»   » ಮಂಗಳೂರು ಹುಡುಗ, ಮುಂಬೈ ಬೆಡಗಿಯ 'ಸೂಂಬೆ'

ಮಂಗಳೂರು ಹುಡುಗ, ಮುಂಬೈ ಬೆಡಗಿಯ 'ಸೂಂಬೆ'

Posted By:
Subscribe to Filmibeat Kannada

ಮಂಗಳೂರು : ಶ್ರೀ ಯಜ್ಞಾಧ್ಯ ಪ್ರೊಡಕ್ಷನ್‍ನಡಿ ನಿರ್ಮಾಣಗೊಂಡಿರುವ ಸೂಂಬೆ ತುಳು ಚಲನಚಿತ್ರ ಮಾರ್ಚ್ 13ರಂದು ಬಿಡುಗಡೆಗೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 12 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸಾಯಿಕೃಷ್ಣ ಕುಡ್ಲ ಹೇಳಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರಿನ ಹುಡುಗ ರಾಹುಲ್ ಮತ್ತು ಮುಂಬಯಿ ಬೆಡಗಿ ಶ್ರೀತಮ ಮುಖರ್ಜಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರ ವಿಭಿನ್ನ ಪ್ರೇಮಕಥೆಯ ಹೂರಣ ಹೊಂದಿದ್ದು, ಸಂಪೂರ್ಣ ಹಾಸ್ಯಮಯವಾಗಿದೆ. ತುಳುನಾಡಿನ ಖ್ಯಾತ ನಟರು ಚಿತ್ರದಲ್ಲಿ ಪಾತ್ರನಿರ್ವಹಿಸಿದ್ದು, ವಿನೂತನ ಪ್ರಯೋಗವನ್ನು ಮಾಡಿದೆ ಎಂದಿದ್ದಾರೆ. [ಹೊಸ ಇತಿಹಾಸ ಬರೆದ ತುಳು ಚಿತ್ರ ಚಾಲಿ ಪೋಲಿಲು]

Sumbe, a romantic Tulu movie on screen

ತುಳುನಾಡಿನ ಹಾಸ್ಯನಟ ದಿಗಜರಾದ ದೇವದಾಸ್ ಕಾಪಿಕಾಡ್, ನವೀಡ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಮತ್ತು ಕನ್ನಡ ಚಿತ್ರರಂಗದ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರಾದ ಕಿಶೋರ್ ಕೊಟ್ಟಾರಿ, ಶ್ವೇತಾ ಕಿಶೋರ್, ಹಾಸ್ಯನಟ ಭೋಜರಾಜ್ ವಾಮಂಜೂರು, ನಾಯಕ ನಟ ರಾಹುಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
English summary
Sumbe, a romantic Tulu movie is hitting screen on March 13 in Dakshina Kannada and Udupi district in 12 theatres. Sumbe or Soombe is a romantic movie with Mangalore boy and Mumbai girl in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada