For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಸೂರ್ಯಾ ಶರೀರಕ್ಕೆ ಶಾರೀರವಾದ ಸುಮಂತ್ ಭಟ್

  |

  'ಸೂರರೈ ಪೊಟ್ರು' ತಮಿಳಿನ ಈ ಸಿನಿಮಾ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಎಲ್ಲರೂ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.

  ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿಸಿದ 'ಸೂರರೈ ಪೊಟ್ರು' ಸಿನಿಮಾ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿಬರುತ್ತಿವೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ ಈ ಸಿನಿಮಾ.

  ಸಿನಿಮಾ ನೋಡಿದವರು, ಕನ್ನಡದಲ್ಲಿ ಡಬ್ಬಿಂಗ್ ಆಗಿರುವ ಸಿನಿಮಾ ಸಹ ಚೆನ್ನಾಗಿಯೇ ಇದೆ ಎನ್ನುತ್ತಿದ್ದಾರೆ. ಅದರಲ್ಲಿಯೂ ಸ್ವತಃ ಸೂರ್ಯಾ ಅವರೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಸೂರರೈ ಪೊಟ್ರು ನ ಕನ್ನಡ ಡಬ್ಬಿಂಗ್‌ಗೆ ಸೂರ್ಯಾ ಡಬ್ಬಿಂಗ್ ಮಾಡಿಲ್ಲ.

  ಸೂರ್ಯಾಗೆ ಧ್ವನಿ ನೀಡಿರುವುದು ನಟ ಸುಮಂತ್ ಭಟ್

  ಸೂರ್ಯಾಗೆ ಧ್ವನಿ ನೀಡಿರುವುದು ನಟ ಸುಮಂತ್ ಭಟ್

  ಸೂರರೈ ಪೊಟ್ರು ಕನ್ನಡ ಡಬ್ಬಿಂಗ್‌ ಸಿನಿಮಾದಲ್ಲಿ ಸೂರ್ಯಾಗೆ ಧ್ವನಿ ನೀಡಿರುವುದು ಕನ್ನಡದ ನಟ ಸುಮಂತ್ ಭಟ್. ಹೌದು, ಕನ್ನಡದ ಸುಮಂತ್ ಭಟ್, ನಟ ಸೂರ್ಯಾ ಪಾತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಸೂರ್ಯಾ ರ ಕನ್ನಡದ ಧ್ವನಿಯನ್ನು ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ.

  ಟ್ರೇಲರ್ ಬಿಡುಗಡೆ ಆಗಿದ್ದಾಗ ಬರೆದುಕೊಂಡಿದ್ದ ಸುಮಂತ್

  ಟ್ರೇಲರ್ ಬಿಡುಗಡೆ ಆಗಿದ್ದಾಗ ಬರೆದುಕೊಂಡಿದ್ದ ಸುಮಂತ್

  ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ನಟ ಸುಮಂತ್ ಭಟ್, 'ಇದೆಲ್ಲಾ ಕೊರೊನಾ ಪ್ರಾರಂಭವಾಗುವ ಮುಂಚೆ ಪ್ರಾರಂಭವಾಯಿತು, ನನ್ನ ಹಿತೈಷಿಯೊಬ್ಬರು ಕರೆ ಮಾಡಿ, ನೀನು ನಟ ಸೂರ್ಯಾ ಗೆ ಕನ್ನಡದಲ್ಲಿ ಡಬ್ ಮಾಡಬೇಕು ಎಂದರು' ಅವರಿಂದಲೇ ಇದು ಸಾಧ್ಯವಾಗಿದ್ದು ಎಂದಿದ್ದಾರೆ ಸುಮಂತ್.

  ಚೆನ್ನೈಗೆ ತೆರಳಿ ಡಬ್ಬಿಂಗ್ ಮಾಡಿದ ಸುಮಂತ್

  ಚೆನ್ನೈಗೆ ತೆರಳಿ ಡಬ್ಬಿಂಗ್ ಮಾಡಿದ ಸುಮಂತ್

  ಅಂತೆಯೇ ನಾನು ಚೆನ್ನೈಗೆ ತೆರಳಿ ಸೂರ್ಯಾ ರವರ ಸೂರರೈ ಪೊಟ್ರು ಸಿನಿಮಾಗೆ ಡಬ್ ಮಾಡಿದೆ, ಅಬ್ಬಾ ಎಂಥಬಾ ಅದ್ಭುತವಾದ ನಟನೆ ಅವರದ್ದು, ಇಂಥಹಾ ಪ್ರೇರಣಾಧಾಯಕ ಸಿನಿಮಾವನ್ನು ನಾನು ನೋಡಿಲ್ಲ' ಎಂದಿದ್ದಾರೆ ಸುಮಂತ್ ಭಟ್.

  ಕಿಶನ್ ಕಥೆ ಕೇಳಿ ತುಂಬಾ ಅತ್ತಿದ್ರಂತೆ ರವಿ ಬೆಳಗೆರೆ | Filmibeat Kannada
  ಭಾವನೆಗಳಿಗೆ ತಕ್ಕಂತೆ ಧ್ವನಿ ಏರಿಳಿತ

  ಭಾವನೆಗಳಿಗೆ ತಕ್ಕಂತೆ ಧ್ವನಿ ಏರಿಳಿತ

  ಸುಮಂತ್ ಭಟ್ ಕೆಲವು ಯೂಟ್ಯೂಬ್‌ ಕಂಟೆಂಟ್‌ಗಳಲ್ಲಿ, ಟಿವಿಗಳಲ್ಲಿ ನಟನೆ ಮಾಡಿದ್ದಾರೆ. ಅವರ ಧ್ವನಿ ಬಹುತೇಕ ಸೂರ್ಯಾ ಅವರ ಧ್ವನಿಯನ್ನು ಹೋಲುತ್ತದೆ. ಸೂರರೈ ಪೊಟ್ರು ಕನ್ನಡ ಅವತರಣಿಕೆಯಲ್ಲಿ, ಸೂರ್ಯಾ ಅವರ ಭಾವ ಏರಿಳಿತಗಳನ್ನು ಸರಿಯಾಗಿ ಗುರುತಿಸಿ ಅಂತೆಯೇ ಧ್ವನಿ ನೀಡಿದ್ದಾರೆ ಸುಮಂತ್ ಭಟ್.

  English summary
  Actor Sumanth Bhat gave voice to Suriya in Soorarai Potru Kannada version. People loving his voice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X