ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಪೈಲ್ವಾನ್: ಯಾವಾಗ ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಪೈಲ್ವಾನ್ ಸಿನಿಮಾ ರಿಲೀಸ್ ಆಗಿ ಮೂರು ತಿಂಗಳಾಗಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಗಳೊಂದಿಗೆ ರಿಲೀಸ್ ಆದ ಪೈಲ್ವಾನ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪೈರಸಿ ಸಮಸ್ಯೆ ನಡುವೆಯು ಗೆದ್ದು ಬೀಗಿರುವ ಪೈಲ್ವಾನ್ ಈಗ ಕನ್ನಡಿಗರ ಮನೆಯಲ್ಲಿಯೆ ಪ್ರಸಾರವಾಗಲಿದೆ.

ಹೌದು, ಪೈಲ್ವಾನ್ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಆಗಲೆ ಮೂರು ತಿಂಗಳು ಕಳೆದಿವೆ. ಪೈಲ್ವಾನ್ ಈಗ ಹೊಸ ವರ್ಷಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಪೈಲ್ವಾನ್ ಗಾಗಿ ಕಿಚ್ಚ ಸಖತ್ ವರ್ಕೌಟ್ ಮಾಡಿ ದೇಹದಂಡಿಸಿ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದರು. ಮೊದಲ ಬಾರಿಗೆ ಸುದೀಪ್ ತೆರೆ ಮೇಲೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪೈಲ್ವಾನ್ ಪ್ರಸಾರವಾಗುತ್ತಿದೆ. ಇದೆ ತಿಂಗಳು 12ಕ್ಕೆ ಟಿವಿಯಲ್ಲಿ ಬರ್ತಿದೆ. ದೊಡ್ಡ ಪರದೆಯ ಮೇಲೆ ಪೈಲ್ವಾನ್ ನೋಡದೆ ಮಿಸ್ ಮಾಡಿಕೊಂಡವರು ಕಿರುತೆರೆಯಲ್ಲಿ ನೋಡಿ ಎಂಜಾಯ್ ಮಾಡಬಹುದು. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿ ಜನವರಿ 12ಕ್ಕೆ ಪೈಲ್ವಾನ್ ಪ್ರಸಾರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

 Sudeep Starrer Pailwan Film Will Telecast In Zee Kannada

ಪೈಲ್ವಾನ್ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಬಣ್ಣಹಚ್ಚಿಸಿದ್ದಾರೆ. ಮೊದಲ ಬಾರಿಗೆ ಸುನೀಲ್ ಶೆಟ್ಟಿ ಕನ್ನಡ ಸಿನಿಪ್ರಿಯರ ಮುಂದೆ ಬಂದಿದ್ದಾರೆ. ಅಂದ್ಹಾಗೆ ಪೈಲ್ವಾನ್ ಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರಕ್ಕೆ ಸ್ವಪ್ನ ಕೃಷ್ಣ ಬಂಡವಾಳ ಹೂಡಿದ್ದಾರೆ.

More from Filmibeat

English summary
Kannada actor Sudeep starrer Pailwan film will telecast in Zee Kannada. This movie is directed by Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X