»   » 'ಪ್ರೇಮ ಬರಹ' ನೋಡುತ್ತಿರುವ ಕಿಚ್ಚ ಸುದೀಪ್

'ಪ್ರೇಮ ಬರಹ' ನೋಡುತ್ತಿರುವ ಕಿಚ್ಚ ಸುದೀಪ್

Posted By:
Subscribe to Filmibeat Kannada

ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅಭಿನಯದ ಮೊಟ್ಟ ಮೊದಲ ಕನ್ನಡ ಸಿನಿಮಾ 'ಪ್ರೇಮ ಬರಹ' ಚಿತ್ರ ಬಿಡುಗಡೆಯಾಗಿದ್ದು, ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ. ಕನ್ನಡ ಕಲಾಭಿಮಾನಿಗಳಿಗೆ ಮೆಚ್ಚಿಕೊಂಡಿರುವ ಈ ಚಿತ್ರವನ್ನ ಕನ್ನಡ ಸಿನಿಮಾ ತಾರೆಯರು ಕೂಡ ಫುಲ್ ಮಾರ್ಕ್ಸ್ ಕೊಟ್ಟಿದ್ದರು.

ಇದೀಗ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 'ಪ್ರೇಮ ಬರಹ' ಸಿನಿಮಾವನ್ನ ನೋಡುತ್ತಿದ್ದಾರೆ. ಸಿನಿಮಾ ನೋಡುತ್ತಿರುವ ಖುಷಿಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಎಂಜಾಯ್ ಮಾಡ್ತಿದ್ದೀನಿ ಎಂದು ಹೇಳಿದ್ದಾರೆ.

ಅರ್ಜುನ್ ಸರ್ಜಾ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಚಂದನ್ ಕುಮಾರ್ ನಾಯಕರಾಗಿದ್ದಾರೆ. ಇದೊಂದು ಲವ್ ಸ್ಟೋರಿಯಾಗಿದ್ದು, ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳನ್ನ ಒಳಗೊಂಡಿದೆ. ಜೊತೆಗೆ ದೇಶ ಪ್ರೇಮದ ರೋಚಕ ಕಥೆ ಸಿನಿಮಾವನ್ನ ಗೆಲ್ಲಿಸಿದೆ.

ಚಿತ್ರದ ಕಥೆ:
'ಪ್ರೇಮ ಬರಹ' ಸಿನಿಮಾ 1999ರಲ್ಲಿ ನಡೆಯುವ ಕಥೆಯಾಗಿದೆ. ಚಿತ್ರದ ನಾಯಕ ಸಂಜಯ್ (ಚಂದನ್) ಮತ್ತು ಮಧು (ಐಶ್ವರ್ಯ) ಇಬ್ಬರು ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ವರದಿಗಾರರಾಗಿರುತ್ತಾರೆ. ತಂದೆ ತಾಯಿ ಕಳೆದುಕೊಂಡಿದ್ದ ಮಧು ತನ್ನ ಆಂಟಿ (ಸುಹಾಸಿನಿ) ಜೊತೆಗೆ ಬೆಳೆದಿರುತ್ತಾಳೆ. ಮಧುವನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಎನ್ನುವುದು ಅವರ ಆಸೆ ಆಗಿರುತ್ತದೆ. ಅದೇ ರೀತಿ ತಮ್ಮ ಮಗನ ಜೊತೆಗೆ ಮಧುವನ್ನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಇತ್ತ ಎರಡು ಬೇರೆ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಸಂಜಯ್ ಮತ್ತು ಮಧು ನಡುವೆ ಆಗಾಗ ಸಣ್ಣ ಕಿರಿಕ್ ಆಗುತ್ತಿರುತ್ತದೆ.

ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣವಾಯ್ತು 'ಪ್ರೇಮಬರಹ' ರಿವ್ಯೂ

Sudeep Watching Prema Baraha

ಹೀಗೆ ಮುಂದುವರೆದಾಗ ಕಾರ್ಗಿಲ್ ಯುದ್ಧವನ್ನು ಲೈವ್ ಕವರೇಜ್ ಮಾಡಲು ಇಬ್ಬರು ತಮ್ಮ ತಮ್ಮ ವಾಹಿನಿಯಿಂದ ಹೋಗುತ್ತಾರೆ. ಅಲ್ಲಿನ ಬಾಂಬ್.. ಗುಂಡು.. ಸದ್ದುಗಳ ಆ ಕರಾಳ ಭೂಮಿಯಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಭಾರತ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಗೆದ್ದರೆ, ಈ ಇಬ್ಬರು ಪರಸ್ಪರ ಪ್ರೀತಿಯಲ್ಲಿ ಸೋಲುತ್ತಾರೆ. ಮುಂದೆ ಇಬ್ಬರು ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರು ವ್ಯಕ್ತ ಪಡಿಸುತ್ತಾರಾ... ಈ ಜೋಡಿ ಕೊನೆಗೆ ಒಂದಾಗುತ್ತಾ... ಸಿನಿಮಾ ಹ್ಯಾಪಿ ಎಂಡಿಂಗಾ.. ಅಥವಾ ಸ್ಯಾಡ್ ಎಂಡಿಗಾ.. ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ವಿಮರ್ಶೆ : ಕಾರ್ಗಿಲ್ ಕದನದಲ್ಲಿ ಕಣ್ಬಿಟ್ಟ ಶುಭ್ರ 'ಪ್ರೇಮ' ಬರಹ

ಉಳಿದಂತೆ ಸುಹಾಸಿನಿ, ಕೆ.ವಿಶ್ವನಾಥ್, ಸಾಧುಕೋಕಿಲ, ರಂಗಾಯಣ ರಘು, ಪ್ರಕಾಶ್ ರೈ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದು ಹಾಡಿನಲ್ಲಿ ನಟ ದರ್ಶನ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಬಂದು ಹೋಗುತ್ತಾರೆ.

English summary
Kannada actor kiccha Sudeep is Watching arjun sarja's daughter movie 'Prema Baraha' the movie directed by himself arjun sarja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada