ಬರ್ತಡೇ ದಿನ ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸುದೀಪ್
Recommended Video

ಡಾ.ವಿಷ್ಣುವರ್ಧನ್ ಅವರ ಹೆಸರಲ್ಲಿ ರಾಷ್ಟ್ರಮಟ್ಟದ ಹಬ್ಬವನ್ನ ಆಚರಿಸಿದ್ದ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಮತ್ತೆ ಬರ್ತಿದೆ. ಕಳೆದ ವರ್ಷ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿದ್ದ ಈ ಉತ್ಸವ ಈಗ 2018ನೇ ಸಾಲಿನಲ್ಲಿ ಮತ್ತೆ ನಡೆಯಲಿದೆ.
ಸೆಪ್ಟೆಂಬರ್ 16, 17 ಹಾಗೂ 18 ರಂದು ಮೂರು ದಿನಗಳ ಕಾಲ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ನಡೆಯಲಿದ್ದು, ಈ ಬಾರಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. 'ಡಾ ವಿಷ್ಣು ಸೇನಾ ಸಮಿತಿ'ಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮ, ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಜರುಗಲಿದೆ.
ವಿಷ್ಣುದಾದ ಅವರು ಈ ರಾಷ್ಟ್ರೀಯ ಉತ್ಸವಕ್ಕೆ ಈ ಬಾರಿ ಕಿಚ್ಚ ಸುದೀಪ್ ಅವರ ಸಾಥ್ ಕೊಡ್ತಿದ್ದಾರೆ. ಹೌದು, ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದ ಗೀತೆಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಡ್ತಿದ್ದಾರೆ.

ಈ ಮೂಲಕ ಸಾಹಸ ಸಿಂಹ ಅಭಿಮಾನಿಗಳಿಗೆ ಇದು ಮತ್ತಷ್ಟು ಸ್ಪೆಷಲ್ ಆಗಲಿದೆ. ಹೇಳಿ ಕೇಳಿ ಸುದೀಪ್ ಅವರು ಮೊದಲೇ ವಿಷ್ಣುವರ್ಧನ್ ಅವರ ಅಭಿಮಾನಿ. ತನ್ನ ನೆಚ್ಚಿನ ನಟ ಉತ್ಸವದ ಗೀತೆಯನ್ನ ಹಾಡುತ್ತಿದ್ದಾರಂದ್ರೆ ಅದು ಹೇಗಿರಬೇಡ ಎಂಬ ಕುತೂಹಲ ಕನ್ನಡ ಕಲಾರಸಿಕರದ್ದು.
ಇಂದು ಸುದೀಪ್ ಅವರ 45ನೇ ಹುಟ್ಟುಹಬ್ಬ. ಈ ವಿಶೇಷವಾಗಿ ಈ ವಿಷ್ಯವನ್ನ ವಿಷ್ಣು ಸೇನಾ ಸಮಿತಿ ಬಹಿರಂಗಪಡಿಸಿದೆ. ಆದ್ರೆ, ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದ ಗೀತೆ ಯಾವಾಗ ಬಿಡುಗಡೆಯಾಗುತ್ತೆ ಎಂಬುದು ಕಾದು ನೋಡಬೇಕಿದೆ.


Click it and Unblock the Notifications











