For Quick Alerts
  ALLOW NOTIFICATIONS  
  For Daily Alerts

  ದರ್ಶನ್ ವಿವಾದ: ಸಂಸದೆ ಸುಮಲತಾ ಹೇಳಿದ್ದೇನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಆರೋಪ ಪ್ರಕರಣ ಮತ್ತು ನಿರ್ಮಾಪಕ ಉಮಾಪತಿ ಅವರಿಂದ ಆಸ್ತಿ ಖರೀದಿ ವಿಚಾರದ ಬಗ್ಗೆ ನಟಿ, ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿಯಾಗಿದ್ದ ಸುಮಲತಾ ಬಳಿಕ ಮಾಧ್ಯಮದ ಜೊತೆ ಮಾತನಾಡಿ, 'ದರ್ಶನ್ ಪ್ರಕರಣದ ಬಗ್ಗೆ ನಾನು ಈಗ ಮಾತನಾಡಲ್ಲ. ನಾನು ಈಗ ಏನೆ ಹೇಳಿದ್ರು ಬೇರೆ ದಾರಿಯಲ್ಲಿ ಹೋಗುತ್ತೆ' ಎಂದಿದ್ದಾರೆ.

  ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ವೈಮನಸ್ಸಿಗೆ ಆಸ್ತಿ ಖರೀದಿ ವಿಚಾರ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಆಸ್ತಿಯನ್ನು ನಿರ್ಮಾಪಕ ಉಮಾಪತಿ ಖರೀದಿ ಮಾಡಿದ್ದರು. ಈ ಆಸ್ತಿಯನ್ನು ದರ್ಶನ್ ಕೇಳಿದ್ದರು. ಆದರೆ ಉಮಾಪತಿ ಈ ಆಸ್ತಿ ಕೊಡಲು ನಿರಾಕರಿಸಿದ್ದರು. ಇದೇ ವಿಚಾರ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿತ್ತು ಎನ್ನುವ ಮಾತು ಚರ್ಚೆಯಾಗುತ್ತಿದೆ.

  ಆಸ್ತಿ ಖರೀದಿ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಸುಮಲತಾ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನು ಹಲ್ಲೆ ಪ್ರಕರಣದ ಬಗ್ಗೆ ಮಾತನಾಡಿ, "ಪೊಲೀಸ್ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲಿ ಬಳಿಕ ಮಾತನಾಡುತ್ತೇನೆ" ಎಂದಿದ್ದಾರೆ.

  ಆಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿ, "ನಾನು ಯಾವ ಆಡಿಯೋವನ್ನು ಕೇಳಿಸಿಕೊಂಡಿಲ್ಲ. ನಾನು ನನ್ನ ಕೆಲಸದಲ್ಲಿ ಬ್ಯುಸಿ ಇದ್ದೀನಿ" ಎಂದಿದ್ದಾರೆ.

  ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada

  ಸದ್ಯ ದರ್ಶನ್ ಹಲ್ಲೆ ಪ್ರಕರಣ ಮತ್ತು 25 ಕೋಟಿ ವಂಚನೆ ಯತ್ನ ಎರಡು ಪ್ರಕರಣಗಳು ಪೊಲೀಸ್ ತನಿಖೆಯಲ್ಲಿದೆ. ಸತ್ಯ ಯಾವಾಗ ಹೊರಬೀಳಲಿದೆ, ಈ ಗೊಂದಲ, ವಿವಾದಗಳಿಗೆ ಯಾವಾಗ ತೆರೆಬೀಳುತ್ತೆ ಎಂದು ಕಾದುನೋಡಬೇಕು.

  English summary
  Actress, MP Sumalatha reaction to Actor Darshan Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X