»   » ಮತ್ತೆ ತೆರೆ ಮೇಲೆ ಬೆಳದಿಂಗಳ ಬಾಲೆ ಸುಮನ್ ನಗರ್ಕರ್

ಮತ್ತೆ ತೆರೆ ಮೇಲೆ ಬೆಳದಿಂಗಳ ಬಾಲೆ ಸುಮನ್ ನಗರ್ಕರ್

Posted By:
Subscribe to Filmibeat Kannada

'ಹೂಮಳೆ', 'ನಮ್ಮೂರ ಮಂದಾರ ಹೂವೆ', 'ನಿಷ್ಕರ್ಷ', 'ಬೆಳದಿಂಗಳ ಬಾಲೆ' ಚಿತ್ರಗಳಲ್ಲಿ ಮಿಂಚಿದ್ದ ನಟಿ ಸುಮನ್ ನಗರ್ಕರ್ ಮತ್ತೆ ಬಂದಿದ್ದಾರೆ. ಸಾಕಷ್ಟು ದಿನಗಳ ನಂತರ ಸುಮನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

'ಊರ್ವಿ' ಸಿನಿಮಾ ಮಾಡಿ ವಿಭಿನ್ನ ನಿರ್ದೇಶಕರ ಸಾಲಿನಲ್ಲಿ ನಿಂತ ನಿರ್ದೇಶಕ ಪ್ರದೀಪ್ ವರ್ಮಾ ಡೈರೆಕ್ಟ್ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಸುಮನ್ ನಗರ್ಕರ್ ಆಕ್ಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಬ್ರಾಹ್ಮಿ' ಅಂತ ಟೈಟಲ್ ಫಿಕ್ಸ್ ಮಾಡಿದ್ದು ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

Suman Ranganath plays the heroine in Brahmi movie

ಮಹಿಳಾ ಪ್ರಧಾನ ಸಿನಿಮಾವನ್ನ ಡೈರೆಕ್ಟ್ ಮಾಡಿದ್ದ ನಿರ್ದೇಶಕರು ಮತ್ತೊಂದು ವಿಭಿನ್ನ ಕಥೆಯನ್ನ ಕನ್ನಡ ಪ್ರೇಕ್ಷಕರ ಮುಂದೆ ತರಲು ಮುಂದಾಗಿದ್ದಾರೆ. ಚಿತ್ರದಲ್ಲಿ ಮತ್ತೊಂದು ಮುಖ್ಯಪಾತ್ರಕ್ಕಾಗಿ ನಾಯಕ ನಟಿಯ ಹುಡುಕಾಟ ಪ್ರಾರಂಭ ಮಾಡಿದ್ದು ಸಿನಿಮಾದಲ್ಲಿ ಯಾರೆಲ್ಲಾ ಕೆಲಸ ಮಾಡುತ್ತಾರೆ ಎನ್ನುವುದನ್ನ ಮಾತ್ರ ತಿಳಿಸಿಲ್ಲ.

Suman Ranganath plays the heroine in Brahmi movie

'ಬ್ರಾಹ್ಮಿ' ಅನ್ನೋ ಟೈಟಲ್ ಫಿಕ್ಸ್ ಮಾಡಿ ಶೀರ್ಷಿಕೆಯನ್ನ ಬಿಡುಗಡೆ ಮಾಡಿರುವ ಪ್ರದೀಪ್ ವರ್ಮಾ ಆದಷ್ಟು ಬೇಗ ಚಿತ್ರದ ಬಗ್ಗೆ ಮಾಹಿತಿಗಳನ್ನ ಹೊರ ಹಾಕಲಿದ್ದಾರೆ. ಒಟ್ಟಾರೆ ತೆರೆ ಮೇಲೆ ಹೆಣ್ಣು ಮಕ್ಕಳ ಕಥೆಯನ್ನ ಎಳೆ ಎಳೆಯಲ್ಲಿ ಬಿಡಿಸಿಟ್ಟಿದ್ದ ನಿರ್ದೇಶಕರು ಈ ಬಾರಿಯೂ ಹೊಸ ರೀತಿಯ ಚಿತ್ರವನ್ನ ಪ್ರೇಕ್ಷಕರಿಗೆ ನೀಡುವುದು ಕನ್ಫರ್ಮ್ ಆಗಿದೆ.

English summary
Kannada actress sumannagarkar plays the heroine in Brahmi movie ,Pradeep Verma directing Brahmi movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada