»   » ಸುದೀಪ್ ಕಂಠಸಿರಿಯಲ್ಲಿ 'ಬಚ್ಚನ್' ಪ್ರಚಾರ ಗೀತೆ

ಸುದೀಪ್ ಕಂಠಸಿರಿಯಲ್ಲಿ 'ಬಚ್ಚನ್' ಪ್ರಚಾರ ಗೀತೆ

Posted By:
Subscribe to Filmibeat Kannada

ಶಶಾಂಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಚಿತ್ರದ ಪ್ರಚಾರ ಗೀತೆಯ ಚಿತ್ರೀಕರಣ ಇತ್ತೀಚೆಗೆ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆಯಿತು. ಶ್ರೀ ವೆಂಕಟೇಶ್ವರ ಕೃಪಾ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದು. (ಬಚ್ಚನ್ ಧ್ವನಿಸುರುಳಿ ವಿಮರ್ಶೆ ಓದಿ)

ವಿ.ಹರಿಕೃಷ್ಣ ಸಂಗೀತ ನೀಡಿರುವ 'ಬಚ್ಚನ್' ಚಿತ್ರದ ಹಾಡುಗಳು ಈಗಾಗಲೇ ಕೇಳುಗರ ಮನ ಗೆದ್ದಿದೆ. ಚಿತ್ರದಲ್ಲಿ ಗಾಯಕ ವಿಜಯ ಪ್ರಕಾಶ್ ಹಾಡಿರುವ 'ಹಲೋ ಹಲೋ...' ಎಂಬ ಹಾಡನ್ನು ನೇರ ವಾದ್ಯಗಳನ್ನು ಬಳಸಿಕೊಂಡು ಚಿತ್ರದ ನಾಯಕ ಸುದೀಪ್ ಹಾಡಿದ್ದಾರೆ.


ಬಾಲಿವುಡ್ ಮುಂತಾದ ಕಡೆ ಚಿತ್ರದ ಮೂಲ ಹಾಡನ್ನು ಬೇರೆ ಗಾಯಕರು ಹಾಡುವುದನ್ನು ನೋಡಿದ್ದೇವೆ. ಆದರೆ ಚಿತ್ರದ ನಾಯಕರೇ ಮೂಲ ಗೀತೆಯನ್ನು ಹಾಡಿರುವುದು ಇದೇ ಮೊದಲು ಎನ್ನುತ್ತಾರೆ ನಿರ್ದೇಶಕ ಶಶಾಂಕ್.

ಸುದೀಪ್, ಪಾರೂಲ್ ಯಾದವ್, ತುಲಿಪ್ ಜೋಶಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ.

'ಜರಾಸಂಧ' ಚಿತ್ರದ ಸೋಲಿನ ಬಳಿಕ ಶಶಾಂಕ್ ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದ್ದು ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಏಪ್ರಿಲ್ 11ರ ಗುರುವಾರದಂದು ತೆರೆಗೆ ಅಪ್ಪಳಿಸುತ್ತಿದೆ. ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡ ಜಾಲತಾಣದಲ್ಲಿ 'ಬಚ್ಚನ್' ಚಿತ್ರದ ವಿಮರ್ಶೆ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

English summary
Kannada actor Kichcha Sudeep sings a promotional song for Kannada film Bachchan. Which stars himself with three heroines. Song bit...Hello Hello music by V Harikrishna. The film directed by Shashank featuring Sudeep, Bhavana, Tulip Joshi and Parul Yadav in the lead roles. The movie slated for release on 11th April, 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada