»   » ಹೊಸ ತಿರುವು ಪಡೆದುಕೊಂಡ 'ಲೀಡರ್' ವಿವಾದ

ಹೊಸ ತಿರುವು ಪಡೆದುಕೊಂಡ 'ಲೀಡರ್' ವಿವಾದ

Posted By: ಉದಯರವಿ
Subscribe to Filmibeat Kannada

ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಲೀಡರ್' ಚಿತ್ರದ ವಿವಾದ ಹೊಸದೊಂದು ತಿರುವು ಪಡೆದುಕೊಂಡಿದೆ. ಒಂದೇ ಶೀರ್ಷಿಕೆಯಲ್ಲಿ ಇಬ್ಬರ ಚಿತ್ರಗಳೂ ಘೋಷಣೆಯಾಗಿದ್ದು ಬಳಿಕ ವಿವಾದ ತಣ್ಣಗಾಗಿದ್ದು ಗೊತ್ತೇ ಇದೆ.

ಇದೀಗ ಸುದೀಪ್ ಚಿತ್ರದ ನಿರ್ಮಾಪಕರಾದ ರಘುನಾಥ್ ಅವರು, ನನಗೆ ನ್ಯಾಯ ಸಿಗಲಿಲ್ಲ ಎಂದರೆ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಸುದೀಪ್ ಅವರ ಚಿತ್ರಕ್ಕೆ 'ದಿ ಲೀಡರ್' ಎಂದು ಹೆಸರಿಡಲಾಗಿತ್ತು. ಅದಾದ ಬಳಿಕ ಶಿವಣ್ಣ ಅವರ 'ದಿ ಲೀಡರ್ ಶಿವರಾಜ್ ಕುಮಾರ್' ಚಿತ್ರ ಅನೌನ್ಸ್ ಆಯಿತು. [ಸುದೀಪ್ 'ದಿ ಲೀಡರ್', ಶಿವಣ್ಣ 'ಮಾಸ್ ಲೀಡರ್']

Sudeep, Shivrajkumar

ತಾವು ಫಿಲಂ ಚೇಂಬರ್ ನಲ್ಲಿ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದೇವೆ. ನಿಯಮಗಳ ಪ್ರಕಾರ ಅದೇ ರೀತಿಯ ಶೀರ್ಷಿಕೆಯನ್ನು ಹೋಲುವ ಮತ್ತೊಂದು ಶೀರ್ಷಿಕೆ ನೀಡುವಂತಿಲ್ಲ. ಹೀಗಿದ್ದೂ 'ದಿ ಲೀಡರ್ ಶಿವರಾಜ್ ಕುಮಾರ್' ಎಂಬ ಶೀರ್ಷಿಕೆಯಲ್ಲಿ ಚಿತ್ರ ಮಾಡಲು ಹೊರಟಿದ್ದು ಯಾವ ನ್ಯಾಯ ಎಂಬುದು ಅವರ ವಾದ.

ಮೂರು ವರ್ಷದ ಹಿಂದೆ ತಾವು 'ದಿ ಲೀಡರ್' ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದೆವು. ನಿಯಮಗಳ ಪ್ರಕಾರ, ನೋಂದಾಯಿಸಿಕೊಂಡ ಶೀರ್ಷಿಕೆಯೊಂದರ ಪೂರ್ವದಲ್ಲಾಗಲಿ, ಅಂತ್ಯದಲ್ಲಾಗಲಿ ಮತ್ತೊಂದು ಪದ ಬಳಸುವಂತಿಲ್ಲ. ಹಾಗಿದ್ದೂ 'ದಿ ಲೀಡರ್, ಶಿವರಾಜ್ ಕುಮಾರ್' ಎಂದು ಇದೀಗ 'ಮಾಸ್ ಲೀಡರ್' ಎಂದೂ ಶೀರ್ಷಿಕೆ ಬದಲಾಯಿಸಿಕೊಂಡು ಚಿತ್ರ ನಿರ್ಮಿಸಲು ಹೊರಟಿದ್ದಾರೆ.

ಇದನ್ನು ವಿರೋಧಿಸಿ ತಾವು ಫಿಲಂ ಚೇಂಬರ್ ಗೆ ಪತ್ರ ಬರೆಯುತ್ತೇನೆ. ನಾನು ಯಾರ ಪರವೂ ಅಲ್ಲ. ನನಗೆ ನ್ಯಾಯ ಬೇಕು. ಒಂದು ವೇಳೆ ಫಿಲಂ ಚೇಂಬರ್ ನಲ್ಲಿ ನ್ಯಾಯ ಸಿಗಲಿಲ್ಲ ಎಂದರೆ ನಮ್ಮ ವಕೀಲರಿಂದ ಕಾನೂನು ಸಲಹೆ ಪಡೆದು ಕೋರ್ಟ್ ಮೆಟ್ಟಿಲೇರುತ್ತೇನೆ ಎಂದಿದ್ದಾರೆ ಸುದೀಪ್ ಚಿತ್ರದ ನಿರ್ಮಾಪಕ ರಘುನಾಥ್.

English summary
Kichcha Sudeep starer 'Leader' producer Raghunath decides to go court, if he doesn't get justice at Film Chamber. Just a week after the film 'Leader' was announced, another film called 'The Leader Shivrajkumar' was announced.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada