»   » ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಘರ್ಜಿಸಿತು 'ಹೆಬ್ಬುಲಿ'

ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಘರ್ಜಿಸಿತು 'ಹೆಬ್ಬುಲಿ'

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ಹೆಬ್ಬುಲಿ' ರಾಜ್ಯಾದ್ಯಂತ ಇಂದು ಬಿಡುಗಡೆಯಾಗಿದ್ದು, ಮಧ್ಯರಾತ್ರಿಯಿಂದಲೇ 'ಹೆಬ್ಬುಲಿ' ಪ್ರದರ್ಶನ ಕಾಣುತ್ತಿದೆ.

ಸುಮಾರು 4೦0ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ 'ಹೆಬ್ಬುಲಿ' ರಿಲೀಸ್ ಆಗುತ್ತಿದ್ದು, ಇಂದು ಸ್ಯಾಂಡಲ್ ವುಡ್ ಪೂರ್ತಿ 'ಹೆಬ್ಬುಲಿ'ಯಿಂದ ಆವೃತವಾಗಿದೆ. ಹಾಗಾದ್ರೆ, 'ಹೆಬ್ಬುಲಿ' ಘರ್ಜನೆ ಎಲ್ಲೆಲ್ಲಿ, ಹೇಗೆ ಆರಂಭವಾಗಿದೆ ಎಂಬುದನ್ನ ನೋಡಿ....


ದಾವಣೆಗೆರೆಯಲ್ಲಿ ಅಬ್ಬರಿಸಿದ 'ಹೆಬ್ಬುಲಿ'

'ದಾವಣೆಗೆರೆ'ಯಲ್ಲಿ ಮುಂಜಾನೆಯೇ 'ಹೆಬ್ಬುಲಿ' ಪ್ರದರ್ಶನವಾಗಿದ್ದು, ಚಿತ್ರಮಂದಿರ ಹೌಸ್ ಫುಲ್ ಆಗಿತ್ತು.


ಶಿವಮೊಗ್ಗದಲ್ಲಿ 'ಕಿಚ್ಚನ ಆರ್ಭಟ'

ಶಿವಮೊಗ್ಗದಲ್ಲೂ ಬೆಳ್ಳಂಬೆಳಿಗ್ಗೆನೇ 'ಹೆಬ್ಬುಲಿ' ಆರ್ಭಟ ಶುರುವಾಗಿದ್ದು, ಮೊದಲ ಶೋ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.


'ಹೆಬ್ಬುಲಿ'ಯನ್ನ ಸ್ವಾಗತಿಸಿದ ಚೆನ್ನಪಟ್ಟಣ

ಬೆಳಿಗ್ಗೆ 7 ಗಂಟೆಗೆ ಚೆನ್ನಪಟ್ಟಣದಲ್ಲಿ 'ಹೆಬ್ಬುಲಿ' ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ.


ತಾವರೆಕೆರೆಯಲ್ಲಿ 'ಕಿಚ್ಚೋತ್ಸವ'

ಬೆಂಗಳೂರಿನ ತಾವರೆಕೆರೆಯ ಲಕ್ಷ್ಮಿ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ 'ಹೆಬ್ಬುಲಿ' ತೆರೆಕಂಡಿದ್ದು, ಮುಂಜಾನೆಯೇ ಮೊದಲ ಶೋ ಪ್ರದರ್ಶನ ಕಂಡಿದೆ.


'ಶಾರದ ಚಿತ್ರಮಂದಿರ'ದಲ್ಲಿ ಸ್ಪೆಷಲ್

ಬೆಂಗಳೂರಿನಲ್ಲಿರುವ 'ಶಾರದ ಚಿತ್ರಮಂದಿರ', 'ಹೆಬ್ಬುಲಿ' ಚಿತ್ರವನ್ನ ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಚಿತ್ರಮಂದಿರದ ಎದುರು ವಿಶೇಷವಾಗಿ 'ಹೆಬ್ಬುಲಿ' ಕಟೌಟ್ ಡಿಸೈನ್ ಮಾಡಲಾಗಿದೆ.


ಸಂತೋಷ್ ಚಿತ್ರಮಂದಿರದಲ್ಲಿ ಕ್ಷಣಗಣನೆ

ಕೆ.ಜಿ ರಸ್ತೆಯಲ್ಲಿರುವ 'ಸಂತೋಷ್' ಚಿತ್ರಮಂದಿರ 'ಹೆಬ್ಬುಲಿ' ಚಿತ್ರಕ್ಕೆ ಮೇನ್ ಥಿಯೇಟರ್. ಬೆಳಿಗ್ಗೆ 10.30ಕ್ಕೆ ಮೊದಲ ಶೋ ಆರಂಭವಾಗಲಿದ್ದು, ಈಗಾಗಲೇ ಎಲ್ಲ ಸಿದ್ದತೆಗಳು ಆಗಿವೆ.


ಅಭಿಮಾನಿಗಳ ಹಬ್ಬ

ಸುದೀಪ್ ಅಭಿನಯದ ಹಬ್ಬುಲಿಯನ್ನ ನೋಡಲು, ಕಿಚ್ಚನ ಅಭಿಮಾನಿಗಳು ರಾತ್ರಿಯಿಂದಲೇ ಚಿತ್ರಮಂದಿರದ ಬಳಿ ಕಾಯುತ್ತಿದ್ದಾರೆ. ಮೊದಲ ದಿನ ಮೊದಲ ಶೋ ನೋಡಬೇಕು ಎಂಬ ಆಸೆಯಿಂದ ಟಿಕೆಟ್ ಕಾಯ್ದರಿಸಿ ಸಿನಿಮಾ ನೋಡುತ್ತಿದ್ದಾರೆ. ಒಟ್ನಲ್ಲಿ, ಕಿಚ್ಚನ ಫ್ಯಾನ್ಸ್ ಗಿಂದು ಹಬ್ಬವೇ ಸರಿ.


English summary
According to Jack Manju, the film distributor, Hebbuli Released at over 400 theatres including multiplexes, thus creating a record in Kannada film industry. Hebbuli sudeep starrer and Krishna Directional Movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X