For Quick Alerts
  ALLOW NOTIFICATIONS  
  For Daily Alerts

  ವಯಸ್ಸಾದ ಅಂಬಿಗೆ ಜೊತೆಯಾದ್ರು 'ಮುತ್ತಿನಹಾರ'ದ ಬೆಡಗಿ

  By Pavithra
  |

  ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಸಿನಿಮಾದಲ್ಲಿ ಅಭಿನಯಿಸಲು ಆರಂಭ ಮಾಡಿದ್ದಾರೆ. ಚಿತ್ರದಲ್ಲಿ ಅಂಬಿ ಜೊತೆ ಅಭಿನಯಿಸಲು ಯಾವ ನಾಯಕಿ ಬರುತ್ತಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆರಂಭದಲ್ಲಿ ಸುಹಾಸಿನಿ ಹೆಸರು ಕೇಳಿ ಬಂದು ನಂತರ ಖುಷ್ಬು ಅಥವಾ ರಮ್ಯಾಕೃಷ್ಣ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಎಂದಾಗಿತ್ತು.

  ಸುಹಾಸಿನಿ ಅವರ ಡೇಟ್ಸ್ ಸಮಸ್ಯೆಯಿಂದ ಚಿತ್ರತಂಡ ಬೇರೆ ನಾಯಕಿಯನ್ನ ಸಿನಿಮಾದಲ್ಲಿ ಅಭಿನಯಿಸಲು ಕರೆತರುವ ಪ್ರಯತ್ನ ಮಾಡಿತ್ತು. ಆದರೆ ನಟಿ ಸುಹಾಸಿನಿ ಚಿತ್ರತಂಡ ಸೇರಿಕೊಂಡಿದ್ದಾರೆ. ನಿನ್ನೆಯಿಂದಲೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ನಟ ಅಂಬರೀಶ್ ಹಾಗೂ ಸುಹಾಸಿನಿ ಅವರ ಸೀನ್ ಗಳ ಚಿತ್ರೀಕರಣ ಮಾಡುವಲ್ಲಿ ನಿರ್ದೇಶಕ ಗುರುದತ್ತ್ ಗಾಣಿಗ ಬ್ಯುಸಿ ಆಗಿದ್ದಾರೆ.

  'ಅಂಬಿ' ಬಳಗಕ್ಕೆ ಸೇರಿಕೊಳ್ಳುತ್ತಿದ್ದಾರೆ ಸುದೀಪ್ ಮತ್ತು ಶ್ರುತಿ'ಅಂಬಿ' ಬಳಗಕ್ಕೆ ಸೇರಿಕೊಳ್ಳುತ್ತಿದ್ದಾರೆ ಸುದೀಪ್ ಮತ್ತು ಶ್ರುತಿ

  ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾವನ್ನ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಶೇಕಡ 80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಐದು ದಿನಗಳ ಕಾಲ ಸುಹಾಸಿನಿ ಮತ್ತು ಅಂಬರೀಶ್ ಅವರ ಟಾಕಿ ಪೋಷನ್ ಶೂಟಿಂಗ್ ಮಾಡಲಿದೆ.

  ಅಂಬರೀಶ್ ಹಾಗೂ ಸುಹಾಸಿನಿ ಅವರಿಗೆ ಹಾಡು ಇದ್ದು ಕೇರಳಾದ ಸುತ್ತಾ ಮುತ್ತಾ ಅದರ ಚಿತ್ರೀಕರಣ ನಡೆಯಲಿದೆ. ಸಾಕಷ್ಟು ವಿಶೇಷತೆಗಳನ್ನು ಹೊತ್ತು ತರುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.

  English summary
  Actress Suhasini is involved in the kannada Ambhi ning vaisaytho film shooting, Ambarish and Suhasini is being shot and Guru Dutt is directing the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X