For Quick Alerts
  ALLOW NOTIFICATIONS  
  For Daily Alerts

  ಯುಗಾದಿ ಹಬ್ಬಕ್ಕೆ ಸುದೀಪ್ ಪತ್ನಿ ಕೊಡ್ತಾರಂತೆ ಸ್ಪೆಷಲ್ ಗಿಫ್ಟ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳನ್ನು ಮಾಡುವ ಮೂಲಕ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಇದೇ ಸಮಯದಲ್ಲಿ ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಭರ್ಜರಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ.

  ಹೌದು, ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಈ ಹೊಸ ವರ್ಷದಲ್ಲಿ ಪ್ರಿಯಾ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಕಾದಿದೆಯಂತೆ ದೊಡ್ಡ ಗಿಫ್ಟ್. ಈ ಬಗ್ಗೆ ಸ್ವತಃ ಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 'ಈ ಯುಗಾದಿಗೆ ಎಲ್ಲಾ ಸ್ನೇಹಿತರಿಗೂ ವಿಶೇಷವಾದ ಉಡುಗೊರೆ ಸಿಗಲಿದೆ' ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

  'ದಬಾಂಗ್ 3' ಚಿತ್ರೀಕರಣಕ್ಕೆ ಸುದೀಪ್ ಯಾವಾಗ ಹೋಗ್ತಾರೆ?

  ಪ್ರಿಯಾ ಸುದೀಪ್ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಪ್ರಿಯಾ ಮೇಡಂ ಏನು ಹೇಳೋಕೆ ಹೊರಟಿದ್ದಾರೆ, ಏನಿರಬಹುದು ಎಂದು ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ. ಕೆಲವರು ಯುಗಾದಿವರೆಗೂ ಕಾಯಲು ಸಾಧ್ಯವಿಲ್ಲ ಈಗಲೇ ತಿಳಿಸಿ ಎಂದು ಪ್ರಿಯಾ ಅವರಲ್ಲಿ ಕೇಳಿಕೊಂಡ್ರೆ, ಇನ್ನು ಕೆಲವರು ಏನಿರಬಹುದು ಎಂದು ಅವರೇ ಊಹೆ ಮಾಡಿ ಹೇಳುತ್ತಿದ್ದಾರೆ.

  ಸುದೀಪ್ ಅಭಿನಯದ ಕನ್ನಡದ ಬಿಗ್ ಬಜೆಟ್ ನ 'ಬಿಲ್ಲಾ ರಂಗ ಭಾಷ' ಸಿನಿಮಾ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಾಗಾಗಿ ಈ ಸಿನಿಮಾದ ಟೀಸರ್ ಅಥವಾ ಫಸ್ಟ್ ಲುಕ್ ಹಬ್ಬಕ್ಕೆ ರಿಲೀಸ್ ಆದರು ಆಗಬಹುದು ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಈ ಸಿನಿಮಾ ಸುದೀಪ್ ಅವರ 'ಸುಪ್ರಿಯಾನ್ವಿ ಬ್ಯಾನರ್'ನಲ್ಲಿಯೇ ತಯಾರಾಗುತ್ತಿದೆ. ಅವರದೇ ಬ್ಯಾನರ್ ಆಗಿರುವುದರಿಂದ ಹಬ್ಬಕ್ಕೆ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ಸಿಕ್ಕರು ಸಿಗಬಹುದು.

  ಸಲ್ಮಾನ್ ಮತ್ತು ಸುದೀಪ್ ಜೋಡಿಯ 'ದಬಾಂಗ್ 3' ಚಿತ್ರಕ್ಕೆ ಮುಹೂರ್ತ

  ಇನ್ನು, ಕಿಚ್ಚ ಅಭಿನಯದ 'ಪೈಲ್ವಾನ್' ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೆ ಟೀಸರ್ ಮೂಲಕ ಸದ್ದು ಮಾಡುತ್ತಿರುವ 'ಪೈಲ್ವಾನ್' ಯುಗಾದಿ ವಿಷೇಶವಾಗಿ ಮತ್ತೊಂದು ಟೀಸರ್ ರಿಲೀಸ್ ಮಾಡಿದ್ರು ಮಾಡಬಹುದು. ಅಲ್ಲದೆ ಸುದೀಪ್ ಸದ್ಯ 'ಕೋಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದುವರೆಗೂ ಕೋಟಿಗೊಬ್ಬ-3 ದರ್ಶನ ಆಗಿಲ್ಲ. ಹಾಗಾಗಿ ಯುಗಾದಿ ವಿಷೇಶವಾಗಿ ಈ ಸಿನಿಮಾದ ಟೀಸರ್ ರಿಲೀಸ್ ಆದರು ಅಚ್ಚರಿ ಇಲ್ಲ.

  ಸದ್ಯ ಪ್ರಿಯಾ ಸುದೀಪ್ ಹೇಳಿರುವ ಸ್ಪೆಷಲ್ ಗಿಫ್ಟ್ ಬಗ್ಗೆ ಸುದೀಪಿಯನ್ಸ್ ಸಖತ್ ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೆ ಕುತೂಹಲದಿಂದ ಕಾಯುತ್ತಿದ್ದಾರೆ. ಆದ್ರೆ ಪ್ರಿಯಾ ಸುದೀಪ್ ಕಡೆಯಿಂದ ಏನು ಉಡುಗೊರೆ ಕಾದಿದೆ ಎನ್ನುವುದು ಹಬ್ಬದ ದಿನವೇ ಗೊತ್ತಾಗಲಿದೆ ಅಲ್ಲಿವರೆಗೂ ಕಾಯಲೇ ಬೇಕು.

  English summary
  Sudeep wife Priya Sudeep will announce special gift to fans this Ugadi. Fans are eagerly waiting to Priya Sudeep's Ugadi gift.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X