For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಶುಭ ಕೋರಿದ ಕಿಚ್ಚ ಸುದೀಪ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅಪ್ಪು, ಈ ಬರಿ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.

  ಪ್ರಭಾಸ್ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ KGF ತಂಡ |Rocking Star Yash|KGF-2 | Prabhas|

  ಆದರೂ ಅಭಿಮಾನಿಗಳು ಅಪ್ಪು ನಿವಾಸದ ಬಳಿ ಬಂದು, ಪುನೀತ್ ನೋಡಲು, ಶುಭ ಕೋರಲು ಕಾಯುತ್ತಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳು ಮತ್ತು ಗಣ್ಯರು ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಗೆಳೆಯ ಪವರ್ ಸ್ಟಾರ್ ಗೆ ಕಿಚ್ಚ ಸುದೀಪ್ ಮತ್ತು ಪ್ರೀತಿಯ ಸಹೋದರ ಶಿವಣ್ಣ ವಿಶೇಷವಾಗಿ ಜನ್ಮದಿನಕ್ಕೆ ಶುಭಹಾರೈಸಿದ್ದಾರೆ. ಮುಂದೆ ಓದಿ..

  'ಪೈಲ್ವಾನ್' ವೇದಿಕೆಯಲ್ಲಿ ಕಿಚ್ಚನ 'ಅಪ್ಪು'ಗೆ: ಸುದೀಪ್ ಗಾಗಿ ಹಾಡಿದ ಪುನೀತ್'ಪೈಲ್ವಾನ್' ವೇದಿಕೆಯಲ್ಲಿ ಕಿಚ್ಚನ 'ಅಪ್ಪು'ಗೆ: ಸುದೀಪ್ ಗಾಗಿ ಹಾಡಿದ ಪುನೀತ್

  ಪುನೀತ್ ಗೆ ಕಿಚ್ಚನ ವಿಶ್

  ಪವರ್ ಸ್ಟಾರ್ ಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದಾರೆ. "ಯಾವಾಗಲು ನಿಮಗೆ ಹೆಚ್ಚು ಶಕ್ತಿ ಸಿಗಲಿ. ಹೆಚ್ಚು ಸಂತೋಷ, ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಶುಭ ಕೋರುತ್ತೇನೆ. ಅದ್ಭುತವಾದ ವರ್ಷ ನಿಮ್ಮದಾಗಲಿ, ಚಿಯರ್ಸ್" ಎಂದು ಹೇಳಿದ್ದಾರೆ.

  ಇಬ್ಬರು ಉತ್ತಮ ಸ್ನೇಹಿತರು

  ಇಬ್ಬರು ಉತ್ತಮ ಸ್ನೇಹಿತರು

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರ ಸ್ನೇಹ ಇವತ್ತಿ ನಿನ್ನೆಯದಲ್ಲ. ಇಬ್ಬರು ಚಿಕ್ಕ ವಯಸ್ಸಿನಿಂದಲೆ ಉತ್ತಮ ಗೆಳೆಯರು. ಸುದೀಪ್ ಮತ್ತು ಪುನೀತ್ ಇಬ್ಬರ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತೆ. ಇತ್ತೀಚಿಗೆ ಪೈಲ್ವಾನ್ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಪುನೀತ್ ಗೆಸ್ಟ್ ಆಗಿ ಬಂದಿದ್ದರು. ಕಾರ್ಯಕ್ರಮದಲ್ಲಿ ಬಾಲ್ಯದಲ್ಲಿ ಫೋಟೋಗೆ ಪೋಸ್ ನೀಡಿದ ಹಾಗೆ, ವೇದಿಕೆ ಮೇಲೆ ಅದೆ ಪೋಸ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ತಮ್ಮನಿಗೆ ಅಣ್ಣನ ವಿಶ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರೀತಿಯ ತಮ್ಮ ಅಪ್ಪುಗೆ ಶುಭಕೋರಿದ್ದಾರೆ. ಟ್ವೀಟ್ ಮಾಡಿರುವ ಶಿವಣ್ಣ " ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಅಪ್ಪು" ಎಂದು ಹೇಳಿದ್ದಾರೆ. ವಿಶೇಷ ಅಂದರೆ ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ತಂದೆ ಡಾ.ರಾಜ್ ಕುಮಾರ್ ಜೊತೆ ಇರುವ ಫೋಟೋ ಹಂಚಿಕೊಂಡು ಅಪ್ಪನನ್ನು ನೆನಪಿಸಿಕೊಂಡಿದ್ದಾರೆ.

  ನಟ ಗೋಲ್ಡನ್ ಗಣೇಶ್

  ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗೋಲ್ಡನ್ ಸ್ಟಾರ್ "ಹುಟ್ಟುಹಬ್ಬದ ಶುಭಾಶಯಗಳು ಪುನೀತ್ ರಾಜ್ ಕುಮಾರ್ ಸರ್" ಎಂದು ಹೇಳಿದ್ದಾರೆ.

  English summary
  Kannada Actor Sudeep, Shivarajkumar, Ganesh And Other stars birthday wish to Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X