»   » ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಆತ್ಮಹತ್ಯೆ ಎಂಬ ಭೂತ!

ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಆತ್ಮಹತ್ಯೆ ಎಂಬ ಭೂತ!

Posted By:
Subscribe to Filmibeat Kannada

ತಾವು ನಿರ್ಮಾಣದ ಚೊಚ್ಚಲ ಚಿತ್ರ 'ಹಾಫ್ ಮೆಂಟ್ಲು' ಬಿಡುಗಡೆ ಮಾಡಲು ಸಾಧ್ಯವಾಗದೆ, ಕೈ ತುಂಬಾ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ ನಿರ್ಮಾಪಕ ಶಶಿಕುಮಾರ್ ರವರ ನೋವಿನ ಕಥೆಯನ್ನ ಇಂದು ಬೆಳಗ್ಗೆಯಿಂದ ನೀವೆಲ್ಲಾ ಸುದ್ದಿ ವಾಹಿನಿಗಳಲ್ಲಿ ನೋಡಿದ್ದೀರಾ. [ಆತ್ಮಹತ್ಯೆಗೆ ಯತ್ನ; ನಿರ್ಮಾಪಕ ಶಶಿಕುಮಾರ್ ಹೇಳಿದ ಸತ್ಯ ಏನು?]

ಬೆಟ್ಟದಷ್ಟು ಕನಸು ಹೊತ್ತು ಬಣ್ಣದ ಜಗತ್ತಿಗೆ ಕಾಲಿಡುವ ಇಂತಹ ಎಷ್ಟೋ ಮಂದಿ ಪ್ರತಿಭಾವಂತರು ಕಷ್ಟ-ನಷ್ಟ ಎದುರಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಮಾಡಿಕೊಂಡಿದ್ದಾರೆ ಕೂಡ. [ಕನ್ನಡ ಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಯತ್ನ; ಅಸಲಿ ಕಾರಣವೇನು?]

ಅವಕಾಶ ಇಲ್ಲ ಅಂತ ಕೆಲವರು, ಸಾಲಭಾದೆ ತಾಳಲಾರದೆ ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಅಂತಹ ನಟ, ನಟಿ, ನಿರ್ಮಾಪಕ, ನಿರ್ದೇಶಕರ ಕಥೆ-ವ್ಯಥೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...

ಆತ್ಮಹತ್ಯೆಗೆ ಯತ್ನಿಸಿದ ನಿರ್ದೇಶಕ ಸಾಯಿ ಪ್ರಕಾಶ್

'ದೇವರು ಕೊಟ್ಟ ತಂಗಿ' ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದ ಓಂ ಸಾಯಿ ಪ್ರಕಾಶ್ ಎರಡು ಕೋಟಿ ರೂಪಾಯಿ ಸಾಲ ಮಾಡಿದ್ದರು. ಸಾಲಭಾದೆಯಿಂದ ಹೊರಬರಲು ಮನೆ, ಸೈಟನ್ನೆಲ್ಲ ಮಾರಿದ್ದರೂ ಸಾಲಲಿಲ್ಲ. ಚಿತ್ರದ ಗ್ರಾಫಿಕ್ಸ್ ಎಫೆಕ್ಟ್ ಗಾಗಿಯೇ 45 ಲಕ್ಷ ರೂಪಾಯಿ ವ್ಯಯಿಸಿದ್ದರೂ, 'ದೇವರು ಕೊಟ್ಟ ತಂಗಿ' ಪ್ರೇಕ್ಷಕರ ಮನಗೆಲ್ಲಲಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿದ ಸಾಯಿ ಪ್ರಕಾಶ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. [ಕೈಕೊಟ್ಟ 'ತಂಗಿ' : ಸಾಯಿಪ್ರಕಾಶ್ ಆತ್ಮಹತ್ಯೆಗೆ ಯತ್ನ]

ಸೂರಪ್ಪ ಬಾಬು ಕಥೆ ನಿಮಗೆ ಗೊತ್ತಲ್ವಾ?

ನಟ ದಿವಂಗತ ತೂಗುದೀಪ ಶ್ರೀನಿವಾಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಮೀನಾ ತೂಗುದೀಪ ಶ್ರೀನಿವಾಸ್ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದ ನಿರ್ಮಾಪಕ ಸೂರಪ್ಪ ಬಾಬು ಮಾನಸಿಕ ಖಿನ್ನತೆಗೆ ಒಳಗಾಗಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.[ಪ್ರೊಡ್ಯೂಸರ್ ಸೂರಪ್ಪ ಬಾಬು ಆತ್ಮಹತ್ಯೆ ಯತ್ನ ನಿಜವೇ?]

'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಸಹ ನಿರ್ಮಾಪಕ ಸೂಸೈಡ್

'ಸಿಂಪಲ್ಲಾಗೊಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ಬಹುಪರಾಕ್' ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಅಭಿಜಿತ್ ಪಟೇಲ್ (36) ಪೀಣ್ಯ ಸಮೀಪದ ಶೆಟ್ಟಿಹಳ್ಳಿಯಲ್ಲಿರುವ ನೀರು ಪೂರೈಕೆ ಘಟಕದಲ್ಲಿ ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅದಕ್ಕೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ['ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಸಹ ನಿರ್ಮಾಪಕ ನೇಣಿಗೆ ಶರಣು]

ನಾಯಕ ನಟ ರಾಮ್

'ಸಿದ್ಧಾಪುರ' ಎಂಬ ಚಿತ್ರದ ನಾಯಕ ರಾಮ್ ಹಣಕಾಸಿನ ತೊಂದರೆಯಿಂದಾಗಿ ವಿಷ ಸೇವಿಸಿ ಕಳೆದ ವರ್ಷ ಆತ್ಮಹತ್ಯೆಗೆ ಯತ್ನಿಸಿದ್ದರು. 2014ರ ಅಕ್ಟೋಬರ್‌ನಲ್ಲಿ 'ಸಿದ್ದಾಪುರ' ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಆದರೆ, ಮೊದಲು ನಿರ್ಮಾಪಕರಾಗಿದ್ದ ಶ್ರೀನಿವಾಸ್ ಮಧ್ಯದಲ್ಲಿ ಚಿತ್ರ ಮಾಡುವುದಿಲ್ಲ ಎಂದು ಘೋಷಿಸಿದ್ರಿಂದ ರಾಮ್ ಸ್ವತಃ ಚಿತ್ರ ನಿರ್ಮಾಣದ ಹೊಣೆ ಹೊತ್ತುಕೊಂಡರು. ಚಿತ್ರ ನಿರ್ಮಿಸಿ ಅನುಭವವಿಲ್ಲದ ಅವರು ಇದರಿಂದ ನಷ್ಟ ಅನುಭವಿಸಿದ್ದ ರಾಮ್ ಇಹಲೋಕ ತ್ಯಜಿಸಲು ಯತ್ನಿಸಿದ್ದರು.[ನಾಯಕ ನಟ ರಾಮ್ ಆತ್ಮಹತ್ಯೆ ಯತ್ನ]

ಮುಂಬೈ ಚಿತ್ರನಟಿ ಆತ್ಮಹತ್ಯೆ

2012ರಲ್ಲಿ ಬಿಡುಗಡೆಯಾಗಿದ್ದ 'ಬಿಎ ಪಾಸ್' ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದ ಶಿಖಾ ಜೋಶಿಗೆ ಪಾತ್ರಗಳು ಸಿಗದೆ, ಕಂಗಾಲಾಗಿ, ಮಾನಸಿಕ ಖಿನ್ನತೆಗೆ ಒಳಗಾಗಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ವರ್ಷ ಮುಂಬೈನ ಅಪಾರ್ಟ್ಮೆಂಟೊಂದರಲ್ಲಿ ನಡೆದಿತ್ತು. [ಬದುಕಿನಲ್ಲಿ ಫೇಲ್ ಆದ 'ಬಿಎ ಪಾಸ್' ಚಿತ್ರನಟಿ!]

ನಟಿ ವಿಂಧ್ಯಾ

ರಾಜೀವ್ ನೇತ್ರ ನಿರ್ದೇಶನದ 'ಮನದ ಮರೆಯಲ್ಲಿ' ಚಿತ್ರದ ನಾಯಕಿ ವಿಂಧ್ಯಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಜುನಾಥ ಎಂಬಾತನನ್ನು ವಿಂಧ್ಯಾ ಇಷ್ಟಪಟ್ಟಿದ್ದರು. ಆದರೆ ಆತನ ಸ್ವಭಾವ ಇಷ್ಟವಾಗದೆ ದೂರ ಉಳಿಯಲು ನಿರ್ಧರಿಸಿದ ವಿಂಧ್ಯ ದುಡುಕಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು.[ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

ಸಿಂಧು ಮೆನನ್ ಕೂಡ ಇದೇ ಕೆಲಸ ಮಾಡಿದ್ರಾ?

ಅವಕಾಶಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಟಿ ಸಿಂಧು ಮೆನನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಆದ್ರೆ, ವಿಚಾರವನ್ನ ನಟಿ ಸಿಂಧು ಮೆನನ್ ಅಲ್ಲಗೆಳೆದಿದ್ದರು.[ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ : ಸಿಂಧು ಮೆನನ್]

ನಟಿ ಸೂಜಿ ಬಾಲಾರದ್ದು ಇದೇ ಹಾದಿ

ಮದುವೆ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟಿ ಸೂಜಿ ಬಾಲಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. [ಕನ್ನಡದ ಮೇಷ್ಟ್ರು ಚಿತ್ರದ ನಾಯಕಿ ಆತ್ಮಹತ್ಯೆಗೆ ಯತ್ನ]

ಗುಂಡು ಹಾರಿಸಿಕೊಂಡು ಸಹ ನಿರ್ಮಾಪಕ ಆತ್ಮಹತ್ಯೆ

'ವೀರಪ್ಪನ್ ಅಟ್ಟಹಾಸ' ಹಾಗೂ 'ಸಂತೋಷ್' ಚಿತ್ರಗಳಿಗೆ ಸಹ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವಿ.ಶ್ರೀನಿವಾಸ್ (42) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.[ಕನ್ನಡ ಚಿತ್ರಗಳ ಸಹ ನಿರ್ಮಾಪಕ ಶ್ರೀನಿವಾಸ್ ಆತ್ಮಹತ್ಯೆ]

ಐಟಂ ಡ್ಯಾನ್ಸರ್ ಅಲ್ಫೋನ್ಸಾ

ವೈಯುಕ್ತಿಕ ವಿಚಾರಕ್ಕಾಗಿ ಚೆನ್ನೈನ ವಿರುಗಂಪಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಐಟಂ ಡ್ಯಾನ್ಸರ್ ಹಾಗೂ ನಟಿ ಅಲ್ಫೋನ್ಸಾ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು.[ಕ್ಯಾಬರೆ ನರ್ತಕಿ ಅಲ್ಫೋನ್ಸಾ ಆತ್ಮಹತ್ಯೆಗೆ ಯತ್ನ]

ಕಿರುತೆರೆ ನಿರ್ದೇಶಕ ಹಿರಿಯೂರು ರಾಘವೇಂದ್ರ

'ಕಾರ್ತಿಕ ದೀಪ' ಎಂಬ ಧಾರಾವಾಹಿಯಿಂದ ಸುಮಾರು 80 ರಿಂದ 90 ಲಕ್ಷ ರೂಪಾಯಿ ನಷ್ಟ ಅನುಭವಿಸಿದ ಕಿರುತೆರೆ ನಿರ್ದೇಶಕ ಹಿರಿಯೂರು ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದರು.[ರಾಘವೇಂದ್ರ ಆತ್ಮಹತ್ಯೆ ಯತ್ನಕ್ಕೆ ರಿಯಲ್ ಕಾರಣ ಏನು?]

English summary
Kannada Film Industry has witnessed many Suicide cases from Producers, Artists and Directors. What is the reason? Why Artists take such extreme steps? Read the article to know.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada