twitter
    For Quick Alerts
    ALLOW NOTIFICATIONS  
    For Daily Alerts

    ಛೇ ! ಸುದೀಪ್ ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕಿತ್ತು|

    By Mahesh
    |

    'ಈಗ' ಚಿತ್ರದ ಅಭಿನಯಕ್ಕಾಗಿ ಸುದೀಪ್ ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕಿತ್ತು ಹೇಗೆ ಮಿಸ್ ಆಯ್ತೋ ಗೊತ್ತಿಲ್ಲ ಹೀಗೆ ಹೇಳಿದವರು ಕಿಚ್ಚ ಸುದೀಪ್ ಅಭಿಮಾನಿಗಳಲ್ಲ. ವಿಭಿನ್ನ ಚಿತ್ರಗಳನ್ನು ನೀಡಿರುವ ಯಶಸ್ವಿ ನಿರ್ದೇಶಕ ರಾಜಮೌಳಿ. ಕನ್ನಡದ ನಾಯಕ ನಟ ಸುದೀಪ್ ಅವರನ್ನು ತೆಲುಗಿನ 'ಈಗ' ಚಿತ್ರದಲ್ಲಿ ನೆಗಟಿವ್ ರೋಲ್ ನಲ್ಲಿ ನಟಿಸುವಂತೆ ಮಾಡಿ ಗೆದ್ದ ರಾಜಮೌಳಿ ಅವರು ಬೇಸರದಿಂದ ಹೇಳಿದ ಮಾತುಗಳಿವು.

    ಸೋಮವಾರ(ಮಾ.19) ಪ್ರಕಟಗೊಂಡ 60ನೇ ರಾಷ್ಟ್ರೀಯ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಮೇಲ್ನೋಟಕ್ಕೆ ಮುಕ್ಕಾಲು ಪಾಲು ಮಲೆಯಾಳಂ ಚಿತ್ರಗಳಿಗೆ ಎಲ್ಲಾ ಪ್ರಶಸ್ತಿಗಳು ಸಂದಿರುವುದು ಕಂಡು ಬರುತ್ತದೆ. ತೆಲುಗಿನ 'ಈಗ' ಚಿತ್ರಕ್ಕೆ ಎರಡು ಪ್ರಶಸ್ತಿ ಲಭಿಸಿದ್ದು, ಚಿತ್ರ ತಂಡ ಸಂತಸದಲ್ಲಿದೆ. ಆದರೆ, ನಿರ್ದೇಶಕ ರಾಜಮೌಳಿ ಅವರು ಕಿಚ್ಚ ಸುದೀಪ್ ಅವರಿಗೆ ಪ್ರಶಸ್ತಿ ಸಿಗದಿದ್ದಕ್ಕೆ ಬೇಜಾರಾಗಿದೆ ಎಂದಿದ್ದಾರೆ. [ರಾಷ್ಟ್ರಪ್ರಶಸ್ತಿ ಪೂರ್ಣ ಪಟ್ಟಿ ನೋಡಿ]

    ಕಿಚ್ಚ ಸುದೀಪ್ ಅಭಿನಯಕ್ಕೆ ದಕ್ಷಿಣ ಭಾರತ ಚಿತ್ರರಂಗದಲ್ಲಷ್ಟೇ ಅಲ್ಲ, ಹಿಂದಿ ಚಿತ್ರರಂಗದಿಂದಲೂ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ರಾಜಮೌಳಿ ಅವರು ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ

    "Congratulations&thanks2 my producer Sai garu4 believing in content&emotion of eega and suresh babu garu4 his ability to envision my dream." ಎಂದು ಟ್ವೀಟ್ ಮಾಡಿದ ಮೇಲೆ

    But I would have been really happy had Sudeep received the recognition for his extraordinary efforts. Eega is not the same without him." ಎಂದು ಟ್ವೀಟಿಸಿದ್ದರು..

    ಇಷ್ಟಕ್ಕೂ ಗ್ರಾಫಿಕ್ಸ್, ಅನಿಮೇಷನ್ ಆಧಾರಿತ ಚಿತ್ರದಲ್ಲಿ ಸುದೀಪ್ ಅಭಿನಯಕ್ಕೆ ಎಷ್ಟರಮಟ್ಟಿಗೆ ಸ್ಕೋಪ್ ಇತ್ತು? ಸುದೀಪ್ ನಿಜಕ್ಕೂ ರಾಷ್ಟ್ರಪ್ರಶಸ್ತಿಗೆ ಅರ್ಹರಾಗಿದ್ದರೆ? ಮುಂದೆ ಓದಿ...

    ರೊಮ್ಯಾಂಟಿಕ್ ಕಥನ

    ರೊಮ್ಯಾಂಟಿಕ್ ಕಥನ

    ಈಗ ಚಿತ್ರ ಒಂದು ರೊಮ್ಯಾಂಟಿಕ್ ಕಥನವಾಗಿದ್ದು ಇದಕ್ಕೆ ಅನಿಮೇಷನ್ ಪೂರಕವಾಗಿ ಕೂಡಿ ಕೊಂಡಿದೆ. ಆದರೆ, ಚಿತ್ರದಲ್ಲಿ ನಾಯಕ ಪುನರ್ಜನ್ಮದಲ್ಲಿ 'ನೊಣ' ಆಗಿ ಪ್ರತ್ಯಕ್ಷವಾದ ಮೇಲೆ ಸುದೀಪ್ ಅದರ ಜೊತೆಗೆ ಹೋರಾಟ ನಡೆಸುವುದು ಅದ್ಭುತವಾಗಿ ಮೂಡಿ ಬಂದಿದೆ. ಇಡೀ ಚಿತ್ರ ಸುದೀಪ್ ಸುತ್ತ ಸುತ್ತುತ್ತದೆ.

    ಸುದೀಪ್ ಕಂಠ ಪ್ಲಸ್ ಪಾಯಿಂಟ್

    ಸುದೀಪ್ ಕಂಠ ಪ್ಲಸ್ ಪಾಯಿಂಟ್

    ಚಿತ್ರದಲ್ಲಿ ಸಮಂತಾ, ನಾನಿ ಪ್ರಮುಖ ಭೂಮಿಕೆಯಲ್ಲಿದ್ದು, ಎಂಎಂ ಕೀರವಾಣಿ ಸಂಗೀತ, ಕೆಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಪೂರಕವಾಗಿ ಹೊಂದಿಕೊಂಡಿದೆ. ಸುದೀಪ್ ಅವರು ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿರುವುದು ವಿಶೇಷ. ಅವರ ಕಂಚಿನ ಕಂಠ, ಅಭಿನಯ ಎಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

    ಥ್ರಿಲ್ಲಿಂಗ್ ಅಭಿನಯ

    ಥ್ರಿಲ್ಲಿಂಗ್ ಅಭಿನಯ

    ನೊಣ ರೂಪಿ ನಾಯಕ ವಿಲನ್ ಸುದೀಪ್ ಮೇಲೆ ರಿವೇಂಜ್ ತೆಗೆದುಕೊಳ್ಳುವ ಕಥೆ ಸುದೀಪ್ ಅವರು ಅಭಿನಯಿಸುವಾಗ ಎದುರುಗಡೆ ಯಾವುದೇ ಪಾತ್ರಧಾರಿ ಇಲ್ಲದೆ ನೊಣ ಇದೆ ಎಂದು ಕಲ್ಪಿಸಿಕೊಂಡು ಅಭಿನಯಿಸಬೇಕಾಗಿತ್ತು. ಇದು ಎಷ್ಟು ಕಷ್ಟಕರ ಎಂಬುದು ಅಭಿನಯಿಸಿದವರಿಗೆ ಗೊತ್ತು.

    ಇಡೀ ಚಿತ್ರದಲ್ಲಿ ನಾಯಕನಿಗಿಂತ ವಿಲನ್ ರೂಪಧಾರಿ ಸುದೀಪ್ ಗೆ ಹೆಚ್ಚಿನ ಅಭಿನಯದ ಅವಕಾಶಗಳಿದೆ. ವಿವಿಧ ರಸಗಳನ್ನು ಒಮ್ಮೆಗೆ ಹೊರ ಹೊಮ್ಮಿಸುವ ಮೂಲಕ ಎಲ್ಲೂ ಕೂಡಾ ಓವರ್ ಆಗಿ ಕಾಣಿಸದೆ ಎಲ್ಲರಿಗೂ ಇಷ್ಟವಾಗುವ ರೀತಿ ಸುದೀಪ್ ನಟಿಸಿದ್ದಾರೆ.

    ದೃಶ್ಯ ವೈಭಕ್ಕೆ ತಕ್ಕ ನಟನೆ

    ದೃಶ್ಯ ವೈಭಕ್ಕೆ ತಕ್ಕ ನಟನೆ

    ಉತ್ತಮ ಸಂಭಾಷಣೆ ಜೊತೆಗೆ ಯಕಶ್ಚಿತ್ ನೊಣವೊಂದು ನನ್ನನ್ನು ಕೊಲ್ಲಲು ತಯಾರಾಗುತ್ತಿದೆ ಎಂಬ ವಿಷಯ ಮನದಟ್ಟಾದಾಗ ಸುದೀಪ್ ಮುಖದಲ್ಲಿ ಮೂಡುವ ಭಾವನೆ, ಹುಚ್ಚು ಹಿಡಿದಂತೆ ನೊಣ ಕೊಲ್ಲಲ್ಲು ಮುಂದಾಗುವ ರೀತಿ ಪ್ರಶಂಸನೀಯ. ರಾಹುಲ್ ವೇಣುಗೋಪಾಲ್ ಪೀಟ್ ಡ್ರೇಪರ್ ಒಳಗೊಂಡ ಮಕುಟ ಎಫೆಕ್ಟ್ ತಂಡ ನೀಡಿರುವ ವಿಶ್ಯುವಲ್ ಎಫೆಕ್ಟ್ ಅಭಿನಯಕ್ಕೆ ಸಾಥ್ ನೀಡಿದೆ.

    ಎಲ್ಲೆಡೆ ಸಿಕ್ಕಿತು ಯಶಸ್ಸು

    ಎಲ್ಲೆಡೆ ಸಿಕ್ಕಿತು ಯಶಸ್ಸು

    ಈಗ ಚಿತ್ರ, ತೆಲುಗು, ತಮಿಳಿನಲ್ಲಿ ಯಶಸ್ವಿಯಾಗಿದ್ದಲ್ಲದೆ ಹಿಂದಿಯಲ್ಲಿ ಜನಪ್ರಿಯತೆ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿತು. ರಾಷ್ಟ್ರಮಟ್ಟದಲ್ಲಿ ಕನ್ನಡಿಗ ಸುದೀಪ್ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

    ಸುಮಾರು 26 ಕೋಟಿ ಬಜೆಟ್ ನಲ್ಲಿ ತಯಾರಾದ ಈಗ ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಚಿತ್ರದ ಗಳಿಕೆ 125 ಕೋಟಿ ದಾಟಿದೆ. ಈಗ ಚಿತ್ರದ ಡಿವಿಡಿ ಕೂಡಾ ಭರ್ಜರಿ ಬೇಡಿಕೆ ಪಡೆದಿದೆ.

    ಸುದೀಪ್ ಟ್ರ್ಯಾಕ್ ರೆಕಾರ್ಡ್

    ಸುದೀಪ್ ಟ್ರ್ಯಾಕ್ ರೆಕಾರ್ಡ್

    1997ರಲ್ಲಿ ಚಿತ್ರರಂಗ ಪ್ರವೇಶಿಸಿದ ಸುದೀಪ್ 1999ರಲ್ಲಿ ಸ್ಪರ್ಶ ಚಿತ್ರದ ಮೂಲಕ ನಾಯಕರಾದರು. ಅದರೆ, ಅವರಿಗೆ ಬ್ರೇಕ್ ನೀಡಿದ್ದು ಹುಚ್ಚ ಚಿತ್ರ.

    ಕನ್ನಡ ಹೊರತುಪಡಿಸಿ ಹಿಂದಿಯಲ್ಲಿ ಫೂಂಕ್, ರಣ್, ರಕ್ತ್ ಚರಿತ್ರ ಚಿತ್ರದಲ್ಲಿ ನಟಿಸಿದ್ದಾರೆ. ತೆರೆ ಕಾಣಬೇಕಿರುವ Action, ಆಸು ರಾಜ ರಾಣಿ ಜಾಕಿ ಮಟ್ರಂ ಜೋಕರ್ ಹೆಸರಿನ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅತಿಥಿ ಪಾತ್ರಧಾರಿಯಾಗಿ ನಟಿಸಿದ್ದಾರೆ.
    ಸುದೀಪ್ ಗೆ ಪ್ರಶಸ್ತಿಗಳು ಹೊಸದಲ್ಲ

    ಸುದೀಪ್ ಗೆ ಪ್ರಶಸ್ತಿಗಳು ಹೊಸದಲ್ಲ

    ಸುದೀಪ್ ಗೆ ಈಗಾಗಲೇ ಹುಚ್ಚ, ನಂದಿ, ಸ್ವಾತಿ ಮುತ್ತು ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಸಿಕ್ಕಿದೆ. ನಂದಿ ಚಿತ್ರದ ಅಭಿನಯಕ್ಕೆ ರಾಜ್ಯಪ್ರಶಸ್ತಿ ಗಳಿಸಿದ್ದಾರೆ. ಮೂರು ಬಾರಿ ಫಿಲಂ ಫೇರ್ ಗೆ ನಾಮಾಂಕಿತರಾಗಿದ್ದಾರೆ. ನಟನೆ ಮಾತ್ರವಲ್ಲದೆ ನಿರ್ದೇಶಕರಾಗಿ ಕೂಡಾ ಸುದೀಪ್ ಯಶಸ್ವಿಯಾಗಿದ್ದಾರೆ. ಬೆಸ್ಟ್ ವಿಲನ್ ಎಂದು 2012ನೇ ಸಾಲಿನ ಎಡಿಸನ್ ಪ್ರಶಸ್ತಿ ಕೂಡಾ ಲಭಿಸಿದೆ.

    ಪ್ರತಿಭೆಗೆ ತಕ್ಕ ಮನ್ನಣೆ ಬೇಕಿದೆ

    ಪ್ರತಿಭೆಗೆ ತಕ್ಕ ಮನ್ನಣೆ ಬೇಕಿದೆ

    ಹಲವು ಪ್ರಶಸ್ತಿಗಳನ್ನು ಗಳಿಸಿದರೂ ಸುದೀಪ್ ಗೆ ನಟನೆಗಿಂತ ನಿರ್ದೇಶನವೇ ಇಷ್ಟವಂತೆ. ಏಕೆಂದರೆ ಹೆಚ್ಚೆಚ್ಚು ಕಲಿಯಬಹುದು ಎನ್ನುತ್ತಾರೆ. ಅಮಿತಾಬ್, ರಾಜಮೌಳಿ ಸೇರಿದಂತೆ ಚಿತ್ರರಂಗ ಹಲವಾರು ಪ್ರಮುಖರು ಸುದೀಪ್ ಪ್ರತಿಭೆಗೆ ತಕ್ಕ ಮನ್ನಣೆ ಇನ್ನೂ ಸಿಗಬೇಕು ಎಂದು ನಂಬಿದ್ದಾರೆ.

    English summary
    Telugu action extravaganza Eega has pocketed two National Film Awards on Monday and the film unit is very happy with these recognitions. But ace director SS Rajamouli does not seem to be very happy with the selection committee of this Awards as he wanted it to honour Kicha Sudeep's performance with an award.
    Tuesday, March 19, 2013, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X