For Quick Alerts
  ALLOW NOTIFICATIONS  
  For Daily Alerts

  "ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ": ಸುಮಲತಾ ಹೀಗೆ ಹೇಳಿದ್ದೇಕೆ ?

  |
  ದರ್ಶನ್ ಹೇಗೆ ಹಾಲು ಕರೆಯುತ್ತಾರೆ ನೋಡಿ..

  ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ನಟರಾದ ದರ್ಶನ್ ಮತ್ತು ಯಶ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ದರ್ಶನ್ ಮತ್ತು ಯಶ್ ಹೋದ ಕಡೆಯಲೆಲ್ಲಾ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಜನ ಸಾಗರವೇ ಹರಿದು ಬರುತ್ತಿದೆ. ಗುರುವಾರ ಕೆ.ಆರ್ ಪೇಟೆಯಲ್ಲಿ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ಅಬ್ಬರದ ಪ್ರಚಾರದ ನಡುವೆ ಹಸುವಿನ ಹಾಲು ಕರೆದು ಅಚ್ಚರಿ ಮೂಡಿಸಿದ್ದಾರೆ.

  ದರ್ಶನ್ ಕೈಗೆ ಪೆಟ್ಟಾಗಿದೆ. ಸುಮಲತಾ ಅವರನ್ನು ಗೆಲ್ಲಿಸಲೇ ಬೇಕೆಂದು ಪಣ ತೊಟ್ಟಿರುವ ಡಿ ಬಾಸ್ ಬ್ಯಾಂಡೇಜ್ ಹಾಕಿಕೊಂಡೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕೈ ನೋವನ್ನು ಲೆಕ್ಕಿಸದೆ ಹಸುವಿನ ಹಾಲು ಕರೆದು ಗಮನ ಸೆಳೆದಿದ್ದಾರೆ. ಇದನ್ನ ನೋಡಿದ ಸುಮಲತಾ, ದರ್ಶನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್

  "ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೆಯಲ್ಲ "ಕೈ ನೋವಿದ್ದರೂ ನೀನು ಇಂದು ಹಸುವಿನ ಹಾಲು ಕರೆದಿದ್ದು ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಹ್ಯಾಟ್ಸಾಪ್ ಕಂದ" ಎಂದು ಪ್ರೀತಿಯ ದೊಡ್ಮಗನನ್ನು ಹಾಡಿ ಹೊಗಳಿದ್ದಾರೆ.

  ದರ್ಶನ್ ಹೋದ ಕಡೆಯಲ್ಲ ಮಂಡ್ಯ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜನಸಾಗರ ನೋಡಿ ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ. ದರ್ಶನ್ ಹಸುವಿನ ಹಾಲು ಕರೆಯುವುದು ಇದೇ ಮೊದಲೇನಲ್ಲ. ಆದ್ರೆ ಪ್ರಚಾರದ ನಡುವೆ, ಜನಸಾಗರದ ಮಧ್ಯೆ, ಕೈ ನೋವಿದ್ದರು ಅಭಿಮಾನಿಯೊಬ್ಬನ ಮನೆಯ ಹಸುವಿನ ಹಾಲು ಕರೆದಿರುವುದು ಡಿ ಬಾಸ್ ಅಭಿಮಾನಿಗಳ ಸಂತಸ ಹೇಳತೀರದು.

  English summary
  mandya lok sabha independent contestant sumalatha was appreciate to kannada actor darshan for cow milking in mandya lok sabha campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X