For Quick Alerts
  ALLOW NOTIFICATIONS  
  For Daily Alerts

  ಮೊಮ್ಮಗನಿಗೆ ಮುದ್ದಾದ ಹೆಸರಿಟ್ಟ ಸುಂದರ್ ರಾಜ್; ಪ್ರೀತಿಯಿಂದ ಏನಂತ ಕರೆಯುತ್ತಾರೆ ನೋಡಿ

  |

  ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮುದ್ದಾದ ಮಗು ಅವರ ಕುಟುಂಬಕ್ಕೆ ಸಂತೋಷ ಹೊತ್ತುತಂದಿದ್ದಾನೆ. ಮೇಘನಾ ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಚಿರು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಮತ್ತು ರಾಜ್ ಕುಟುಂಬಕ್ಕೆ ಈ ಮಗು ಹೊಸ ಬೆಳಕು ಮೂಡಿಸಿದೆ.

  Junior Chiru ಹೊಸ ಹೆಸರಿಟ್ಟ Meghna Raj | Chiru Sarja Son Name | Filmibeat Kannada

  ಮೇಘನಾ ರಾಜ್ ಮುದ್ದು ಮಗನಿಗೆ ಏನು ಹೆಸರಿಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯ ಎಲ್ಲರೂ ಜೂ.ಚಿರು ಅಂತನೆ ಕರೆಯುತ್ತಿದ್ದಾರೆ. ಆದರೆ ಮೇಘನಾ ತಂದೆ ಸುಂದರ್ ರಾಜ್ ಮೊಮ್ಮಗನಿಗೆ ಮುದ್ದಾದ ಹೆಸರು ಇಟ್ಟಿದ್ದಾರೆ. ಈ ಬಗ್ಗೆ ಸುಂದರ್ ರಾಜ್ ಮಾಧ್ಯಮದವರ ಜೊತೆ ಮಾತನಾಡುವಾಗ ಬಹಿರಂಗ ಪಡಿಸಿದ್ದಾರೆ. ಮೊಮ್ಮಗನಿಗೆ ಸುಂದರ್ ರಾಜ್ ಪ್ರೀತಿಯಿಂದ 'ಚಿಂಟು' ಎಂದು ಕರೆಯುತ್ತಾರಂತೆ.

  ಮೇಘನಾ ರಾಜ್ ಹಾಗೂ ಮೊಮ್ಮಗನ ಬಗ್ಗೆ ಸುಂದರ್ ರಾಜ್ ಭಾವುಕ ಮಾತುಗಳು

  'ನಾನು ಚಿಂಟು ಎಂದು ಕರೆಯುತ್ತೇನೆ. ಯಾಕೆಂದರೆ ಅವನು ನಮ್ಮೆಲ್ಲರ ಚಿಂತೆ ದೂರ ಮಾಡಲು ಬಂದವನು. ಅವನ ಆಗಮನದಿಂದ ನಮಗೆಲ್ಲ ಖುಷಿ ಆಗಿದೆ' ಎಂದು ಅವರು ಹೇಳಿದ್ದಾರೆ. ಇದೇ ಸಮಯದಲ್ಲಿ

  ನಾಮಕರಣದ ಕಾರ್ಯಕ್ರಮದ ಬಗ್ಗೆಯೂ ಮಾತನಾಡಿದ್ದಾರೆ. ಅದ್ದೂರಿಯಾಗಿ ಮೊಮ್ಮಗನ ನಾಮಕರಣ ಮಾಡುವುದಾಗಿ ಸುಂದರ್ ರಾಜ್ ಹೇಳಿದ್ದಾರೆ.

  ಇನ್ನು ಮೇಘನಾ ರಾಜ್ ಮುದ್ದು ಮಗನಿಗೆ ಪಾಪು ಎಂದು ಕರೆಯುತ್ತಾರಂತೆ. ಸದ್ಯ ಜೂ.ಚಿರು, ಚಿಂಟು, ಪಾಪು ಎನ್ನುವ ಹೆಸರಿನ ಮೂಲಕ ಮೇಘನಾ ಮಗ ಖ್ಯಾತಿಗಳಿಸಿದ್ದಾನೆ. ಆದರೆ ಚಿರಂಜೀವಿ ಸರ್ಜಾ ಪುತ್ರನಿಗೆ ಕುಟುಂಬದರು ಏನು ಹೆಸರು ಇಡಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

  English summary
  Sundar raj shared his grandson nickname. He calls him Chintu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X