»   » ತಮಿಳು ನಟ ವಿಜಯ್ ಗೆ ಅಣ್ಣನಾದ ಕಿಚ್ಚ ಸುದೀಪ್?

ತಮಿಳು ನಟ ವಿಜಯ್ ಗೆ ಅಣ್ಣನಾದ ಕಿಚ್ಚ ಸುದೀಪ್?

Posted By: ಶಂಕರ್, ಚೆನ್ನೈ
Subscribe to Filmibeat Kannada

ಅಭಿನಯ ಚಕ್ರವರ್ತಿ ಸುದೀಪ್ ಅವರು ತಮಿಳು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಸಾಕಷ್ಟು ಸದ್ದು ಮಾಡಿತ್ತು. ಇಳಯದಳಪತಿ ಖ್ಯಾತಿಯ ತಮಿಳು ನಟ ವಿಜಯ್ ಜೊತೆಗಿನ ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ.

ಇಷ್ಟು ದಿನ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಪಾತ್ರ ಏನು, ಎತ್ತ ಎಂಬುದು ಬಹಿರಂಗವಾಗಿರಲಿಲ್ಲ. ಇದೀಗ ಚಿತ್ರದಲ್ಲಿ ಅವರು ವಿಜಯ್ ಅವರಿಗೆ ಅಣ್ಣನಾಗಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಇಬ್ಬರ ಪಾತ್ರಗಳಿಗೂ ಸೇಮ್ ವೆಯ್ಟೇಜ್ ನೀಡಲಾಗಿದೆ ಎನ್ನಲಾಗಿದೆ. [ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ]

Sudeep to Play Vijay's brother

ಮೋಹಕ ತಾರೆ ಶ್ರೀದೇವಿ ಅವರು ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ತಾಯಿಯಾಗಿ ಅಭಿನಯಿಸುತ್ತಿದ್ದಾರೆ. ರಿಯಲ್ ಲೈಫ್ ನಲ್ಲಿ ಅವರು ಎಂದೋ ತಾಯಿಯಾದರು. ಆದರೆ ತೆರೆಯ ಮೇಲೆ ಇದೇ ಮೊದಲ ಸಲ ತಾಯಿ ಪಾತ್ರ ಪೋಷಿಸುತ್ತಿದ್ದಾರೆ.

ಸುದೀಪ್ ಮತ್ತು ವಿಜಯ್ ಇಬ್ಬರೂ ಶ್ರೀದೇವಿ ತಾಯಿಯಾಗಿ ಕಾಣಿಸಲಿದ್ದಾರೆ. ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಅವರು ಚಿತ್ರದಲ್ಲಿ ಸುದೀಪ್ ಗೆ ಜೋಡಿ ಎನ್ನುತ್ತವೆ ಮೂಲಗಳು. ಇದೇ ನವೆಂಬರ್ 14ರಿಂದ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಸುದೀಪ್ ಟ್ವೀಟಿಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಸರಿಸುಮಾರು ರು.80 ಕೋಟಿ ಬಜೆಟ್ ನಲ್ಲಿ ಕಲೈಪುಲಿ ಎಸ್ ಧನು ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ಚಿಂಬು ದೇವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಜೆಟ್, ಭರ್ಜರಿ ತಾರಾಗಣ ನೋಡುತ್ತಿದ್ದರೆ ಈ ಚಿತ್ರದ ಬಗ್ಗೆ ಕೋಲಿವುಡ್ ನಲ್ಲಿ ಭಾರಿ ನಿರೀಕ್ಷೆಗಳಿವೆ.

English summary
There are speculations that Sudeep of Naan Ee fame will be seen playing Ilayathalapathy Vijay's brother in the movie. According to the buzz, Sudeep will have equal screen space along with Vijay as he will be playing an important role as that of Vijay's brother.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada