»   » ಇಟಲಿಯಲ್ಲಿ ದರೋಡೆಗೆ ಒಳಗಾದ ನಟಿ ಸುಹಾಸಿನಿ ಮಗ

ಇಟಲಿಯಲ್ಲಿ ದರೋಡೆಗೆ ಒಳಗಾದ ನಟಿ ಸುಹಾಸಿನಿ ಮಗ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಅವರ ಮಗ ಇಟಲಿಯಲ್ಲಿ ದರೋಡೆಗೆ ಒಳಗಾಗಿದ್ದು, ಮಗನಿಗೆ ಸಹಾಯ ಮಾಡುವಂತೆ ನಟಿ ಸುಹಾಸಿನಿ ಟ್ವಿಟ್ಟರ್ ನಲ್ಲಿ ಜನರ ಸಹಾಯ ಕೇಳಿದ ಘಟನೆ ನಿನ್ನೆ (ಆಗಸ್ಟ್ 27) ನಡೆದಿದೆ.

ಇಟಲಿಯ Belluno ನಗರದಲ್ಲಿ ರಾತ್ರಿ 7 ಗಂಟೆಗೆ ಸುಹಾಸಿನಿ ಮಣಿರತ್ನಂ ಅವರ ಮಗ ನಂದನ್ ಅವರ ಬಳಿ ದರೋಡೆ ಆಗಿದೆ. ಹೀಗಾಗಿ, ಏರ್ ಪೋರ್ಟ್ ಗೆ ತಲುಪಲು ಕಷ್ಟಕರವಾಗಿದ್ದು, ಈ ವಿಷ್ಯ ತಿಳಿದ ನಟಿ ಸುಹಾಸಿನ ತಮ್ಮ ಟ್ವಿಟ್ಟರ್ ಮೂಲಕ ಸರಣಿ ಟ್ವೀಟ್ ಮಾಡಿ ಸಹಾಯ ಕೇಳಿದ್ದಾರೆ. ಮುಂದೇನಾಯ್ತು.....? ಮುಂದೆ ಓದಿ....

ಸುಹಾಸಿನಿ ಅವರ ಮೊದಲ ಟ್ವೀಟ್

''ಯಾರಾದರೂ ವೆನಿಸ್ ಏರ್ ಪೋರ್ಟ್ ಬಳಿ ಇದ್ದರೇ, ದಯವಿಟ್ಟು ನನ್ನ ಮಗ ಏರ್ ಪೋರ್ಟ್ ಗೆ ಹೋಗಲು ಸಹಾಯ ಮಾಡಿ. ಅವನು ದರೋಡೆಗೆ ಒಳಗಾಗಿದ್ದಾನೆ'' - ಸುಹಾಸಿನಿ, ನಟಿ

ಸರಣಿ ಟ್ವೀಟ್ ಮೂಲಕ ಸಹಾಯ

ಮೊದಲಿಗೆ ಮಗನ ಫೋನ್ ನಂಬರ್‌ ನ್ನು ಪ್ರಕಟಿಸಿದ್ದ ಸುಹಾಸಿನಿ ನಂತರ ಭಾರತೀಯರಾರು ಸುಮ್ ಸುಮ್ಮನೆ ವಿಚಾರಿಸಲು ಫೋನ್ ಮಾಡಬೇಡಿ. ಮಗನ ಫೋನ್ ಬ್ಯಾಟರಿ ರಿಚಾರ್ಜಿಂಗ್ ಕಡಿಮೆ ಇದೆ. ಪದೇ ಪದೇ ಫೋನ್ ಮಾಡಿದ್ರೆ ಆತ ಸಂಪರ್ಕ ಸಿಗುವುದು ಕಷ್ಟ ಎಂದು ಒಂದು ಟ್ವೀಟ್ ನಲ್ಲಿ ಮನವಿ ಮಾಡಿದರು.

ಸುರಕ್ಷಿತವಾಗಿ ಹೋಟೆಲ್ ತಲುಪಿದ ನಂದನ್

ಮಧ್ಯರಾತ್ರಿ 12.37 ರ ವೇಳೆಗೆ ಸುಹಾಸಿನಿ ಅವರ ಮಗ ಸುರಕ್ಷಿತವಾಗಿ ಹೋಟೆಲ್ ತಲುಪಿರುವುದರ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮಗನಿಗೆ ಅಲ್ಲಿನ ಜನರು ಸಹಾಯ ಮಾಡಿದರ ಪರಿಣಾಮ ಹೋಟೆಲ್ ಗೆ ತೆರಳಲು ಸಾಧ್ಯವಾಗಿದೆ.

ಧನ್ಯವಾದ ತಿಳಿಸಿದ ಸುಹಾಸಿನಿ

ತಮ್ಮ ಮಗನಿಗೆ ಸಹಾಯ ಮಾಡಿದವರಿಗೆ ನಟಿ ಸುಹಾಸಿನಿ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

English summary
Mani Ratnam’s wife Suhasini Maniratnam seeks help on Twitter after son Nandan gets robbed in Italy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada