For Quick Alerts
  ALLOW NOTIFICATIONS  
  For Daily Alerts

  35 ವರ್ಷದ ಸಿನಿ ಪಯಣ: ಮೊದಲ ಬಾರಿ ಬೆಳ್ಳಿ ಪರದೆ ಮೇಲೆ ಸುಧಾರಾಣಿ ಹೆಸರು ಕಂಡಿದ್ದು ಹೀಗೆ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಪಯಣಕ್ಕೆ 35 ವರ್ಷಗಳು ತುಂಬಿದೆ. 35 ವರ್ಷದ ಸಂಭ್ರಮವನ್ನು ಶಿವಣ್ಣ ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದಾರೆ. ವಿಶೇಷ ಎಂದರೆ ಅದೇ ದಿನ ಸ್ಯಾಂಡಲ್ ವುಡ್ ನಾಯಕಿಯಾಗಿ ಎಂಟ್ರಿ ಕೊಟ್ಟ ಮತ್ತೋರ್ವ ನಟಿ ಸುಧಾರಾಣಿ. ಹೌದು, ಶಿವರಾಜ್ ಕುಮಾರ್ ನಟನೆಯ ಆನಂದ್ ಸಿನಿಮಾ ಮೂಲಕ ಸುಧಾರಾಣಿ ಕೂಡ ನಾಯಕಿಯಾಗಿ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು.

  90ರ ದಶಕದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದ ಸುಧಾರಾಣಿ ಅವರ ಸಿನಿಯಾನಕ್ಕೆ 35 ವರ್ಷಗಳು ತುಂಬಿದೆ. ಇಂದಿಗೂ ಸುಧಾರಾಣಿ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಪೋಷಕ ಪಾತ್ರಗಳ ಮೂಲಕ ಸುಧಾರಾಣಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ತನ್ನ ಸಿನಿ ಜೀವನಕ್ಕೆ 35 ವರ್ಷಗಳು ತುಂಬಿದ ಸಂತಸವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮುಂದೆ ಓದಿ..

  ಜನರ ಭಾವನೆಗಳ ಜೊತೆ ಆಟವಾಡಬೇಡಿ: ಫೋಟೋ ಶೇರ್ ಮಾಡಿ ಸುಧಾರಾಣಿ ಎಚ್ಚರಿಕೆಯ ಸಂದೇಶಜನರ ಭಾವನೆಗಳ ಜೊತೆ ಆಟವಾಡಬೇಡಿ: ಫೋಟೋ ಶೇರ್ ಮಾಡಿ ಸುಧಾರಾಣಿ ಎಚ್ಚರಿಕೆಯ ಸಂದೇಶ

  35 ವರ್ಷದ ಹಿಂದಿನ ನೆನಪನ್ನು ಹಂಚಿಕೊಂಡ ಸುಧಾರಾಣಿ

  35 ವರ್ಷದ ಹಿಂದಿನ ನೆನಪನ್ನು ಹಂಚಿಕೊಂಡ ಸುಧಾರಾಣಿ

  35 ವರ್ಷಗಳ ಹಿಂದಿನ ಪಯಣವನ್ನು ನೆನಪಿಸಿಕೊಂಡಿರುವ ಸುಧಾರಾಣಿ ನಾಯಕಿಯಾಗಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆಳ್ಳಿ ಪರದೆ ಮೇಲೆ ಸುಧಾರಾಣಿ ಹೆಸರು ಮೂಡಿದ ಅದ್ಭುತ ಕ್ಷಣವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಬೆಳ್ಳಿ ಪರದೆಯಲ್ಲಿ ಸುಧಾರಾಣಿ ಹೆಸರು

  ಬೆಳ್ಳಿ ಪರದೆಯಲ್ಲಿ ಸುಧಾರಾಣಿ ಹೆಸರು

  'ಇನ್ನೊಂದು ಕೊಡುಗೆ ಸುಧಾರಾಣಿ' ಎಂದು ಬೆಳ್ಳಿ ಪರದೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ತನ್ನ ಹೆಸರನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸುಧಾರಾಣಿ ತುಂಬಾ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದವರು. ವರನಟ ಡಾ.ರಾಜ್ ಕುಮಾರ್ ಪುತ್ರನ ಮೊದಲ ಸಿನಿಮಾಗೆ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸುಧಾರಾಣಿ, ಬಳಿಕ ಚಂದನವನದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

  ಸುಧಾರಾಣಿ ಮೊದಲ ಹೆಸರು ಜಯಶ್ರೀ

  ಸುಧಾರಾಣಿ ಮೊದಲ ಹೆಸರು ಜಯಶ್ರೀ

  ಸುಧಾರಾಣಿ ಮೊದಲ ಹೆಸರು ಜಯಶ್ರೀ. ಆನಂದ್ ಸಿನಿಮಾದಿಂದ ಸುಧಾರಾಣಿಯಾಗಿ ಕನ್ನಡ ಚಿತ್ರಪ್ರೇಕ್ಷಕರ ಮನದಲ್ಲಿ ಜಾಗಪಡೆದರು. ಜಯಶ್ರೀಯಾಗಿ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. 1978ರಲ್ಲಿ ಬಾಲನಟಿಯಾಗಿ ಸುಧಾರಾಣಿ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ.

  ರಾಘಣ್ಣನ ಪತ್ನಿಯಾಗಿ ಸುಧಾರಾಣಿ ನಟನೆ: ರಾಜ್ ಕುಟುಂಬದ ಐವರ ಜೊತೆ ತೆರೆ ಹಂಚಿಕೊಂಡ ನಟಿರಾಘಣ್ಣನ ಪತ್ನಿಯಾಗಿ ಸುಧಾರಾಣಿ ನಟನೆ: ರಾಜ್ ಕುಟುಂಬದ ಐವರ ಜೊತೆ ತೆರೆ ಹಂಚಿಕೊಂಡ ನಟಿ

  ಕೇಕ್ ಕತ್ತರಿಸಿ ಸಂಭ್ರಮಿಸಿದ ಸುಧಾರಾಣಿ

  ಕೇಕ್ ಕತ್ತರಿಸಿ ಸಂಭ್ರಮಿಸಿದ ಸುಧಾರಾಣಿ

  35 ವರ್ಷ ತುಂಬಿದ ಸಂತಸವನ್ನು ಸುಧಾರಾಣಿ ಕೇಕ್ ಕತ್ತರಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. '35 ವರ್ಷಗಳು. ನಿಮ್ಮ ಹಿತೈಶಿಗಳು ನಿಮಗೆ ಶುಭಕೋರಿ, ಸಂಭ್ರಮಿಸಿದರೆ ಈ ಪಯಣ ಮತ್ತಷ್ಟು ಸಂತೋಷವಾಗಿರುತ್ತೆ. ನನ್ನ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.

  Recommended Video

  ಇಂಡಸ್ಟ್ರಿ ಹಿಟ್ ಲೆಕ್ಕಾನೆ ಇಲ್ಲ ಬಿಡಿ | Shivarajkumar
  ಸುಧಾರಾಣಿ ಬಳಿ ಇರುವ ಸಿನಿಮಾಗಳು

  ಸುಧಾರಾಣಿ ಬಳಿ ಇರುವ ಸಿನಿಮಾಗಳು

  35 ವರ್ಷಗಳ ಸಿನಿ ಪಯಣದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿರುವ ಸುಧಾರಾಣಿ ಬಳಿ ಈಗಲೂ ಸಾಲು ಸಾಲು ಸಿನಿಮಾಗಳಿವೆ. ಸದ್ಯ ರಾಘವೇಂದ್ರ ರಾಜ್ ಜೊತೆ ಬೆಳಕು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರಾಘಣ್ಣ ಜೊತೆ ತೆರೆಹಂಚಿಕೊಳ್ಳುತ್ತಿದ್ದು, ರಾಘಣ್ಣ ಪತ್ನಿಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಪುನೀತ್ ನಟನೆಯ ಯುವರತ್ನ ಸಿನಿಮಾದಲ್ಲೂ ಸುಧಾರಾಣಿ ನಟಿಸುತ್ತಿದ್ದಾರೆ. ಇದಲ್ಲದೆ ಸಾಕಷ್ಟು ಸಿನಿಮಾಗಳು ಸುಧಾರಾಣಿ ಕೈಯಲ್ಲಿವೆ.

  English summary
  Sandalwood Actress Sudharani completes 35 years in film industry as heroine.
  Saturday, February 20, 2021, 13:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X