ಬಿಗ್ ಬಾಸ್ 6ನೇ ಸೀಸನ್ ಅಂತ್ಯ : ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ಕಿಚ್ಚ
'ಬಿಗ್ ಬಾಸ್' ಕಾರ್ಯಕ್ರಮದ ಮತ್ತೊಂದು ಸೀಸನ್ ಮುಗಿದಿದೆ. ನಿನ್ನೆ ಕಾರ್ಯಕ್ರಮದ ಕಡೆಯ ಸಂಚಿಕೆ ಪ್ರಸಾರ ಆಗಿದ್ದು, ಶಶಿ ಈ ಬಾರಿಯ ವಿನ್ನರ್ ಆಗಿದ್ದಾರೆ.
ಕಾರ್ಯಕ್ರಮ ಶುಭಂ ಆಗಿದ್ದು ನಟ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ''ಇನ್ನೊಂದು ಅದ್ಬುತ ಸೀಸನ್ ಮುಗಿದಿದೆ. ಈ ಕಾರ್ಯಕ್ರಮವನ್ನು ಸುಗಮವಾಗಿ ದಡ ಮುಟ್ಟಿಸಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಆರು ಸೀಸನ್ ಗಳು ಎಷ್ಟು ಬೇಗ ಕಳೆದು ಹೊಯ್ತು. ಎಲ್ಲ ಸ್ಪರ್ಧಿಗಳಿಗೆ ನನ್ನ ಶುಭ ಹಾರೈಕೆಗಳು.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಈ ಬಾರಿಯ 'ಬಿಗ್ ಬಾಸ್' ನಲ್ಲಿ ಐದು ಸ್ಪರ್ಧಿಗಳು ಫೈನಲ್ ಹಂತದ ವರೆಗೆ ಬಂದಿದ್ದರು. ಮೊದಲ ದಿನ ಇಬ್ಬರು ಸ್ಪರ್ಧಿಗಳು ಔಟ್ ಆಗಿದ್ದು, ಮೂರು ಜನ ಉಳಿದಿಕೊಂಡಿದ್ದರು.
ನವೀನ್ ಸಜ್ಜು, ಶಶಿ ಕುಮಾರ್ ಹಾಗೂ ಕವಿತಾ ಗೌಡ ಅವರ ಪೈಕಿ ರೈತ ಶಶಿ ಕುಮಾರ್ ವಿನ್ನರ್ ಪಟ್ಟ ಪಡೆದುಕೊಂಡಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ.
English summary
Kannada actor Sudeep wishes for Bigg Boss Kannada 6 contestants.


Click it and Unblock the Notifications