»   » ಹನ್ನೆರಡು ವರ್ಷದ ನಂತರ ಒಂದಾದ ತಾಯಿ-ಮಗ

ಹನ್ನೆರಡು ವರ್ಷದ ನಂತರ ಒಂದಾದ ತಾಯಿ-ಮಗ

Posted By:
Subscribe to Filmibeat Kannada
ಹನ್ನೆರಡು ವರ್ಷಗಳ ನಂತರ ಮತ್ತೆ ಒಂದಾದ ಸುಮಲತಾ ಅಂಬರೀಶ್ ಹಾಗು ಅಜಯ್ ರಾವ್ | Filmibeat Kannada

ಚಿತ್ರರಂಗದ ತಾಯಿ ಮಗ ಒಂದಾಗಿದ್ದಾರೆ. ಬರೋಬ್ಬರಿ ಹನ್ನೆರಡು ವರ್ಷದ ನಂತ್ರ ಇವರಿಬ್ಬರು ಮತ್ತೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತಿದ್ದಾರೆ. ನಾವೀಗ ಹೇಳೋದಕ್ಕೆ ಹೊರಟಿರೋದು 'ತಾಯಿಗೆ ತಕ್ಕ ಸಿನಿಮಾ'ದ ಕಲಾವಿದರ ಬಗ್ಗೆ.

ಸೆಟ್ಟೇರವುದಕ್ಕೆ ಸಿದ್ದವಾಗಿರುವ 'ತಾಯಿಗೆ ತಕ್ಕ ಮಗ' ಸಿನಿಮಾದ ಕಲಾವಿದರ ಆಯ್ಕೆ ಭರದಿಂದ ಸಾಗಿದೆ.

'ಅಜಯ್ ರಾವ್' ಅಭಿನಯದ 'ತಾಯಿಗೆ ತಕ್ಕ ಮಗ' ಚಿತ್ರ ಶಶಾಂಕ್ ಸಿನಿಮಾಸ್ ನಿರ್ಮಾಣದಲ್ಲಿ ಪ್ರಾರಂಭವಾಗುತ್ತಿದ್ದು, ಚಿತ್ರಕ್ಕೆ ಹೊಸ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ದಶಕದ ನಂತರ ಒಂದಾದ ತಾಯಿ-ಮಗ

'ಎಕ್ಸ್‌ ಕ್ಯೂಸ್ ಮಿ' ಚಿತ್ರದಲ್ಲಿ ಸುಮಲತಾ, ಅಜಯ್ ರಾವ್ ಗೆ ತಾಯಿ ಪಾತ್ರವನ್ನ ನಿರ್ವಹಿಸಿದ್ದರು. ನಂತರ ಇಬ್ಬರು ಕಲಾವಿದರು ಯಾವುದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿರಲಿಲ್ಲ. ಈಗ ಅಜಯ್ ಮತ್ತೆ 'ಸುಮಲತಾ' ಅವ್ರಿಗೆ ಮಗನಾಗಿ ಅಭಿನಯಿಸಲಿದ್ದಾರೆ.

ಹೊಸ ನಿರ್ದೇಶಕನಿಗೆ ಅವಕಾಶ

ಶಶಾಂಕ್ ಸಿನಿಮಾಸ್ ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ 'ತಾಯಿಗೆ ತಕ್ಕ ಮಗ'. ಸಿನಿಮಾವನ್ನ ನವ ನಿರ್ದೇಶಕ ವೇದ್ ಗುರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗಾಗಿ ಅಜಯ್ ರಾವ್ ಗೆಟಪ್ ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಡಿಸೆಂಬರ್ ನಲ್ಲಿ ಚಿತ್ರೀಕರಣ

ನಿರ್ದೇಶಕ ಶಶಾಂಕ್ ಅವ್ರ ಹಿಂದಿನ ಸಿನಿಮಾಗಳಿಗೆ ಕ್ಯಾಮೆರಾ ವರ್ಕ್ ಮಾಡಿದ್ದ ಶೇಖರ್ ಚಂದ್ರು 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. 'ಬದ್ಮಾಶ್' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಜೂಡಾ ಸ್ಯಾಂಡಿ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ನಾಯಕಿ ಹುಡುಕಾಟ ಪ್ರಾರಂಭ

ಡಿಸೆಂಬರ್ ಎರಡನೇ ವಾರದಲ್ಲಿ 'ತಾಯಿಗೆ ತಕ್ಕ ಮಗ' ಚಿತ್ರ ಸೆಟ್ಟೇರಲಿದೆ. ನಾಯಕಿ ಹುಡುಕಾಟ ಪ್ರಾರಂಭ ಮಾಡಿರುವ ಚಿತ್ರತಂಡ ಈ ವಾರದಲ್ಲಿ ಪ್ರೀ-ಪ್ರೊಡಕ್ಷನ್ ಕೆಲಸ ಮುಗಿಸಿ ಆದಷ್ಟು ಬೇಗ ಚಿತ್ರೀಕರಣದಲ್ಲಿ ಬ್ಯುಸಿ ಆಗಲಿದೆ. ಒಟ್ಟಾರೆ ಹನ್ನೆರಡು ವರ್ಷದ ನಂತ್ರ ತೆರೆ ಮೇಲೆ ಒಂದಾಗುತ್ತಿರುವ ಅಮ್ಮ-ಮಗನ ಸೆಂಟಿಮೆಂಟ್ ಈ ಬಾರಿ ಮತ್ತಷ್ಟು ವರ್ಕ್ ಔಟ್ ಆಗಲಿದೆ

English summary
After 12 years, Sumalatha and Ajay rao join hands for 'Thayige Takka Maga' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X