲುವು ಸಾಧಿಸಿದೆ.[ಕಿಚ್ಚ ಸುದೀಪ್ ಗೆ ಲಂಡನ್‌ನಿಂದ ಬಂದಿದೆ ಸಿಹಿ ಸುದ್ದಿ; ಏನದು?]

ಗೆಲುವಿನ ಬಗ್ಗೆ ಸುದೀಪ್ ಟ್ವೀಟ್

ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಆಡಿ ಗೆದ್ದಿರುವ ಸುದೀಪ್, "ಲಾರ್ಡ್ಸ್ ಮೈದಾನದಲ್ಲಿ ಆಟವಾಡುವುದೇ ಹೆಮ್ಮೆ... ಇನ್ನು 'Deloitte' ತಂಡದ ವಿರುದ್ಧ ಆಟವಾಡಿ ಗೆಲುವು ಸಾಧಿಸುವುದು ಎಂದೂ ಮರೆಯಲಾಗದ ಕ್ಷಣ. ಆತಿಥ್ಯ ನೀಡಿ ಗೌರವಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

ಎಲ್‌ಇಡಿ ಸ್ಕ್ರೀನ್ ನಲ್ಲಿ ಸುದೀಪ್ ಮತ್ತು ತಂಡದವರ ಫೋಟೋ

ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಗೆಲುವು ಸಾಧಿಸಿದ ನಂತರ ಸುದೀಪ್ ಮತ್ತು ತಂಡದವರು ಫೋಟೋಗೆ ನೀಡಿದ ಪೋಸ್ ಲಾರ್ಡ್ಸ್ ಮೈದಾನದಲ್ಲಿಯ ಎಲ್‌ಇಡಿ ಸ್ಕ್ರೀನ್ ನಲ್ಲಿ ಕಾಣಿಸಿದ ಕ್ಷಣದ ಫೋಟೋವನ್ನು ಸುದೀಪ್ ಸಂತೋಷದಿಂದ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಗೆಲುವಿಗೆ ಸಪೋರ್ಟ್ ಮಾಡಿದ ಎಲ್ಲಾ ಸ್ನೇಹಿತರಿಗೆ ಶುಭಾಶಯ ಕೋರಿ ಧನ್ಯವಾದಗಳನ್ನು ಹೇಳಿ ಈ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಸೆಮಿಫೈನಲ್ ತಲುಪಿದ್ದ 'Visionnaire' ಟೀಮ್

ಸುದೀಪ್ ಮುನ್ನೆಡೆಸಿದ್ದ 'Visionnaire' ತಂಡ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಸೆಮಿಫೈನಲ್ ಗೆ ಆಯ್ಕೆಯಾಗಿತ್ತು. ಇದೊಂದು ಅಪರೂಪದ ಕ್ಷಣ ಎಂದು ಸುದೀಪ್ ಅವರ ತಂಡದವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಟ್ವಿಟರ್ ನಲ್ಲಿ ಅಪ್ ಡೇಟ್ ನೀಡಿದ್ದರು.

'ವಿಸನ್ಯಾಯ್ರ್' ಟೀಮ್ ಆಟಗಾರರ ಜೊತೆ ಸೆಲ್ಫಿ

ಸುದೀಪ್ ತಾವು ಮುನ್ನೆಡಿಸಿದ 'Visionnaire' ತಂಡದ ಆಟಗಾರರೊಂದಿಗೆ ತೆಗೆಸಿಕೊಂಡ ಫೋಟೋ.

ಲಂಡನ್ ಕ್ರಿಕೆಟರ್ ಜೊತೆ ಸುದೀಪ್

'ಕಾರ್ಪೋರೇಟ್ ಕ್ರಿಕೆಟ್ ಡೇ' ಟೂರ್ನಮೆಂಟ್ ನ ಪೈನಲ್ ಪಂದ್ಯದಲ್ಲಿ ಎದುರಾಳಿ ತಂಡ Deloitte ಆಟಗಾರರಾದ ಲಂಡನ್ ನ ಖ್ಯಾತ ಕ್ರಿಕೆಟರ್ Alex Tudor ಜೊತೆ ಸುದೀಪ್ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಷಣ ಹೇಗಿದೆ ನೋಡಿ.

ಮಾರ್ಕ್ ರಾಮ್‌ಪ್ರಕಾಶ್ ಮತ್ತು ಸುದೀಪ್

ಸುದೀಪ್ ಲಾರ್ಡ್ಸ್ ಮೈದಾನದಲ್ಲಿ ಲಂಡನ್ ಕ್ರಿಕೆಟರ್ ಮಾರ್ಕ್ ರಾಮ್‌ಪ್ರಕಾಶ್ ತಂಡದ ವಿರುದ್ಧವು ಕ್ರಿಕೆಟ್ ಆಡಿದರು. ಅವರೊಂದಿಗೆ ಕ್ರಿಕೆಟ್ ಆಟವಾಡಿದ ಸುಂದರ ಕ್ಷಣಗಳ ನೆನಪಿಗಾಗಿ ಫೋಟೋ ತೆಗೆಸಿಕೊಂಡು, ' ಮಾರ್ಕ್ ರಾಮ್‌ಪ್ರಕಾಶ್ ವಿರುದ್ಧ ಕ್ರಿಕೆಟ್ ಆಡುವ ಅತ್ಯುನ್ನತ ಅವಕಾಶ ನನಗೆ ಸಿಕ್ಕಿತು. ಅತ್ಯಂತ ಮೃದುಸಭಾವದ ವ್ಯಕ್ತಿ ಅವರು. ಥ್ಯಾಂಕ್ ಯು ಸರ್" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

English summary
Kichcha Sudeep led 'Visionnaire' team has won the Lord's corporate cricket tournament. After winning three successive matches they qualified for the semi finals. The team won and met the Deloitte team in the final. The Visionnaire won that final match.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X