For Quick Alerts
  ALLOW NOTIFICATIONS  
  For Daily Alerts

  ಯಶ್ ಬಗ್ಗೆ ನಿಖಿಲ್ 'ಬಾಡಿಗೆ' ಬಾಣ: ಸುಮಲತಾ ಹೇಳಿದ್ದೇನು?

  |
  ತಮಿಳಿನಲ್ಲಿ ಮಾತನಾಡಿದ ಸುಮಲತಾ ನಿಖಿಲ್ ಬಗ್ಗೆ ಹೀಗಂದ್ರು..? | FILMIBEAT KANNADA

  'ಬಾಡಿಗೆ ಕಟ್ಟೋಕೆ ಆಗದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ' ಎಂದು ಮಂಡ್ಯ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಕುಮಾರ್, ನಟ ಯಶ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಇದಕ್ಕೆ ನಟ ಯಶ್ ಕೂಡ ತಿರುಗೇಟು ನೀಡಿದ್ದರು.

  ಇದೀಗ, ಸುಮಲತಾ ಕೂಡ ನಿಖಿಲ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ ಅಭ್ಯರ್ಥಿಯ ಮಾತನ್ನ ಖಂಡಿಸಿದ್ದಾರೆ. 'ನಿಖಿಲ್ ಅವರ ವಯಸ್ಸು ಚಿಕ್ಕಿದು, ಒಬ್ಬ ಸಾಧನೆ ಮಾಡಿರುವ ನಟನ ಬಗ್ಗೆ ಅಗೌರವವಾಗಿ ಮಾತನಾಡಿದ್ದು ಅವರ ಅಹಂಕಾರ ಸೂಚಿಸುತ್ತೆ' ಎಂದಿದ್ದಾರೆ.

  'ಬಾಡಿಗೆ' ವಿಷ್ಯ ಕೆದಕಿದ ನಿಖಿಲ್ ಗೆ ಯಶ್ ತಿರುಗೇಟು

  ''ಯಶ್ ಬಗ್ಗೆ ಆ ಮಾತುಗಳು ಬೇಕಾಗಿರಲಿಲ್ಲ. ಅವರಿಗಿನ್ನು ವಯಸ್ಸು ಚಿಕ್ಕಿದು. ಅವರ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾ ಮಾಡಿದ್ದಾರೆ. ಒಬ್ಬ ಹಿರಿಯ ನಟ, ಒಂದಿಷ್ಟು ಸಾಧನೆ ಮಾಡಿರುವ ನಟನ ಬಗ್ಗೆ ಗೌರವ ಇಲ್ಲದೇ ಮಾತನಾಡಿರುವುದು ಅವರ ಅಹಂಕಾರವನ್ನ ಸೂಚಿಸುತ್ತೆ, ಅದು ಒಳ್ಳೆಯದಲ್ಲ' ಎಂದು ಸುಮಲತಾ ತಿರುಗೇಟು ನೀಡಿದ್ದಾರೆ.

  'ಬಾಡಿಗೆ ಕಟ್ಟದವರು ಮಾತನಾಡ್ತಾರೆ': ಯಶ್ ವಿರುದ್ಧ ಗುಡುಗಿದ ನಿಖಿಲ್

  ನಿಖಿಲ್ ಹೇಳಿಕೆಗೆ ಟಾಂಗ್ ನೀಡಿದ್ದ ಯಶ್ ''ನಾವು ಕಷ್ಟಪಟ್ಟು ದುಡಿದು ತಂದ ದುಡ್ಡಿನಿಂದ ಉತ್ತರ ಕರ್ನಾಟಕದ ಜನತೆಗೆ ಸಹಾಯ ಮಾಡಿದ್ದೀವಿ. ಆಗ ಯಾವ ಸರ್ಕಾರವೂ ಬಂದಿರಲಿಲ್ಲ. ಅದಕ್ಕೆ ನಮಗೆ ಬಾಡಿಗೆ ಕಟ್ಟಲು ಕಷ್ಟವಾಗಿದೆ. ಮುಂದಿನ ದಿನದಲ್ಲಿ ನಮಗೆ ಈ ಸ್ಥಿತಿ ಬರಬಾರದು ಎಂದು ಕೇಳಿಕೊಳ್ಳುತ್ತೇನೆ'' ಎಂದಿದ್ದರು.

  English summary
  Mandya independent candidate Sumalatha has react on nikhil kumar statement about yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X