For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಬಗ್ಗೆ ಥ್ರಿಲ್ಲಿಂಗ್ ಅನುಭವ ಹಂಚಿಕೊಂಡ ಸುದೀಪ್

  By Bharath Kumar
  |

  ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರ, ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಮಾಡುತ್ತಿದೆ. ನಟಿ ಆಮಿ ಜಾಕ್ಸನ್ ಕೂಡ ಚಿತ್ರತಂಡವನ್ನ ಸೇರಿಕೊಂಡಿದ್ದು, 'ವಿಲನ್' ವೇಗ ಮತ್ತಷ್ಟು ಹೆಚ್ಚಾಗಿದೆ.

  ಸದ್ಯ, ಬ್ಯಾಂಕಾಕ್ ಶೂಟಿಂಗ್ ನಲ್ಲಿರುವ ಸುದೀಪ್, ಬ್ಯಾಂಕಾಕ್ ಚಿತ್ರೀಕರಣದ ಅನುಭವವನ್ನ ಹಂಚಿಕೊಂಡಿದ್ದಾರೆ. ''ಬ್ಯಾಂಕಾಕ್ ನಲ್ಲಿ ಈ ಬಾರಿಯ ಚಿತ್ರೀಕರಣ ಅದ್ಭುತವಾಗಿತ್ತು. ಅಲ್ಲಿನ ಪೂರ್ವ ವ್ಯವಸ್ಥೆ, ಪ್ರೊಡಕ್ಷನ್ ಕೆಲಸ, ಇಡೀ ಚಿತ್ರತಂಡ ಮತ್ತು ತಾಂತ್ರಿಕವರ್ಗದ ಕೆಲಸಗಳು ಉತ್ತಮವಾಗಿದ್ದವು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಕೊನೆಗೂ 'ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಆಮಿ ಜಾಕ್ಸನ್

  ''ಮುಂದಿನ 10 ದಿನ ಚೇಸಿಂಗ್ ದೃಶ್ಯಗಳನ್ನ ಶೂಟ್ ಮಾಡುತ್ತಿದ್ದೇವೆ. ಚಿತ್ರದ ಸ್ಟೋರಿ ಬೋರ್ಡ್ ನೋಡಿದೆ. ಸಖತ್ ಥ್ರಿಲ್ಲಿಂಗ್ ಆಗಿದೆ. ಆದಷ್ಟೂ ಬೇಗ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದೇನೆ'' ಎಂದು ವಿಲನ್ ಚಿತ್ರದ ಶೂಟಿಂಗ್ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

  ಜೋಗಿ ಪ್ರೇಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಶಿವಣ್ಣ ಕೂಡ ಆದಷ್ಟೂ ಬೇಗ 'ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ಗೆ ಹಾರಲಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್, ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

  ಫಾರಿನ್ ನಲ್ಲಿ ಬೀಡುಬಿಟ್ಟ ಸ್ಯಾಂಡಲ್ ವುಡ್ ತಾರೆಯರು ಏನ್ ಮಾಡ್ತಿದ್ದಾರೆ?

  English summary
  Kannada Actor Kiccha Sudeep has taken his twitter account to Share His Bangkok Shooting Experience in The Villain Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X